ಭಾವಿ ಪತಿಯನ್ನೇ ಬಂಧಿಸಿ ಸುದ್ದಿಯಾಗಿದ್ದ ಮಹಿಳಾ ಪೊಲೀಸ್​ ಅಧಿಕಾರಿ ಅರೆಸ್ಟ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಈ ಹಿಂದೆ ತನ್ನ ಭಾವಿ ಪತಿಯನ್ನೇ ಬಂಧಿಸಿ ಸುದ್ದಿಯಾಗಿದ್ದ ಅಸ್ಸಾಂ ಮಹಿಳಾ ಪೊಲೀಸ್​ ಅಧಿಕಾರಿ ಜುನ್ಮೋನಿ ರಾಭಾ ಕುರಿತು ಸುದ್ದಿ ಎಲ್ಲರಿಗೂ ತಿಳಿದಿರುತ್ತೆ. ಆದರೆ ಇದೀಗ ಆಕೆಯೇ ಜೈಲು ಸೇರಿದ್ದಾರೆ.
ಹೌದು, ಭ್ರಷ್ಟಾಚಾರ ಪ್ರಕರಣವೊಂದರಲ್ಲಿ ಜುನ್ಮೋನಿ ರಾಭಾ ಬಂಧನವಾಗಿದ್ದು, ಸೇವೆಯಿಂದಲೂ ಅಮಾನತು ಮಾಡಲಾಗಿದೆ.

ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಆಗಿದ್ದ ಜುನ್ಮೋನಿ ರಾಭಾ ಕಳೆದ ತಿಂಗಳು ವಂಚನೆ ಪ್ರಕರಣದಲ್ಲಿ ತನ್ನ ಭಾವಿ ಪತಿ ಪೊಗಾಗ್ ವಿರುದ್ಧ ಎಫ್‌ಐಆರ್ ದಾಖಲಿಸಿ , ಬಂಧಿಸಿದ್ದರು. ಇದು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿ ಲೇಡಿ ಸಿಂಗಂ ಎಂದೇ ರಾಭಾ ಫೇಮಸ್‌ ಆಗಿದ್ದರು. ಇದೀಗ ಇದೇ ಲೇಡಿ ಸಿಂಗಂ ಭ್ರಷ್ಟಾಚಾರ ಆರೋಪದಲ್ಲಿ ಅರೆಸ್ಟ್​ ಆಗಿದ್ದಾರೆ.

ಮಜುಲಿಯಲ್ಲಿ ಕರ್ತವ್ಯದಲ್ಲಿದ್ದಾಗ ರಾಭಾ ತನ್ನ ಭಾವಿ ಪತಿಯೊಂದಿಗೆ ಸೇರಿ ಹಣಕಾಸು ವ್ಯವಹಾರದಲ್ಲಿ ಭಾಗಿಯಾಗಿ ವಂಚಿಸಿದ್ದಾರೆ ಎಂದು ಇಬ್ಬರು ಗುತ್ತಿಗೆದಾರರು ದೂರು ನೀಡಿದ್ದರು. ಹೀಗಾಗಿ ಪ್ರಸ್ತುತ ಕಲಿಯಾಬೋರ್ ಪೊಲೀಸ್ ಠಾಣೆಯಲ್ಲಿ ಎಸ್‌ಐ ಆಗಿದ್ದ ರಾಭಾ ಅವರನ್ನು ಸತತ ಎರಡು ದಿನಗಳ ಕಾಲ ವಿಚಾರಣೆ ನಡೆಸಿ ಬಳಿಕ ಬಂಧಿಸಲಾಗಿದೆ. ಸದ್ಯ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಆರೋಪಿ ಎಸ್​ಐ ಅವರನ್ನು ಒಪ್ಪಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!