ಅಂತಾರಾಷ್ಟ್ರೀಯ ಫುಟ್ಬಾಲ್ ಗೆ ನಿವೃತ್ತಿ ಘೋಷಿಸಿದ ಬೆಲ್ಜಿಯಂ ಸ್ಟಾರ್ ಈಡನ್ ಹಜಾರ್ಡ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಅಂತಾರಾಷ್ಟ್ರೀಯ ಫುಟ್ಬಾಲ್ ನಿಂದ ಬೆಲ್ಜಿಯಂ ಸ್ಟಾರ್ ಈಡನ್ ಹಜಾರ್ಡ್ ಅವರು ನಿವೃತ್ತಿ ಘೋಷಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಇನ್ ಸ್ಟಾಗ್ರಾಮ್ ನಲ್ಲಿಬರೆದಿರುವ ಅವರು, ನಿಮ್ಮ ಅಪ್ರತಿಮ ಬೆಂಬಲಕ್ಕೆ ಧನ್ಯವಾದಗಳು.2008 ರಿಂದ ಈ ಎಲ್ಲಾ ಸಂತೋಷವನ್ನು ಹಂಚಿಕೊಂಡಿದ್ದಕ್ಕಾಗಿ.ನನ್ನ ಅಂತಾರಾಷ್ಟ್ರೀಯ ವೃತ್ತಿಜೀವನವನ್ನು ಕೊನೆಗೊಳಿಸಲು ನಾನು ನಿರ್ಧರಿಸಿದ್ದೇನೆ. ಉತ್ತರಾಧಿಕಾರ ಸಿದ್ಧವಾಗಿದೆ. ನಾನು ನಿಮ್ಮನ್ನು ಕಳೆದುಕೊಳ್ಳುತ್ತೇನೆ ಎಂದು ಬರೆದುಕೊಂಡಿದ್ದಾರೆ.
ಆಕ್ರಮಣಕಾರಿ ಮಿಡ್‌ಫೀಲ್ಡರ್ ಖ್ಯಾತಿ ಪಡೆದಿರುವ ಆಡಿದ ಹಜಾರ್ಡ್, 2008 ರಲ್ಲಿ ಬೆಲ್ಜಿಯಂ ಫುಟ್ಬಾಲ್ ತಂಡಕ್ಕೆ ಪಾದಾರ್ಪಣೆ ಮಾಡಿದರು. ಒಟ್ಟು 126 ಕ್ಯಾಪ್‌ಗಳನ್ನು ಸಂಗ್ರಹಿಸಿದ್ದು, 33 ಗೋಲುಗಳನ್ನು ಗಳಿಸಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!