Wednesday, June 29, 2022

Latest Posts

ಬೆಳಗಾವಿ ಲೋಕಸಭಾ ಉಪಚುನಾವಣೆ ಫಲಿತಾಂಶ: ಬ್ಯಾಲೆಟ್ ಪೇಪರ್ ಎಣಿಕೆ ಆರಂಭ, ಕಾಂಗ್ರೆಸ್ ಗೆ ಮುನ್ನಡೆ

ಹೊಸದಿಗಂತ ವರದಿ, ಬೆಳಗಾವಿ:

ಬೆಳಗಾವಿ ಲೋಕಸಭಾ ಉಪಚುನಾವಣೆಯ ಮತ ಎಣಿಕೆದಿನದಂದು ಮೊದಲಿಗೆ ಬ್ಯಾಲೆಟ್ ಪೇಪರ್ (ಅಂಚೆ ಮತಗಳ) ಎಣಿಕೆ ಪ್ರಕ್ರಿಯೆ ಪ್ರಾರಂಭವಾಗಿದೆ.
ಮಹಾನಗರದ ಆರ್ ಪಿಡಿ ಕಾಲೇಜಿನ ಆವರಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ಮತ ಎಣಿಕೆ ಕಾರ್ಯ ಆರಂಭವಾಗಿದೆ. ಅಂಚೆ ಮತಗಳನ್ನು ತೆರೆಯುವ ಮುನ್ನ ಬಾಕ್ಸ್ ಗಳಿಗೆ ಸ್ಯಾನಿಟೈಸರ್ ಮಾಡಿ ತೆರೆಯಲಾಯಿತು.
ಅಂಚೆ ಮತಗಳ ಎಣಿಕೆಯ ಮೊದಲ‌ ಸುತ್ತಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸತೀಶ ಜಾರಕಿಹೊಳಿ ಮುನ್ನಡೆ ಸಾಧಿಸಿದ್ದಾರೆ.  ಬಿಜೆಪಿ‌ ಅಭ್ಯರ್ಥಿ ಮಂಗಲಾ ಅಂಗಡಿಗೆ ಹಿನ್ನೆಡೆಯಾಗಿದ್ದು, ಇವಿಎಂ ಮತಗಳ ಎಣಿಕೆ ಇನ್ನೂ ಪ್ರಾರಂಭವಾಗಿಲ್ಲ.
ಕೊರೋನಾ ಹಿನ್ನೆಲೆಯಲ್ಲಿ ಮತ ಎಣಿಕೆಯ ಸಿಬ್ಬಂದಿಗಳನ್ನು ಕಡಿತಗೊಳಿಸಿದ್ದರಿಂದ ಫಲಿತಾಂಶ ವಿಳಂಬವಾಗಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss