ಖಾಸಗಿ ಕಂಪನಿಯಿಂದ ಮರಗಳನ್ನು ಕಡಿಯುವ ʼಸರ್ವೀಸ್‌ʼ, Justdialಗೆ ಬಿಬಿಎಂಪಿ ನೊಟೀಸ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಬೆಂಗಳೂರಿನಾದ್ಯಂತ ಮರ ಕಡಿಯುವ ಮತ್ತು ಕತ್ತರಿಸುವ ಸೇವೆಗಳ ಬಗ್ಗೆ 85ಕ್ಕೂ ಹೆಚ್ಚು ಖಾಸಗಿ ಏಜೆನ್ಸಿಗಳು ಬಹಿರಂಗವಾಗಿ ಜಾಹೀರಾತು ನೀಡುತ್ತಿದ್ದು, ಬಿಬಿಎಂಪಿ ಅರಣ್ಯ ವಿಭಾಗವು ಪ್ರತಿಯೊಂದನ್ನು ಪತ್ತೆ ಹಚ್ಚಲು ಪ್ರಾರಂಭಿಸಿದೆ.

ಅಂತಹ ಯಾವುದೇ ಪ್ರಯತ್ನಗಳನ್ನು ಕೈಗೊಳ್ಳುವ ಮೊದಲು ಅರಣ್ಯ ಇಲಾಖೆಯ ಅನುಮತಿಯನ್ನು ಪಡೆಯಲು ತನ್ನ ಗ್ರಾಹಕರಿಗೆ ತಿಳಿಸುವಂತೆ ಸ್ಥಳೀಯ ಸರ್ಚ್ ಇಂಜಿನ್ Justdial ಗೆ ನೋಟಿಸ್ ನೀಡಿದೆ.

ಬಿಬಿಎಂಪಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಬಿ.ಎಲ್.ಜಿ.ಸ್ವಾಮಿ, ಕೆಲವು ಖಾಸಗಿ ಏಜೆನ್ಸಿಗಳು ಮರಗಳನ್ನು ಕಡಿಯಲು ಮುಂದಾಗುತ್ತಿರುವ ಬಗ್ಗೆ ದೂರುಗಳು ಬಂದಿದ್ದು, ಈ ಬಗ್ಗೆ ಸಂಬಂಧಪಟ್ಟ ವಲಯಗಳ ವ್ಯಾಪ್ತಿಯ ಅರಣ್ಯಾಧಿಕಾರಿಗಳ ಗಮನಕ್ಕೆ ತರುತ್ತಿಲ್ಲ. ಸಾರ್ವಜನಿಕರಿಂದ ಸೇವೆಗೆ ಹಣ ವಸೂಲಿ ಕೂಡಾ ಮಾಡುತ್ತಿದ್ದಾರೆ ಎನ್ನಲಾಗಿದೆ.

ಈ ಅಕ್ರಮವನ್ನು ಕೊನೆಗೊಳಿಸಲು, ನಾವು ಏಜೆನ್ಸಿಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಪ್ರಾರಂಭಿಸಿದ್ದೇವೆ. ಬಿಬಿಎಂಪಿ ಅರಣ್ಯ ಇಲಾಖೆ Justdial ಗೆ ಪತ್ರ ಬರೆದಿದ್ದು, ಮರ ಕಡಿಯಲು ಬಿಬಿಎಂಪಿ ಅರಣ್ಯ ವಿಭಾಗದಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿರುವ ಬಗ್ಗೆ ತನ್ನ ಗ್ರಾಹಕರನ್ನು ಪರಿಶೀಲಿಸುವಂತೆ ಸೂಚಿಸಲಾಗಿದೆ ಎಂದು ಹೇಳಿದರು.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!