Saturday, June 25, 2022

Latest Posts

ಎಂಪಿ ಆಗಿದ್ರೂ ಐಪಿಎಲ್ ಯಾಕೆ?: ಖಡಕ್ ಉತ್ತರ ಕೊಟ್ಟ ಗೌತಮ್ ಗಂಭೀರ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ಗೌತಮ್ ಗಂಭೀರ್ , ಕ್ರಿಕೆಟ್ ನಿಂದ ನಿವೃತ್ತರಾದ ಬಳಿಕ ರಾಜಕೀಯದಲ್ಲಿ ತಮ್ಮ ಹೊಸ ಅದ್ಯಾಯ ಸುರು ಮಾಡಿದ್ದು ಎಲ್ಲರಿಗೂ ತಿಳಿದೇ ಇದೆ.

ರಾಜಕೀಯದಲ್ಲಿದ್ದರೂ ಗಂಭೀರ್ ಕ್ರಿಕೆಟ್ ನೊಂದಿಗೆ ತಮ್ಮ ನಂಟನ್ನು ಇಂದಿಗೂ ಮುಂದುವರಿಸಿಕೊಂಡಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಕಾಮೆಂಟೇಟರ್ ಆಗಿ ಹಾಗೂ ಮೆಂಟರ್ ಆಗಿ ಕಾರ್ಯ ನಿವರ್ಹಿಸುತ್ತಿದ್ದಾರೆ.

ಇತ್ತ ಸಂಸದರಾಗಿದ್ದರೂ, ಐಪಿಎಲ್ ಮತ್ತು ಕ್ರಿಕೆಟ್ ವಿಶ್ಲೇಷಕರಾಗಿ ಕಾರ್ಯನಿರ್ವಹಿಸುತ್ತಿರುವ ಗಂಭೀರ್ ಗೆ ಪ್ರಶ್ನೆ ಎದುರಾದಾಗಒಂದು ಎದುರಾಗಿದ್ದುಮ್ ಅದಕ್ಕೆ ತಮ್ಮದೇ ಶೈಲಿ ಯಲ್ಲಿ ಉತ್ತರ ನೀಡಿದ್ದಾರೆ.

ಗೌತಮ್ ಗಂಭೀರ್, ಪೂರ್ವ ಡೆಲ್ಲಿ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದರಾಗಿದ್ದಾರೆ. ಅವರು, ಗಾಂಧಿನಗರದಲ್ಲಿಜನ್ ರಸೋಯಿ ಎನ್ನುವಂಥ ಕಿಚನ್ ಅನ್ನೂ ಆರಂಭಿಸಿದ್ದು, ಇಲ್ಲಿ ಬಡವರಿಗೆ 1 ರೂಪಾಯಿಗೆ ಉತ್ತಮ ಊಟ ಸಿಗುವ ವ್ಯವಸ್ಥೆ ಮಾಡಿದ್ದಾರೆ. ಅದರೊಂದಿಗೆ ತಮ್ಮ ಕ್ಷೇತ್ರದಲ್ಲಿ ದೊಡ್ಡ ಗ್ರಂಥಾಲಯವನ್ನೂ ಸ್ಥಾಪನೆ ಮಾಡಿದ್ದಾರೆ.

ತಮ್ಮ ರಾಜಕೀಯ ದಲ್ಲಿ ಅವರು ಸಕ್ರಿಯವಾಗಿದ್ದರೂ ಕೂಡ ಕ್ರಿಕೆಟ್ ನಲ್ಲೂ ಅವರು ಭಿನ್ನ, ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಲಿಂಕ್ ಇಟ್ಟುಕೊಂಡಿದ್ದಾರೆ.

ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದು 8 ವರ್ಷವಾಗಿರುವ ಹಿನ್ನಲೆಯಲ್ಲಿ ಇತ್ತೀಚೆಗೆ ಗೌತಮ್ ಗಂಭೀರ್ ಸುದ್ದಿಗೋಷ್ಠಿಯನ್ನು ನಡೆಸಿದ್ದರು. ಇದೇ ವೇಳೆ ಅವರಿಗೆ ಸಂಸದರಾಗಿದ್ದರೂ, ಕ್ರಿಕೆಟ್ ಹಾಗೂ ಐಪಿಎಲ್ ಜೊತೆ ಸಂಬಂಧ ಇಟ್ಟುಕೊಂಡಿರುವುದೇಕೆ ಎನ್ನುವ ಪ್ರಶ್ನೆ ಎದುರಾಯಿತು. ಅದಕ್ಕೆ ಬಡಜನರಿಗಾಗಿ ನಾನು ಮಾಡುತ್ತಿರುವ ಕೆಲಸ ಮುಂದುವರಿಯಬೇಕಾದಲ್ಲಿ, ಐಪಿಎಲ್ ಹಾಗೂ ಕ್ರಿಕೆಟ್ ನ ಜೊತೆ ನಾನು ಮುಂದುವರಿಯಬೇಕಾಗುತ್ತದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಜನ್ ರಸೋಯಿಯಲ್ಲಿ ಅಂದಾಜು 5 ಸಾವಿರ ಮಂದಿ ಊಟ ಮಾಡುತ್ತಾರೆ. ಪ್ರತಿ ತಿಂಗಳಿಗೆ ಅದಕ್ಕಾಗಿ 25 ಲಕ್ಷ ರೂಪಾಯಿ ಖರ್ಚಾಗುತ್ತದೆ. ಅಂದರೆ, ವರ್ಷವೊಂದರಲ್ಲಿ 2.75 ಕೋಟಿ ರೂ. ಇದಕ್ಕಾಗಿಯೇ ಬೇಕು. ಇನ್ನು ಗ್ರಂಥಾಲಯ ಸ್ಥಾಪನೆ ಮಾಡುವ ಸಲುವಾಗಿ 25 ಲಕ್ಷ ರೂಪಾಯಿ ನೀಡಿದ್ದೇನೆ. ಈ ಎಲ್ಲಾ ಕಾರಣಗಳಿಂದಾಗಿ ನಾನು ಐಪಿಎಲ್ ಅಥವಾ ಕ್ರಿಕೆಟ್ ಸಂಬಂಧಿತ ಇತರ ಕೆಲಸಗಳಲ್ಲಿ ಭಾಗಿಯಾಗುತ್ತೇನೆ ಎಂದು ಗಂಭೀರ್ ಹೇಳಿದ್ದಾರೆ.

ಈ ಎಲ್ಲದಕ್ಕೂ ನಾನು ನನ್ನ ಸ್ವಂತ ಹಣವನ್ನು ಖರ್ಚು ಮಾಡುತ್ತಿದ್ದೇನೆ. ಸಂಸದರ ನಿಧಿಯ ಹಣವನ್ನು ಬಳಕೆ ಮಾಡಿಲ್ಲ. ನಾನು ಮಾಡುತ್ತಿರುವ ಜನ ರಸೋಯಿ ಕಿಚನ್ ಗೆ ಸಂಸದರ ನಿಧಿಯಿಂದ ಹಣ ಸಿಗುವುದಿಲ್ಲ. ಇನ್ನು ನನ್ನ ಮನೆಯಲ್ಲಿ ಯಾವುದೇ ಹಣದ ಮರವಿಲ್ಲ. ಅಂಥದ್ದೇನಾದರೂ ಇದ್ದಿದ್ದರೆ, ಅಲ್ಲಿಂದ ಕಿತ್ತು ಖರ್ಚು ಮಾಡುತ್ತಿದ್ದೆ ಎಂದಿದ್ದಾರೆ.

ನಾನು ಕೆಲಸ ಮಾಡುವುದರಿಂದ ಮಾತ್ರ 5000 ಜನರಿಗೆ ಆಹಾರ ನೀಡಲು ಅಥವಾ ಆ ಗ್ರಂಥಾಲಯವನ್ನು ಸ್ಥಾಪಿಸಲು ನನಗೆ ಸಾಧ್ಯವಾಗುತ್ತದೆ. ನಾನು ಕಾಮೆಂಟರಿ ಮಾಡುತ್ತೇನೆ ಮತ್ತು ಐಪಿಎಲ್‌ನಲ್ಲಿ ಕೆಲಸ ಮಾಡುತ್ತೇನೆ ಎಂದು ಹೇಳಲು ನನಗೆ ನಾಚಿಕೆ ಇಲ್ಲ. ನಾನು ಮಾಡುವ ಇವೆಲ್ಲವುಗಳ ಅಂತಿಮ ಗುರಿ ಮಾತ್ರ ಎಲ್ಲರಿಗೂ ತಿಳಿದಿದೆ ಎಂದು ಅವರು ಮಾಧ್ಯಮಗೋಷ್ಠಿಯಲ್ಲಿ ವಿವರಿಸಿದರು.

2022ರ ಐಪಿಎಲ್ ನಲ್ಲಿ ಸಕ್ರಿಯವಾಗಿ ಮಾಡಿದ್ದ ಗೌತಮ್ ಗಂಭೀರ್, ಲಕ್ನೋ ಸೂಪರ್ ಜೈಂಟ್ಸ್) ಫ್ರಾಂಚೈಸಿಯ ತರಬೇತುದಾರರಲ್ಲಿ ಗಂಭೀರ್ ಕೂಡ ಒಬ್ಬರಾಗಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss