spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, October 17, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಕೈಯಲ್ಲಿ ರಕ್ತದ ಕಲೆ ಇರಿಸಿಕೊಂಡು ಹೇಗೆ ನಿದ್ದೆ ಮಾಡ್ತಿದೀರಿ?: ಸಿದ್ದುಗೆ ಚಾಟಿ ಬೀಸಿದ ಸಿಎಂ ಬೊಮ್ಮಾಯಿ

- Advertisement -Nitte

ಹೊಸದಿಗಂತ ಆನ್‌ಲೈನ್ ಡೆಸ್ಕ್:

ನೈತಿಕ ಪೊಲೀಸ್ ಗಿರಿ ಬಗ್ಗೆ ಸಿಎಂ ಬೊಮ್ಮಾಯಿ ಸಮರ್ಥನೆ ಮಾಡಿಕೊಂಡಿದ್ದಾರೆಂದು ಆರೋಪಿಸಿ ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳನ್ನು ಪ್ರಶ್ನಿಸುತ್ತ ಕೆಲವು ಟ್ವೀಟ್ ಗಳನ್ನು ಮಾಡಿದ್ದರು. ಅದಕ್ಕೆ ಬೊಮ್ಮಾಯಿಯವರು ತಮ್ಮ ವೈಯಕ್ತಿಕ ಟ್ವಿಟರ್ ಖಾತೆ ಮೂಲಕ ಆಕ್ರಮಣಕಾರಿ ಉತ್ತರವನ್ನೇ ನೀಡಿದ್ದು, ಬಿಜೆಪಿ ಬೆಂಬಲಿಗರಿಂದ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಪ್ರಶಂಸೆಗೆ ಒಳಗಾಗಿದ್ದಾರೆ.

ಸಿದ್ದರಾಮಯ್ಯ ಕೇಳಿದ್ದು-

ಬೊಮ್ಮಾಯಿಯವರೇ, ನೈತಿಕ ಪೋಲೀಸ್ ಗಿರಿಯನ್ನು ಸಮರ್ಥಿಸುವ ಮೂಲಕ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದಕ್ಕೆ ನೀವು ಅಸಮರ್ಥರೆಂದು ಒಪ್ಪಿಕೊಳ್ಳುತ್ತಿದ್ದೀರಿ. ರಾಜೀನಾಮೆ ನೀಡಿ, ಕರ್ನಾಟಕವನ್ನು ಉಳಿಸಿ. ನೀವೇನು ಪೊಲೀಸ್ ಇಲಾಖೆಯನ್ನು ವಿಸರ್ಜಿಸಿ ಆರೆಸ್ಸೆಸ್ ಕೈಗೆ ಕಾನೂನು ಸುವ್ಯವಸ್ಥೆ ಕೊಡಬೇಕೆಂದಿದ್ದೀರಾ? ಜಂಗಲ್ ರಾಜ್ ಸ್ಥಾಪನೆ ಮಾಡುವುದಕ್ಕೆ ಹೊರಟಿದ್ದೀರಾ?

ಇದಕ್ಕೆ ಬಸವರಾಜ ಬೊಮ್ಮಾಯಿಯವರಿಂದ ಬಂದಿರುವ ತೀಕ್ಷ್ಮ ಉತ್ತರ-
ಜಂಗಲ್ ರಾಜ್ ಇದ್ದದ್ದು ನಿಮ್ಮ ಆಡಳಿತದಲ್ಲಿ ಸಿದ್ದರಾಮಯ್ಯನವರೇ.. ಅವತ್ತು ಹಿಂದುಗಳ ಹತ್ಯೆಗಳಿಗೆ ನಿಮ್ಮ ಆಡಳಿತ ಕಿವುಡಾಗಿತ್ತು ಮತ್ತು ಕುರುಡಾಗಿತ್ತು. ನನ್ನ ಆಳ್ವಿಕೆಯಲ್ಲಿ ಕಾನೂನು ಅದರ ಕೆಲಸ ಮಾಡುತ್ತಿದೆ.
ನೀವು ಸಿಎಂ ಆಗಿದ್ದಾಗ ಟಿಪ್ಪು ಸುಲ್ತಾನ್ ತನ್ನ ಆಡಳಿತದಲ್ಲಿ ಮಾಡಿದಂತೆ ಹಿಂದೂ ಕಾರ್ಯಕರ್ತರನ್ನು ಕೊಂದಿದ್ದೀರಿ. ನೀವು ಹಿಂದೂ ವಿರೋಧಿಗಳ ಐಕಾನ್. ನಾನು ನಿಮ್ಮಿಂದ ಆಡಳಿತದ ಬಗ್ಗೆ ಕಲಿಯುವುದು ಏನೂ ಇಲ್ಲ. ನಮ್ಮಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಪಾಲಿಸಲು ಸಮರ್ಥ ಪೊಲೀಸ್ ಪಡೆ ಇದೆ.
ಆರೆಸ್ಸೆಸ್ ರಾಷ್ಟ್ರ ನಿರ್ಮಾಣ ಮಾಡುತ್ತಿರುವ ಅತ್ಯುನ್ನತ ಸಂಘಟನೆ. ನನ್ನ ಸರ್ಕಾರ ಹಾಗೂ ಪಕ್ಷದ ಕಾರ್ಯಕರ್ತರು ಸಂವಿಧಾನದ ಪ್ರಕಾರ ನಡೆಯುತ್ತಾರೆ ವಿನಃ ಯುಪಿಎ ಕಾಲದ ಎನ್ ಎ ಸಿಯಂಥ ಸಂವಿಧಾನಬಾಹಿರ ಗುಂಪಿನ ನಿರ್ದೇಶನದ ಮೇಲಲ್ಲ. ನಿಮ್ಮ ಆಡಳಿತದಲ್ಲಿ ಎಲ್ಲೆಂದರಲ್ಲಿ ಹಿಂದುಗಳನ್ನು ಕೊಲ್ಲಲಾಯಿತಲ್ಲ… ಕೈಮೇಲೆ ಅಷ್ಟು ರಕ್ತವನ್ನಿರಿಸಿಕೊಂಡು ಅದು ಹೇಗೆ ನೆಮ್ಮದಿಯ ನಿದ್ರೆ ಮಾಡುತ್ತಿದ್ದೀರೋ ದೇವರಿಗೆ ಗೊತ್ತು.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss