ಜೀವನದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳುವಾಗಲೂ ಸ್ಪಷ್ಟತೆ ಇರೋದಿಲ್ಲ. ಅದರಲ್ಲಿಯೂ ನಿಮ್ಮ ಮುಂದೆ ಎರಡು ಆಯ್ಕೆ ಇದ್ದರೆ, ಯಾವ ದಾರಿ ಆರಿಸುವುದು ಎನ್ನುವುದು ಜಟಿಲ ಪ್ರಶ್ನೆಯಾಗುತ್ತದೆ. ದೃಢನಿರ್ಧಾರ ಕೈಗೊಂಡು ಮುನ್ನಡೆಯದೇ ಬೇರೆ ದಾರಿ ಇಲ್ಲ. ಆದರೆ ನಿರ್ಧಾರ ಮಾಡುವುದು ಹೇಗೆ?
ಈಗ ಈ ನಿರ್ಧಾರ ಮಾಡುವ ಅವಶ್ಯಕತೆ ಇದೆಯಾ? ಈ ಪ್ರಶ್ನೆಯನ್ನು ನಿಮಗೆ ನೀವೇ ಕೇಳಿ. ಮಾಡಲೇಬೇಕು ಎಂದಾದರೆ ನೀವು ಪ್ರಾಧಾನ್ಯತೆ ಕೊಡುವ ಅಂಶ ಯಾವುದು ಗಮನ ನೀಡಿ.
- ಎರಡು ಆಯ್ಕೆಯಲ್ಲಿ ನಿರ್ಧರಿಸುವಾಗ ನಿಮ್ಮ ಬಗ್ಗೆ ಆಲೋಚಿಸಿ, ಬೇರೆಯವರ ಬಗ್ಗೆ ಆಲೋಚಿಸದೇ ಕೆಟ್ಟ ನಿರ್ಧಾರಗಳನ್ನು ಕೈಗೊಳ್ಳುವುದು ಒಳ್ಳೆಯದಲ್ಲ, ಆದರೆ ಆ ನಿರ್ಧಾರ ಕಠಿಣವಾಗಿದ್ದು, ತದನಂತರ ಫಲ ನೀಡುತ್ತದೆ ಎಂದರೆ ಧೈರ್ಯ ಮಾಡಿ ಮುನ್ನುಗ್ಗಿ.
- ಈ ನಿರ್ಧಾರ ಕೈಗೊಂಡಿದ್ದೇನೋ ಸರಿ, ಆದರೆ ನಂತರ ನನ್ನ ಪರಿಸ್ಥಿತಿ ಹೇಗಿರಲಿದೆ. ಈ ನಿರ್ಧಾರ ಕೈಗೊಂಡ
- ನಂತರ ನಾನು ನನ್ನವರಿಗೆ ನೆಮ್ಮದಿ ಇರುತ್ತದಾ ಒಮ್ಮೆ ಎಲ್ಲವನ್ನು ಮನಸ್ಸಿನಲ್ಲಿಯೇ ಚಿತ್ರಿಸಿ.