Saturday, August 13, 2022

Latest Posts

ಬಿಬಿಎಂಪಿ ಎಡವಟ್ಟು: ಕೊರೋನಾ ಪರೀಕ್ಷೆ ಮಾಡಿಸದಿದ್ರೂ ಪಾಸಿಟಿವ್ ಇದೆ ಎಂದು ಬಂತು ಮೆಸೇಜ್, ಕಾನ್ಸ್‌ಟೇಬಲ್ ಪತ್ನಿಗೆ ಶಾಕ್!

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………..

ಹೊಸದಿಗಂತ ಆನ್ ಲೈನ್ ಡೆಸ್ಕ್:

ಕೊರೋನಾ ಪರೀಕ್ಷೆಗೆ ಸಂಬಂಧಿಸಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಇಂದು ಯಡವಟ್ಟೊಂದನ್ನು ಮಾಡಿದ್ದು ಕೊವಿಡ್ ಟೆಸ್ಟ್ ಮಾಡಿಸದಿದ್ದರೂ ಪಾಸಿಟಿವ್ ಎಂದು ನಗರದ ಹೆಡ್ ಕಾನ್ಸ್‌ಟೇಬಲ್ ಓರ್ವರ ಪತ್ನಿಗೆ ಮೆಸೇಜ್ ಕಳುಹಿಸಲಾಗಿದೆ. ಇದರಿಂದ ಮಹಿಳೆ ಮೆಸೇಜ್ ನೋಡಿ ತಬ್ಬಿಬ್ಬಾಗಿದ್ದಾರೆ.
ಹೌದು, ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯ ಹೆಡ್ ಕಾನ್ಸ್‌ಟೇಬಲ್ ಓರ್ವರ ಪತ್ನಿಗೆ ಬಿಬಿಎಂಪಿ ಕಳಿಸಿದ ಮೆಸೇಜ್ ಅವರಲ್ಲಿ ಆತಂಕ ಮೂಡಿಸಿದೆ. ತಾನು ಕೊವಿಡ್ ಪರೀಕ್ಷೆ ಮಾಡಿಸಿಲ್ಲ. ಆದರೂ ‘ನಿಮಗೆ ಕೊರೋನಾ ಪಾಸಿಟಿವ್ ಬಂದಿದೆ’ ‘ಸೇಂಟ್ ಫಿಲೋಮಿನಾ ಆಸ್ಪತ್ರೆಯಲ್ಲಿ ಬೆಡ್ ಬುಕ್ ಆಗಿದೆ’. ಇದೀಗ ಆಂಬುಲೆನ್ಸ್ ಬರುತ್ತೆ ಎಂದು ಮೆಸೇಜ್ ಕಳಿಸಲಾಗಿತ್ತು. ಆಂಬುಲೆನ್ಸ್ ಚಾಲಕನ ನಂಬರ್ ಸಹ ಮೆಸೇಜ್​ನಲ್ಲಿತ್ತು. ಆದಷ್ಟು ಬೇಗ ಸಿದ್ಧರಾಗುವಂತೆಯೂ ಮೆಸೇಜ್ ಕಳುಹಿಸಲಾಗಿತ್ತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss