ದಿಗಂತ ವರದಿ ಧಾರವಾಡ:
ತನ್ನ ಸಾವಿಗೆ ಗೃಹ ಸಚಿವರಾದ ಬಸವರಾಜ ಬೊಮ್ಮಾಯಿ ಹಾಗೂ ಡಿಜಿ-ಐಜಿಪಿ ಹಾಗೂ ಸರ್ಕಾರವೇ ಹೊಣೆ ಎಂದು ಯುವಕನೊಬ್ಬ ಡೆತ್ ನೋಟ್ ಬರೆದಿದ್ದಾನೆ.
ಧಾರವಾಡ ತಾಲೂಕಿನ ತಿಮ್ಮಾಪುರ ಗ್ರಾಮದ ಮೈಲಾರ ಸುಣಗಾರ ಎಂಬ ಯುವಕನೇ ಹೀಗೆ ಪ್ರತ ಬರೆದಿರುವ ಯುವಕ ಎಂದು ತಿಳಿದು ಬಂದಿದೆ.
ಎಕರೆ ಜಮೀನು, ತರಕಾರಿ ಮಾರುವ ಪಾಲಕರ, ಕನಸು ನನಸು ಮಾಡಲು ಸರ್ಕಾರದ ನಿಯಮಗಳು ಅಡ್ಡಿಯಾಗಿವೆ ಎಂದು ಪತ್ರದಲ್ಲಿ ಉಲ್ಲೇಖ ಮಾಡಿದ್ದಾನೆ.
ಮೂರು ಮಕ್ಕಳ ಕುಟುಂಬದಲ್ಲಿ ಈತ ಪೊಲೀಸ್ ನೌಕರಿ ಪಡೆಯಲು ಪ್ರಯತ್ನಿಸುತ್ತಲೇ ಬಂದಿದ್ದಾನೆ. ಕಳೆದ ಎರಡು ಬಾರಿ ಪೊಲೀಸ್ ಕಾನ್ಸಟೇಬಲ್ ಪರೀಕ್ಷೆ ಬರೆದ್ದಾನೆ.
ಅಲ್ಲದೇ, ಕೇವಲ ಒಂದೇ ಅಂಕದಿoದ ಅನುತ್ತೀರ್ಣ ಆಗಿದ್ದಾನೆ. ಹಾಗಂತ ಕನಸು ಬಿಟ್ಟಿಲ್ಲ. ಆದರೆ, ಆತನೀಗ ವಯೋಮಿತಿ ಸಮಸ್ಯೆ ಕಾಡತೊಡಗಿದೆ.
ಪೊಲೀಸ್ ನೇಮಕಾತಿ ವಿಳಂಬದಿoದ ಏ.25ಕ್ಕೆ ನೇಮಕಾತಿಗೆ ಬೇಕಾದ ವಯಸ್ಸು ಮುಗಿಯುತ್ತದೆ. ಅಷ್ಟರೊಳಗೆ ಪೊಲೀಸ್ ಹುದ್ದೆ ಭರ್ತಿ ಮಾಡಿಕೊಳ್ಳುವಂತೆ ವಿನಂತಿಸಿದ್ದಾನೆ.
ಒoದು ವೇಳೆ ನೇಮಕ ಮಾಡದಿದ್ದಲ್ಲಿ ನನ್ನ ಸಾವಿಗೆ ನೀವೇ ಕಾರಣವಾಗುತ್ತೀರಿ ಎಂಬ ಬಗ್ಗೆ ದು ಎಚ್ಚರಿಕೆ ನೀಡಿದ್ದಾನೆ. ಸರ್ಕಾರ ಯಾವ ನಿರ್ಣಯ ತೆಗೆದುಕೊಳ್ಳಲಿದೆ ಕಾದುನೋಡಬೇಕಿದೆ.