spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, October 17, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಕಲಬುರಗಿ ಗ್ರಾಮೀಣ ಭಾಗದ ಬಡ ವಿಧ್ಯಾರ್ಥಿಗೆ ಉಚಿತ ಲ್ಯಾಪ್ ಟಾಪ್ ನೀಡಿದ ಶಾಸಕ ಬಸವರಾಜ ಮತ್ತಿಮಡು

- Advertisement -Nitte

ಹೊಸದಿಗಂತ ವರದಿ, ಕಲಬುರಗಿ:

ಕಲಬುರಗಿ ಗ್ರಾಮೀಣ ಮತಕ್ಷೇತ್ರದ ಬೆಳಮಗಿ ಗ್ರಾಮದ ಬಡ ಕುಟುಂಬದ ವಿಶ್ವ ಎನ್ನುವ ಇಂಜಿನಿಯರಿಂಗ್ ವಿಧ್ಯಾಥಿ೯ಗೆ ಗ್ರಾಮೀಣ ಶಾಸಕ ಬಸವರಾಜ ಮತ್ತಿಮಡು ಅವರು ಉಚಿತವಾಗಿ ಲ್ಯಾಪ್ಟಾಪ್ ಕೊಡುವುದರ ಮೂಲಕ ವಿದ್ಯಾರ್ಥಿಯ ವಿದ್ಯಾಬ್ಯಾಸಕ್ಕೆ ಅನುವು ಮಾಡಿಕೊಟ್ಟಿದ್ದಾರೆ.
ಇತ್ತಿಚೆಗೆ ಎರಡು ದಿನಗಳ ಹಿಂದೆ ವಿದ್ಯಾಬ್ಯಾಸಕ್ಕೆ ಲ್ಯಾಪ್ಟಾಪ್ ಅವಶ್ಯಕತೆ ಇದೆ ಎನ್ನುವ ಮಾಹಿತಿಯನ್ನು ಶಾಸಕರ ಗಮನಕ್ಕೆ ಬಂದ ಕೂಡಲೇ ವಿದ್ಯಾರ್ಥಿಗೆ ಲ್ಯಾಪ್ ಟಾಪ್ ನೀಡಿದ್ದಾರೆ.
ಲ್ಯಾಪ್ಟಾಪ್ ಸ್ವೀಕರಿಸಿದ ನಂತರ ವಿಧ್ಯಾಥಿ೯ ವಿಶ್ವ ಮಾತನಾಡಿ, ನನ್ನ ಇಂಜಿನಿಯರಿಂಗ್ ಕೋಸ೯ ಸಲುವಾಗಿ ಶಾಸಕರ ಬಳಿ ಲ್ಯಾಪ್ಟಾಪ್ ಕೇಳಿಕೊಂಡಾಗ ತಕ್ಷಣವೇ ಸ್ಪಂಧಿಸಿ, ನನಗೆ ಆಸರೆಯಾಗಿ ವಿಧ್ಯಾಬ್ಯಾಸಕ್ಕೆ ಸಹಕರಿಸಿದ ಬಸವರಾಜ ಮತ್ತಿಮಡು ಅವರ ಕುಟುಂಬದ ಸದಸ್ಯರಿಗೆ ಧನ್ಯವಾದ ತಿಳಿಸಿದ್ದಾರೆ.
ಬಸವರಾಜ ಮತ್ತಿಮಡು ಆವರ ಧಮ೯ ಪತ್ನಿ ಜಯಶ್ರೀ ಮತ್ತಿಮಡು ಅವರು ವಿಶ್ವ ಎನ್ನುವ ವಿಧ್ಯಾಥಿ೯ಗೆ ಲ್ಯಾಪ್ಟಾಪ್ ವಿತರಣೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಆಕಾಶ ಮತ್ತಿಮಡು ಇದ್ದರು.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss