spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, September 23, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಬೇಡಡ್ಕ ಗ್ರಾ. ಪಂಚಾಯತ್, ನೀಲೇಶ್ವರ ನಗರಸಭೆಗೆ ಪ್ರತಿಷ್ಠಿತ ‘ನವಕೇರಳ’ ಪ್ರಶಸ್ತಿ

- Advertisement -Nitte

ಹೊಸ ದಿಗಂತ ವರದಿ, ಕಾಸರಗೋಡು:

ಬೇಡಡ್ಕ ಗ್ರಾಮ ಪಂಚಾಯತ್ ಮತ್ತು ನೀಲೇಶ್ವರ ನಗರಸಭೆಯು ಪ್ರತಿಷ್ಠಿತ ನವಕೇರಳ ಪ್ರಶಸ್ತಿಗೆ ಆಯ್ಕೆಯಾಗಿವೆ. ರಾಜ್ಯ ಸರಕಾರದ 100 ದಿನಗಳ ಕ್ರಿಯಾ ಯೋಜನೆಯ ಅಂಗವಾಗಿ ಘನತ್ಯಾಜ್ಯ ಸಂಸ್ಕರಣೆಯ ಸೌಲಭ್ಯಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿದ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಹರಿತ ಕೇರಳಂ ಮಿಷನ್ ಮತ್ತು ಶುಚಿತ್ವ ಮಿಷನ್ ಗಳು ನೀಡುವ ನವಕೇರಳ ಪ್ರಶಸ್ತಿಗೆ ಈ ಸ್ಥಳೀಯಾಡಳಿತ ಸಂಸ್ಥೆಗಳು ಭಾಜನವಾಗಿವೆ.
2 ಲಕ್ಷ ರೂಪಾಯಿ ನಗದು ಮತ್ತು ಅರ್ಹತಾಪತ್ರವನ್ನು ಈ ಪ್ರಶಸ್ತಿಯು ಒಳಗೊಂಡಿದೆ. ಪ್ರಶಸ್ತಿಯ ರಾಜ್ಯ ಮಟ್ಟದ ಪ್ರದಾನ ಸಮಾರಂಭವು ಸೆ.16 ರಂದು ಅಪರಾಹ್ನ 3 ಗಂಟೆಗೆ ಆನ್ ಲೈನ್ ರೂಪದಲ್ಲಿ ನಡೆಯಲಿದೆ. ಸ್ಥಳೀಯಾಡಳಿತ ಸಂಸ್ಥೆ ಖಾತೆ ಸಚಿವ ಎಂ.ವಿ.ಗೋವಿಂದನ್ ಮಾಸ್ಟರ್ ಉದ್ಘಾಟಿಸುವರು. ಜಿಲ್ಲಾ ಮಟ್ಟದ ಪ್ರಶಸ್ತಿ ವಿತರಣಾ ಕಾರ್ಯಕ್ರಮಗಳು ಸೆ. 20 ರಂದು ನೀಲೇಶ್ವರ ನಗರಸಭೆಯಲ್ಲಿ ಹಾಗೂ ಸೆ.25 ರಂದು ಬೇಡಡ್ಕ ಗ್ರಾಮ ಪಂಚಾಯತ್ ನಲ್ಲೂ ನಡೆಯಲಿವೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss