Tuesday, June 28, 2022

Latest Posts

ನಾಳೆ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ: ಸಮಗ್ರ ಮಾಹಿತಿ ಇಲ್ಲಿದೆ

ಹೊಸ ದಿಗಂತ ವರದಿ, ಬಸವಕಲ್ಯಾಣ:

ನಾಳೆ ಏಪ್ರೀಲ್ 17ರಂದು ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ನಡೆಯಲ್ಲಿದ್ದು, ಜಿಲ್ಲಾದ್ಯಂತ 326 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ. ಈ ಬಗ್ಗೆ ಪೊಲೀಸರು ಬಿಗಿ ಭದ್ರತೆ ಮಾಡಲಾಗಿದೆ.

 • ಏಪ್ರಿಲ್ 17ರಂದು ಬೆಳಗ್ಗೆ 7ರಿಂದ ಸಂಜೆ 7ರವರೆಗೆ ಹೆಚ್ಚುವರಿ 62 ಮತಗಟ್ಟೆಗಳು ಸೇರಿದಂತೆ ಒಟ್ಟು 326 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ.
 • 326 ಮತಗಟ್ಟೆಗಳ ಪೈಕಿ 95 ಸೂಕ್ಷ್ಮ ಮತಗಟ್ಟೆಗಳೆಂದು ಮತ್ತು 231 ಮತಗಟ್ಟೆಗಳು ಸಾಮಾನ್ಯ ಮತಗಟ್ಟೆಗಳೆಂದು ಗುರುತಿಸಲಾಗಿದೆ.
 • 1,14,794 ಮಹಿಳಾ ಮತದಾರರು, 1,24,984 ಪುರುಷ ಮತದಾರರು ಮತ್ತು ಇತರೇ ನಾಲ್ಕು ಜನರು ಸೇರಿ ಒಟ್ಟು 2,39,782 ಮತದಾರರು ಇದ್ದಾರೆ.
 • 26 ಸೇಕ್ಟರ್ ಆಫೀಸರ್ಸ್ ಒಳಗೊಂಡು, ಮತಗಟ್ಟೆ ಅಧಿಕಾರಿ, ಸಹಾಯಕ ಮತಗಟ್ಟೆ ಅಧಿಕಾರಿ, ಪೊಲೀಂಗ್ ಆಫೀಸರ್ ಮತ್ತು ಇನ್ನೀತರ ಸೇರಿದಂತೆ ಚುನಾವಣಾ ಕರ್ತವ್ಯದಲ್ಲಿ ಒಟ್ಟು 1568 ಜನ ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗಿಯಾಗಿದ್ದಾರೆ.
 • ಬಸವಕಲ್ಯಾಣ ಉಪ ಚುನಾವಣೆಯಲ್ಲಿ 2163 ಮಹಿಳೆಯರು ಮತ್ತು 1384 ಪುರುಷರು ಸೇರಿ ಒಟ್ಟು 3547 ಯಂಗ್ ಓರ‍್ಸ್ ತಮ್ಮ ಮತ ಹಕ್ಕನ್ನು ಚಲಾಯಿಸಲಿದ್ದಾರೆ.
 • ಬಸವಕಲ್ಯಾಣ ಕ್ಷೇತ್ರದಲ್ಲಿ 196 ಮಹಿಳೆಯರು, ಮೂವರು ಪುರುಷರು ಸೇರಿ ಒಟ್ಟು 199 ಜನ ಸರ್ವೀಸ್ ಓಟರ್ಸ ಇದ್ದಾರೆ.
 • ಮತದಾನ ದಿನದಂದು ಮತಗಟ್ಟೆಗಳಲ್ಲಿ ಕಾರ್ಯನಿರ್ವಹಿಸಲು ಮತಗಟ್ಟೆ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಬಸವಕಲ್ಯಾಣದ ತೇರು ಮೈದಾನದಲ್ಲಿರುವ ಮಸ್ಟರಿಂಗ್ ಕೇಂದ್ರಕ್ಕೆ ಕರೆದೊಯ್ಯಲು ಬೀದರ ಹಳೆಯ ಬಸ್ ನಿಲ್ದಾಣದಿಂದ ಒಟ್ಟು 44 ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ.
 • ಈ ಚುನಾವಣೆಗೆ 457 ಸಿಯು ಮತ್ತು 457 ಬಿಯು ಮತ್ತು 489 ವಿವಿಪ್ಯಾಟ್ ಬಳಸಲಾಗುತ್ತಿದೆ. ಹೆಚ್ಚುವರಿಯಾಗಿ ಶೇ.50ರಷ್ಟು ವಿವಿಪ್ಯಾಟಗಳನ್ನು, ತಲಾ ಶೇ.40ರಷ್ಟು ಬಿಯು ಮತ್ತು ಸಿಯುಗಳ ಲಭ್ಯತೆಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
 • 47 ಬಸವಕಲ್ಯಾಣ ಉಪ ಚುನಾವಣೆಗಾಗಿ 20 ಪಿಎಸ್‌ಐಗಳು, 5 ಸಿಪಿಐ, 2 ಡಿಎಸ್‌ಪಿ, 50 ಹೋಮ್ ಗಾರ್ಡ್ಸ, ಪ್ಯಾರಾ ಮಿಲಿಟರಿ ಫೋರ್ಸ್, ಡಿಆರ್ ತುಕುಡಿ, 6 ಕೆಎಸ್‌ಆರ್‌ಪಿ ತುಕುಡಿ ಸೇರಿದಂತೆ ಅಂದಾಜು 1000 ಪೊಲೀಸ್ ವ್ಯವಸ್ಥೆಯನ್ನು ನಿಯೋಜನೆ ಮಾಡಲಾಗಿದೆ.
 • ಬಸವಕಲ್ಯಾಣ ತೇರು ಮೈದಾನದಲ್ಲಿರುವ ಮಸ್ಟರಿಂಗ್ ಕೇಂದ್ರದಲ್ಲಿ ಒಟ್ಟು 26 ಟೇಬಲ್‌ಗಳ ವ್ಯವಸ್ಥೆ ಮಾಡಲಾಗಿದೆ.
 • ಉಪ ಚುನಾವಣೆಯ ಒಟ್ಟು 326 ಮತಗಟ್ಟೆಗಳ ಪೈಕಿ 172 ಮತಗಟ್ಟೆಗಳಲ್ಲಿ ವಿಕಲಚೇತನರಿರುವುದನ್ನು ಗುರುತಿಸಿದ್ದು, ಇದಕ್ಕಾಗಿ ಅಗತ್ಯ ಪ್ರಮಾಣದಲ್ಲಿ ವೀಲ್ ಚೇರ್‌ಗಳ ವ್ಯವಸ್ಥೆ ಮಾಡಲಾಗಿದೆ.
 • ನಗರದ ಮತಗಟ್ಟೆ ಸಂಖ್ಯೆ 98 ಮತ್ತು ಗ್ರಾಮೀಣ ಭಾಗದ ಮತಗಟ್ಟೆ ಸಂಖ್ಯೆ 54ಗಳನ್ನು ಸಖಿ ಮತಗಟ್ಟೆಗಳನ್ನಾಗಿ ಸಿದ್ದಪಡಿಸಲಾಗಿದೆ.
 • ಒಟ್ಟು 40 ಮತಗಟ್ಟೆಗಳಲ್ಲಿ 50 ಮೈಕ್ರೋ ವೀಕ್ಷಕರನ್ನು ನೇಮಿಸಲಾಗಿದೆ.
 • 163 ಮತಗಟ್ಟೆಗಳಿಗೆ ವೆಬ್ ಕ್ಯಾಸ್ಟಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ.
 • 47 ಬಸವಕಲ್ಯಾಣ ಉಪ ಚುನಾವಣೆಗೆ ಒಟ್ಟು 24 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಈ ಪೈಕಿ ಮೂರು ನಾಮಪತ್ರಗಳು ತಿರಸ್ಕೃತವಾಗಿದ್ದವು.
 • ನಾಮಪತ್ರಗಳನ್ನು ಸಲ್ಲಿಸಿದ 14 ಅಭ್ಯರ್ಥಿಗಳ ಪೈಕಿ ಇಬ್ಬರು ಅಭ್ಯರ್ಥಿಗಳು ನಾಮಪತ್ರಗಳನ್ನು ಹಿಂಪಡೆದುಕೊಂಡಿದ್ದು ಅಂತಿಮವಾಗಿ ಕಣದಲ್ಲಿ 12 ಜನ ಅಭ್ಯರ್ಥಿಗಳಿದ್ದಾರೆ.
 • ಭಾರತೀಯ ಜನತಾ ಪಾರ್ಟಿ, ಇಂಡಿಯನ್ ನ್ಯಾಷನಲ್ ಕಾಂಗ್ರೆಸ್, ಜನತಾದಳ (ಜಾತ್ಯಾತೀತ), ಕರ್ನಾಟಕ ರಾಷ್ಟ್ರ ಸಮಿತಿ, ಶಿವಸೇನಾ, ಹಿಂದೂಸ್ತಾನ ಜನತಾ ಪಾರ್ಟಿ, ಆಲ್ ಇಂಡಿಯಾ ಮಜಲೀಸ್–ಇ- ಇತಿಹಾದುಲ್ ಮುಸ್ಲಿಮಿನ್, ಮತ್ತು ಅಖಿಲ ಭಾರತೀಯ ಮುಸ್ಲಿಂ ಲಿಗ್ (ಸೆಕ್ಯೂಲರ್) ಪಕ್ಷಗಳಿಂದ ಮತ್ತು ಸ್ವತಂತ್ರ ಅಭ್ಯರ್ಥಿಗಳಾಗಿ ನಾಲ್ವರು ಸೇರಿ ಒಟ್ಟು 12 ಅಭ್ಯರ್ಥಿಗಳು ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ.

  47 ಬಸವಕಲ್ಯಾಣ ಉಪ ಚುನಾವಣೆಗಾಗಿ ಏಪ್ರೀಲ್ 17ರಂದು ಮತದಾನ ನಡೆಯಲಿದೆ.‌ ಈ ಚುನಾವಣೆಯು ಶಾಂತಿಯುತ, ನ್ಯಾಯಸಮ್ಮತ ಮತ್ತು ಮುಕ್ತವಾಗಿ ನಡೆಯಲು ಜಿಲ್ಲಾಡಳಿತವು ಎಲ್ಲಾ ರೀತಿಯ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂದು ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್ ಅವರು ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss