Friday, July 1, 2022

Latest Posts

ಬೆಡ್ ಬ್ಲಾಕಿಂಗ್ ದಂಧೆ ಬಯಲು: ಇಂದು ಬೆಂಗಳೂರಿನ ಆಸ್ಪತ್ರೆಗಳಲ್ಲಿ ಬರೋಬ್ಬರಿ 3,210 ಬೆಡ್​ಗಳು ಲಭ್ಯ!

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
……………………………………………………………………

ಹೊಸದಿಗಂತ ಆನ್ ಲೈನ್ ಡೆಸ್ಕ್:

ಬೆಂಗಳೂರು ನಗರದಲ್ಲಿ ಬೆಡ್ ಬ್ಲಾಕಿಂಗ್ ದಂಧೆ ಬಯಲಾದ ಬೆನ್ನಲ್ಲೇ, ಇಂದು 3 ಸಾವಿರಕ್ಕಿಂತ ಅಧಿಕ ಬೆಡ್​ಗಳು ಖಾಲಿ ಇರುವುದಾಗಿ ವೆಬ್​ಸೈಟ್​ ತೋರಿಸುತ್ತಿದೆ.

ನಿನ್ನೆಯವರೆಗೆ ನಗರದ ಆಸ್ಪತ್ರೆಗಳಲ್ಲಿ ಬೆಡ್​ ಇಲ್ಲ ಎಂದು ವೆಬ್​ಸೈಟ್​ಗಳಲ್ಲಿ ಶೂನ್ಯ ಸಂಖ್ಯೆ ತೋರಿಸುತ್ತಿತ್ತು. ಆದರೆ, ಇಂದು ಒಂದೇ ಸಮನೆ ಬೆಡ್​ಗಳ ಸಂಖ್ಯೆ ಏರಿಕೆಯಾಗಿದ್ದು, ಬರೋಬ್ಬರಿ 3,210 ಬೆಡ್​ಗಳು ಖಾಲಿ ಇದೆ.

ಬೆಂಗಳೂರಿನ ದಕ್ಷಿಣ ವಲಯದ ಕೋವಿಡ್​ ವಾರ್ ರೂಂನಿಂದ ವಿವಿಧ ವಲಯಗಳ ಕೋವಿಡ್​ ಸೋಂಕಿತರಿಗೆ ಅರಿವಿಲ್ಲದಂತೆಯೇ ಬೆಡ್ ಬುಕಿಂಗ್ ಮಾಡಿ ದಂಧೆ ನಡೆಸುತ್ತಿದ್ದ ಪ್ರಕರಣ ನಿನ್ನೆಯಷ್ಟೇ ಬಯಲಾಗಿತ್ತು. ಬಳಿಕ ವಾರ್ ರೂಂ 17 ಮಂದಿ ಗುತ್ತಿಗೆ ಸಿಬ್ಬಂದಿಯನ್ನು ಕೆಲಸದಿಂದ ವಜಾಗೊಳಿಸಲಾಗಿತ್ತು.

ನಿನ್ನೆಯವರೆಗೂ 12,736 ಸರ್ಕಾರಿ ಕೋಟಾದ ಬೆಡ್​ಗಳ ಪೈಕಿ ಐಸಿಯು, ವೆಂಟಿಲೇಟರ್​​ ಇರುವ ಕೇವಲ ಬೆರಳೆಣಿಕೆಯಷ್ಟು ಮಾತ್ರ ಬೆಡ್​ಗಳು ಖಾಲಿ ತೋರಿಸುತ್ತಿದ್ದ ಲೈವ್ ಸೆಂಟ್ರಲ್ ಹಾಸ್ಪಿಟಲ್ ಬೆಡ್ ಮ್ಯಾನೇಜ್​ಮೆಂಟ್ ವೆಬ್​ಸೈಟ್, ಇಂದು ಬರೋಬ್ಬರಿ 3,210 ಬೆಡ್​ಗಳು ಖಾಲಿ ಎಂದು ತೋರಿಸುತ್ತಿದೆ.

ಸರ್ಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ 12, ಸರ್ಕಾರಿ ಆಸ್ಪತ್ರೆಯಲ್ಲಿ 67, ಖಾಸಗಿ ಮೆಡಿಕಲ್ ಕಾಲೇಜಿನಲ್ಲಿ 1,197, ಖಾಸಗಿ ಆಸ್ಪತ್ರೆಯಲ್ಲಿ 402, ಸೇರಿ ಒಟ್ಟು 1,693 ಬೆಡ್​ಗಳು ಖಾಲಿ ಇವೆ.

ಅಲ್ಲದೆ ಶೇ.10 ರಷ್ಟು ಆಕ್ಸಿಜನ್ ಲಭ್ಯವಿರುವ ಕೋವಿಡ್ ಕೇರ್ ಸೆಂಟರ್​ಗಳಲ್ಲೂ 1,517 ಬೆಡ್​ಗಳು ಖಾಲಿ ಇವೆ. 127 ಖಾಸಗಿ ಆಸ್ಪತ್ರೆಗಳಲ್ಲಿ ಸರ್ಕಾರಿ ಕೋಟಾದ 29 ಐಸಿಯು, 13 ವೆಂಟಿಲೇಟರ್​ ಬೆಡ್​ಗಳು ಖಾಲಿ ಇವೆ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss