ಇಷ್ಟಪಟ್ಟ ಪುರುಷನ ಜತೆಗಿದ್ದು, ಸಂಬಂಧ ಕೆಟ್ಟಾಗ ಅತ್ಯಾಚಾರವಾಯಿತು ಅನ್ನೋ ಹಾಗಿಲ್ಲ: ಸುಪ್ರೀಂಕೋರ್ಟ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮಹಿಳೆ ತಾನು ಇಷ್ಟಪಟ್ಟು ಪುರುಷನ ಜೊತೆಗಿದ್ದು,ಆ ಬಳಿಕ ಸಂಬಂಧ ನಡುವೆ ವೈಮನಸು ಉಂಟಾಗಿ ದೂರವಾದಾಗ ಅತ್ಯಾಚಾರವಾಯ್ತು ಎಂದು ದೂರು ನೀಡುವಂತಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ.
ಆರೋಪಿ ಅನ್ಸಾರ್ ಮೊಹಮ್ಮದ್ ಎಂಬಾತ ತಮ್ಮ ವಿರುದ್ಧ ಸಲ್ಲಿಕೆ ಆಗಿರುವ ಅತ್ಯಾಚಾರ ಆರೋಪದ ಕುರಿತಂತೆ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನಿಗೆ ಸಂಬಂಧಿತ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್ ಗುಪ್ತ ಮತ್ತು ವಿಕ್ರಮ್​ನಾಥ್ ಅವರಿದ್ದ ಪೀಠ, ಮೇಲಿನ ತೀರ್ಪು ನೀಡಿ, ಜಾಮೀನು ಮಂಜೂರು ಮಾಡಿದೆ.
ದೂರುದಾರ ಮಹಿಳೆಯು ಅನ್ಸಾರ್​ ಮೊಹಮ್ಮದ್​ನೊಂದಿಗೆ ಇಷ್ಟಪಟ್ಟೇ ಜತೆಗಿದ್ದರು. ಆದರೆ ಈಗ ಇಬ್ಬರ ನಡುವಿನ ಸಂಬಂಧ ಹದೆಗೆಟ್ಟಿದೆ ಎಂಬ ಕಾರಣಕ್ಕೆ ಸೆಕ್ಷನ್​ 376(2)ರ ಪ್ರಕಾರ ಎಫ್​ಐಆರ್ ದಾಖಲು ಮಾಡಲಾಗದು ಎಂದು ಪೀಠ ಅಭಿಪ್ರಾಯಪಟ್ಟಿದೆ. ಮಾತ್ರವಲ್ಲ, ಆರೋಪಿಗೆ ನಿರೀಕ್ಷಣಾ ಜಾಮೀನು ನಿರಾಕರಿಸಿ ರಾಜಸ್ಥಾನ್ ಹೈಕೋರ್ಟ್ ನೀಡಿದ್ದ ತೀರ್ಪನ್ನು ತಳ್ಳಿಹಾಕಿದೆ.
25 ವರ್ಷದ ಮಹಿಳೆ ಈ ಪ್ರಕರಣದಲ್ಲಿ ದೂರುದಾರರಾಗಿದ್ದು, ಅನ್ಸಾರ್ ಜತೆ ನಾಲ್ಕು ವರ್ಷದಿಂದ ಸಂಬಂಧ ಹೊಂದಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!