Monday, August 8, 2022

Latest Posts

ಗೋಮಾಂಸ ಮಾರಾಟ: ಆರೋಪಿ ಬಂಧನ

ಹೊಸ ದಿಗಂತ ವರದಿ, ಮಡಿಕೇರಿ:

ಹೊರ ಪ್ರದೇಶದಿಂದ ಗೋಮಾಂಸವನ್ನು ತಂದು ಅಕ್ರಮವಾಗಿ ಮಾರಾಟ ಮಾಡುತಿದ್ದ ವ್ಯಕ್ತಿಯೋರ್ವನನ್ನು
ವೀರಾಜಪೇಟೆ ಪೊಲೀಸರು ಬಂಧಿಸಿದ್ದಾರೆ.
ವೀರಾಜಪೇಟೆ ಪಟ್ಟಣದ ಸುಣ್ಣದ ಬೀದಿಯ ನಿವಾಸಿ ಎಂ.ಎ.ಇದ್ರೀಸ್ (50 ) ಬಂಧಿತ ಆರೋಪಿ ಈತ ಹುಣಸೂರಿನಿಂದ ಪ್ರತಿನಿತ್ಯ ಗೋಮಾಂಸವನ್ನು ತಂದು ತನ್ನ ಆಪ್ತರಿಗೆ ಸುಣ್ಣದ ಬೀದಿಯ ತನ್ನ ನಿವಾಸದಲ್ಲಿ ಗೋಮಾಂಸವನ್ನು ಮಾರಾಟ ಭೋಜಪ್ಪ ಅವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಇದ್ರೀಸ್ ಮನೆಯ ಮೇಲೆ ದಾಳಿ ನಡೆಸಿದ ಪೊಲೀಸರು ಮನೆಯ ಕೊಣೆಯೊಂದರಲ್ಲಿ ಚೀಲದಲ್ಲಿ ಇರಿಸಲಾಗಿದ್ದ 13 ಕೆ.ಜಿ. ಗೋಮಾಂಸ ಹಾಗೂ 990 ರೂ.ನಗದು ವಶಪಡಿಸಿಕೊಂಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ವೀರಾಜಪೇಟೆ ನಗರ ಪೊಲೀಸ್ ಠಾಣೆಯಲ್ಲಿ ಆರೋಪಿಯ ವಿರುದ್ಧ ಗೋ ಹತ್ಯೆ ಮತ್ತು ಮಾರಾಟ ನಿಷೇಧ ಕಾಯ್ದೆ ಅನ್ವಯ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ 15 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿಡಲು ಆದೇಶ ನೀಡಲಾಗಿದೆ.
ವೀರಾಜಪೇಟೆ ಉಪ ವಿಭಾಗ ಡಿವೈಎಸ್ಪಿ ಸಿ.ಟಿ.ಜಯಕುಮಾರ್ ಅವರ ಮಾರ್ಗದರ್ಶನದಲ್ಲಿ ವೃತ್ತ ನೀರಿಕ್ಷಕ ಶ್ರೀಧರ್ ಅವರ ನಿರ್ದೇಶನದ ಮೇರೆಗೆ ವೀರಾಜಪೇಟೆ ಅಪರಾಧ ವಿಭಾಗದ ಉಪ ನೀರಿಕ್ಷಕ ಹೆಚ್.ಎಸ್ ಭೋಜಪ್ಪ ಸಿಬ್ಬಂದಿಗಳಾದ ಗಿರೀಶ್, ಮುನೀರ್ ಮತ್ತು ಗೀತಾ ಹಾಗೂ ಚಾಲಕ ಪೂವಯ್ಯ ಕಾರ್ಯಚರಣೆ ನಡೆಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss