spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, September 23, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ದೇವಾಲಯಗಳ ಬದಲು ಕೆರೆಗಳ ಒತ್ತುವರಿಯನ್ನು ಮೊದಲು ತೆರವುಗೊಳಿಸಿ: ಜಿ.ಟಿ.ದೇವೇಗೌಡ

- Advertisement -Nitte

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ವರದಿ, ಮೈಸೂರು:

ಹಿಂದೂ ದೇವಾಲಯಗಳ ತೆರವು ಮಾಡುವ ಬದಲು ಮೊದಲು ಕೆರೆಗಳ ಒತ್ತುವರಿಯನ್ನು ಕೂಡಲೇ ತೆರವುಗೊಳಿಸಿ ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಜಿಲ್ಲಾಡಳಿತಕ್ಕೆ ಹೇಳಿದರು.
ಭಾನುವಾರ ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,ಬೇರೆ ಜಿಲ್ಲೆಗಳಲ್ಲಿ ಹಿಂದುಗಳ ದೇವಾಲಯಗಳನ್ನು ಒಡೆಯುತ್ತಿಲ್ಲ, ಆದರೆ ಮೈಸೂರಿನಲ್ಲಿ ಮಾತ್ರ ಯಾಕೇ ಪ್ರತಿ ಬಾರಿ ದೇವಸ್ಥಾನಗಳನ್ನು ಯಾಕೇ ತೆರವು ಮಾಡುತ್ತಿದ್ದೀರಿ, ಬೇರೆ ಜಿಲ್ಲೆಗಳಲ್ಲಿ ನೀವು ದೇವಾಲಯಗಳನ್ನ ಮುಟ್ಟೋಕೆ ಆಗುತ್ತಾ? ಮೈಸೂರು ಜನ ಶಾಂತಿ ಪ್ರಿಯರು ಅಂತ ಈ ಕೆಲಸಕ್ಕೆ ಕೈ ಹಾಕಿದ್ದೀರಾ? ಅಂತಹ ಆಸಕ್ತಿಯೇನು ಎಂದು ಜಿಲ್ಲಾಡಳಿತದ ವಿರುದ್ಧ ಕಿಡಿಕಾರಿದರು.
ನ್ಯಾಯಾಲಯ 2013-14ರ ಹಿಂದೆ ನಿರ್ಮಾಣವಾಗಿರುವ ದೇವಸ್ಥಾನಗಳನ್ನು ತೆರವುಗೊಳಿಸಿ ಎಂದು ಹೇಳಿಲ್ಲ. ಆದರೆ ಅಧಿಕಾರಿಗಳು ನ್ಯಾಯಾಲಯದ ಆದೇಶವನ್ನು ಸರಿಯಾಗಿ ತಿಳಿದುಕೊಂಡಿಲ್ಲ. ಪುಟ್ ಪಾತ್‌ನಲ್ಲಿ ಸಾರ್ವಜನಕರಿಗೆ ಅಡ್ಡಿಯನ್ನುಂಟು ಮಾಡುತ್ತಿರುವ ದೇವಸ್ಥಾನಗಳನ್ನು ಮಾತ್ರ ತೆರವುಗೊಳಿಸಿ ಎಂದು ನ್ಯಾಯಾಲಯ ಹೇಳಿದೆ. ಆದರೆ ಪುರಾತನ ದೇವಸ್ಥಾನಗಳನ್ನು ತೆರವುಗೊಳಿಸಿ ಎಂದು ಸುಪ್ರೀಂಕೋರ್ಟ್ ಎಲ್ಲಿ ಹೇಳಿದೆ. ಜಿಲ್ಲಾಧಿಕಾರಿಗಳು ಆದೇಶ ಮಾಡಿದರು ಎಂದು ಅಧಿಕಾರಿಗಳು ಎಲ್ಲೆಲ್ಲಿ ದೇವಾಲಯಗಳಿವೆ ಅವುಗಳನ್ನು ಅತಿಕ್ರಮ ಎಂದು ತೆರವುಗೊಳಿಸುತ್ತಿರುವುದು ಸರಿಯಲ್ಲ ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಪುರಾತನ ಕಾಲದಲ್ಲಿ ನಿರ್ಮಿಸಲಾಗಿರುವ ದೇವಸ್ಥಾನಗಳನ್ನು ಯಾಕೇ ತೆರವು ಮಾಡುತ್ತಿದ್ದೀರಿ.
ಜನರು ದಂಗೆ ಎದ್ದರೆ ನೀವು ಉಳಿತೀರಾ? ಜನರ ತಾಳ್ಮೆಯನ್ನ ಪರೀಕ್ಷೆ ಮಾಡಬೇಡಿ. ಹಿಂದೂ ಧರ್ಮ ಭಾರತೀಯ ಸಂಸ್ಕöÈತಿಯಲ್ಲಿ ದೇವಾಲಯಗಳ ಮೇಲೆ ನಂಬಿಕೆ ಇಟ್ಟಿದೆ. ದೇವಾಲಯಗಳನ್ನ ಒಡೆದರೆ ಜನರ ಎದೆಗೆ ಒದ್ದಂತೆ,
ಅಧಿಕಾರಿಗಳು ಸುಪ್ರೀಂ ತೀರ್ಪನ್ನು ಅಧ್ಯಯನ ಮಾಡಬೇಕು. ಯಾರು ಕಾನೂನುಗಳನ್ನು ಪಾಲಿಸುತ್ತಿದ್ದಾರೋ, ಅಂತಹ ದೇವಸ್ಥಾನಗಳನ್ನು ಉಳಿಸಬೇಕು. ಈ ಬಗ್ಗೆ ನ್ಯಾಯಾಲಯಕ್ಕೆ ತಿಳಿಸಿ, ಮನವರಿಕೆ ಮಾಡಿಕೊಡಬೇಕು ಎಂದು ಸಲಹೆ ನೀಡಿದರು.
ಪುರಾತನ ಕಾಲದಿಂದಲೂ ದೇವಾಲಯಗಳು ಇವೆ. ನಾವುಗಳು ಜನರ ಭಾವನೆಗಳಿಗೆ ಧಕ್ಕೆ ತರುವ ಕೆಲಸ ಮಾಡಬಾರದು. ಇದು ಸಂಪೂರ್ಣ ಅಧಿಕಾರಿಗಳ ಯಡವಟ್ಟು ಎಂದು ಕಿಡಿಕಾರಿದರು.
ಸುಪ್ರೀಂ ಕೋರ್ಟ್ ಕೆರೆಗಳ ಒತ್ತುವರಿಯನ್ನ ತೆರವುಗೊಳಿಸಿ ಎಂದು ಆದೇಶ ಮಾಡಿದೆ. ಆದರೆ ನೀವು ಒಂದೇ ಒಂದು ಕೆರೆ ಒತ್ತುವರಿ ತೆರವು ಮಾಡಿದ್ದೀರಾ? ಎಂದು ಪ್ರಶ್ನಿಸಿದರಲ್ಲದೆ,
ದೇಗುಲಗಳು ಮಾತ್ರವಲ್ಲ. ಕೆರೆಗಳ ಒತ್ತುವರಿ ತೆರವುಗೊಳಿಸಿ ನ್ಯಾಯಾಲಯಕ್ಕೂ ಗೌರವ ತಂದು ಕೊಡಬೇಕು ಎಂದು ಜಿಲ್ಲಾಧಿಕಾರಿಗೆ ಹೇಳಿದರು.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss