ಈಗಿನ ಮಕ್ಕಳು ತರಕಾರಿ, ಹಾಲು, ಹಣ್ಣು ಯಾವುದೂ ತಿನ್ನಲ್ಲ ಅಂತಾರೆ. ಇದರಿಂದ ಸಾಕಷ್ಟು ಆರೋಗ್ಯ ಸಮಸ್ಯೆ ಕಾಡುತ್ತೆ. ನಿಮ್ಮಲ್ಲಿ ಯಿಗಾದರೂ ರಕ್ತ ಹೀನತೆ ಸಮಸ್ಯೆ ಇದ್ರೆ ಖಂಡಿತವಾಗಿಯೂ ಈ ಬೀಟ್ರೂಟ್ ಚಟ್ನಿ ಮಾಡಿ ತಿನ್ನಿ
ಬೇಕಾಗಿರುವ ಪದಾರ್ಥಗಳು
ಎಣ್ಣೆ
ಉದ್ದಿನ ಬೇಳೆ
ಕಡಲೆಬೇಳೆ
ಒಣಮೆಣಸಿನಕಾಯಿ
ಹಸಿಮೆಣಸಿನಕಾಯಿ
ಕರಿಬೇವು
ಬೆಳ್ಳುಳ್ಳಿ
ಬೀಟ್ರೂಟ್
ಉಪ್ಪು
ಮಾಡುವ ವಿಧಾನ
ಮೊದಲಿಗೆ ಎಣ್ಣೆ, ಉದ್ದಿನ ಬೇಳೆ, ಕಡಲೆಬೇಳೆ, ಒಣಮೆಣಸಿನಕಾಯಿ, ಹಸಿಮೆಣಸಿನಕಾಯಿ, ಕರಿಬೇವು, ಬೆಳ್ಳುಳ್ಳಿ ಹಾಕಿ ಚೆನ್ನಾಗಿ ಫ್ರೈ ಮಾಡಿ.
ನಂತರ ಸಪರೇಟ್ ಆಗಿ ಸಣ್ಣಗೆ ಹೆಚ್ಚಿದ ಬೀಟ್ರೂಟ್ ಅನ್ನು ಫ್ರೈ ಮಾಡಿಕೊಳ್ಳಿ.
ಕೊನೆಯಲ್ಲಿ ಸಿದ್ಧವಾಗಿರುವ ಒಗ್ಗರಣೆ, ಬೀಟ್ರೂಟ್, ನೀರು ಹಾಗೂ ರುಚಿಗೆ ತಕ್ಕಷ್ಟು ಕಲ್ಲುಪ್ಪು ಹಾಕಿ ಚೆನ್ನಾಗಿ ರುಬ್ಬಿಕೊಂಡರೆ ರೆಡಿಯಾಗುತ್ತೆ ಟೇಸ್ಟಿ ಬೀಟ್ರೂಟ್ ಚಟ್ನಿ.