ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………
ಹೊಸದಿಗಂತ ಆನ್ಲೈನ್ ಡೆಸ್ಕ್:
ಇಂಗ್ಲೆಂಡ್ ಪ್ರವಾಸಕ್ಕೆ ತೆರಳಬೇಕಿರುವ ಭಾರತೀಯ ಕ್ರಿಕೆಟಿಗರಿಗೆ ಮನೆ ಬಿಟ್ಟು ಹೊರಬರದಂತೆ ಬಿಸಿಸಿಐ ಎಚ್ಚರಿಕೆ ನೀಡಿದೆ.
ಯಾವುದೇ ಆಟಗಾರರಿಗೆ ಪಾಸಿಟಿವ್ ಬಂದರೆ ಅವರನ್ನು ತಂಡದಿಂದ ಕೈಬಿಡಲಾಗುವುದು.ಆಟಗಾರರು ಕೊರೋನಾದಿಂದ ಗುಣಮುಖರಾಗಿ ಬಂದರೆ ಮತ್ತೆ ವಿಶೇಷ ವಿಮಾನ ವ್ಯವಸ್ಥೆ ಮಾಡುವುದಿಲ್ಲ ಎಂದು ಹೇಳಿದೆ. ಜೂ.2ರಂದು ಇಂಗ್ಲೆಂಡ್ಗೆ ಹೊರಡುವ ನಿರೀಕ್ಷೆ ಇದ್ದು, ಅದಕ್ಕೂ ಮುನ್ನ ಮುಂಬೈನಲ್ಲಿ ಬಿಸಿಸಿಐನ ಬಯೋ ಬಬಲ್ನೊಳಗೆ ಆಟಗಾರರು ಪ್ರವೇಶಿಸಲಿದ್ದಾರೆ. ಕೋವಿಡ್ ಪರೀಕ್ಷೆಗೆ ಒಳಗಾಗಲಿದ್ದಾರೆ. ಅಲ್ಲಿಯವರೆಗೂ ಎಲ್ಲರೂ ಸುರಕ್ಷಿತವಾಗಿದ್ದು, ಮನೆಯಿಂದ ಹೊರಹೋಗದಿರಿ ಎಂದು ಬಿಸಿಸಿಐ ಹೇಳಿದೆ.