ನೀರೂರಿಸುವ ಬಸಳೆ ಗಸಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಬೇಕಾಗುವ ಸಾಮಗ್ರಿಗಳು:

ಶುದ್ಧಗೊಳಿಸಿದ ಬಸಳೆ ಸೊಪ್ಪು
ತೆಂಗಿನ ಕಾಯಿ
ಒಣ ಮೆಣಸು
ಈರುಳ್ಳಿ, ಸಾಸಿವೆ,
ಹುಣಸೆ ಹುಳಿ
ಉಪ್ಪು, ಕೊತ್ತಂಬರಿ ಕಾಳು.

ಮಾಡುವ ವಿಧಾನ:

ಶುದ್ಧಗೊಳಿಸಿದ ಬಸಳೆ ಸೊಪ್ಪನ್ನು ತುಂಡರಿಸಿದ ಈರುಳ್ಳಿಯನ್ನು ಪಾತ್ರೆಯಲ್ಲಿ ನೀರು ಹಾಕಿ ಬೇಯಲು ಇಡಿ. ಕೆಂಪು ಮೆಣಸು, ಹುಣಸೆ ಹುಳಿ, ಕೊತ್ತಂಬರಿ, ಒಣಮೆಣಸು , ಎರಡು ಸ್ಪೂನ್ ಎಣ್ಣೆ ಸೇರಿಸಿ ಫ್ರೈ ಮಾಡಿ ಕಾಯಿ ತುರಿಯೊಂದಿಗೆ ಮಿಕ್ಸಿಗೆ ಹಾಕಿ ರುಬ್ಬಿಟ್ಟುಕೊಳ್ಳಿ. ಚೆನ್ನಾಗಿ ಬಸಳೆ ಹಾಗೂ ಈರುಳ್ಳಿ ಬೆಂದ ನಂತರ ರುಬ್ಬಿದ ಮಸಾಲೆಯನ್ನು ಸೇರಿಸಿ ಕುದಿಸಿರಿ. ರುಚಿಗೆ ಬೇಕಾದಷ್ಟು ಉಪ್ಪು, ಒಂದು ತುಂಡು ಬೆಲ್ಲ ಸೇರಿಸಿ ಕುದಿ ಬರಿಸಿ. ಬೆಳ್ಳುಳ್ಳಿ, ಇಂಗು ಸೇರಿಸಿ ಒಗ್ಗರಣೆ ನೀಡಿ. ಬಸಳೆ ಗಸಿ ಊಟಕ್ಕೆ ರುಚಿ!

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!