ಹೋಟೆಲ್ಗೆ ಹೋದ ಪುಟ್ಟ ಒಂದು ಪ್ಲೇಟ್ ಪೂರಿಗೆ ಎಷ್ಟಾಗತ್ತೆ ಎಂದು ವೇಟರ್ನ್ನ ಕೇಳಿದ. 40 ರೂಪಾಯಿ ಎಂದು ವೇಟರ್ ಹೇಳಿದ. ಪುಟ್ಟನಿಗೆ ಪೂರಿ ಫೇವರೆಟ್ ಆಗಿತ್ತು. ಅದನ್ನು ತಿನ್ನೋಕಂತಲೇ ಹೊಟೇಲ್ಗೆ ಬಂದಿದ್ದ.
ಹೌದಾ, ಒಂದು ಜಾಮೂನ್ಗೆ ಎಷ್ಟು? ಎಂದು ಪುಟ್ಟ ಕೇಳಿದ. ಕಿರಿಕಿರಿಯಿಂದಲೇ ವೇಟರ್ 20 ರೂಪಾಯಿ, ಕೊಡ್ಲಾ? ಎಂದು ಕೇಳಿದ.
ಒಂದ್ ನಿಮಿಷ ಅಂಕಲ್,
ಒಂದು ಪ್ಲೇಟ್ ಇಡ್ಲಿಗೆ ಎಷ್ಟು ಎಂದು ಪುಟ್ಟ ಮತ್ತೆ ಕೇಳಿದ.
ಹೋಟೆಲ್ನಲ್ಲಿ ತುಂಬಾನೇ ರಶ್ ಇತ್ತು. ವೇಟರ್ ಈಗಾಗಲೇ ತಾಳ್ಮೆ ಕಳೆದುಕೊಂಡಿದ್ದ. ನಿಜ್ವಾಗ್ಲೂ ನಿನ್ ಹತ್ರ ದುಡ್ ಇದಿಯಾ? ಸುಮ್ಮನೆ ಕೇಳ್ತಾ ಇದೀಯಾ? ಎದ್ದು ಹೋಗು ನಂಗೆ ಇನ್ನೂ ಬೇರೆ ಕಸ್ಟಮರ್ಸ್ ಇದ್ದಾರೆ ಅಂತ ವೇಟರ್ ಜೋರು ಮಾಡಿದ.
ವೇಟರ್ ಗದರಿದ್ದಕ್ಕೆ ಪುಟ್ಟ ಹೆದರಿದ್ದ. ತಡವರಿಸುತ್ತಲೇ ಒಂದು ಪ್ಲೇಟ್ ಇಡ್ಲಿ ಕೊಡಿ ಅಂಕಲ್ ಎಂದು ಹೇಳಿದ.
ಇಡ್ಲಿ ತಿಂದು, ಕೈ ತೊಳೆದು ಪುಟ್ಟ ಎದ್ದು ಹೋದ. ವೇಟರ್ ತಟ್ಟೆ ಕ್ಲೀನ್ ಮಾಡಲು ಬಂದಾಗ ಟೇಬಲ್ ನೋಡಿ ಆಶ್ಚರ್ಯಪಟ್ಟ.
ಪುಟ್ಟ ’20ರೂಪಾಯಿ ವೇಟರ್ ಅಂಕಲ್ಗೆ’ ಎಂದು ಬರೆದು ಇಟ್ಟು ಹೋಗಿದ್ದ.
ಯಾರನ್ನೂ ಜಡ್ಜ್ ಮಾಡಬೇಡಿ. ನೀವೆಷ್ಟೇ ಬ್ಯುಸಿ ಇರಲಿ, ನಿಮ್ಮ ಜೀವನದಲ್ಲಿ ಕಷ್ಟ ಇರಲಿ. ಇನ್ನೊಬ್ಬರನ್ನು ಗೌರವದಿಂದ ಕಾಣಬೇಕು. ಅವರ ಜೀವನದಲ್ಲಿ ಏನಾಗುತ್ತಿದೆಯೋ ನಮಗೇನು ಗೊತ್ತು? ನಗುತ್ತಾ ಮಾತನಾಡಿಸಿದರೆ ಕಳೆದುಕೊಳ್ಳೋದಾದ್ರೂ ಏನು ಅಲ್ವಾ?