ಅನ್ನ ಹಾಗೂ ಚಪಾತಿ ತಿನ್ನೋದಕ್ಕೆ ಬೆಂಡೆಕಾಯಿ ಹುಳಿ ಒಳ್ಳೆಯ ಕಾಂಬಿನೇಶನ್. ಬೆಂಡೆಕಾಯಿ ಹುಳಿ ಟೇಸ್ಟ್ ಕೂಡ ಅದ್ಭುತವಾಗಿರುತ್ತದೆ. ಜೊತೆಗೆ ಮಾಡೋದು ತುಂಬಾನೇ ಈಸಿ. ಹೇಗೆ ಮಾಡೋದು ನೋಡಿ..
ಸಾಮಾಗ್ರಿಗಳು
ಬೆಂಡೆಕಾಯಿ
ಈರುಳ್ಳಿ
ಟೊಮ್ಯಾಟೊ
ಬೆಳ್ಳುಳ್ಳಿ
ಖಾರದಪುಡಿ
ಸಾಂಬಾರ್ ಪುಡಿ
ಕೊತ್ತಂಬರಿ
ಕಾಯಿ
ಮಾಡುವ ವಿಧಾನ
ಮೊದಲು ಎಣ್ಣೆ ಹಾಕಿ ಬೆಂಡೆಕಾಯಿ ಹುರಿದುಕೊಳ್ಳಿ.
ನಂತರ ಮಿಕ್ಸಿಗೆ ಇನ್ನುಳಿದ ಎಲ್ಲ ಪದಾರ್ಥ ಹಾಕಿ ರುಬ್ಬಿ.
ಒಗ್ಗರಣೆಗೆ ಎಣ್ಣೆ ಸಾಸಿವೆ ಹಾಕಿ, ಮಿಕ್ಸಿ ಮಸಾಲಾ ಹಾಕಿ.
ಉಪ್ಪು ಹಾಕಿ ಒಂದು ಕುದಿ ಬಂದನಂತರ ಬೆಂಡೆಕಾಯಿ ಹಾಕಿ.
ಕುದಿಸಿದರೆ ಬೆಂಡೆಹುಳಿ ರೆಡಿ.