ಸಾಮಾನ್ಯವಾಗಿ ತುಪ್ಪ ಸೇವಿಸಿದರೆ ದೇಹದ ತೂಕ ಹೆಚ್ಚಾಗುತ್ತದೆ ಎಂಬುದು ಎಲ್ಲರೂ ನಂಬುತ್ತಾರೆ. ಆದರೆ ನಿಜವಾಗಿಯೂ ತುಂಬಾ ಸೇವಿಸಿದರೆ ಏನಾಗುತ್ತೇ? ಇದರಿಂದ ಆರೋಗ್ಯಕ್ಕೆ ಏನೆಲ್ಲಾ ಲಾಭಗಳಿವೆ ನೋಡಿ..
- ತುಪ್ಪ ಸೇವಿಸುವುರಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಹಕಾರಿಯಾಗಲಿದೆ.
- ಇದರಲ್ಲಿರುವ ವಿಟಮಿನ್ ಎ, ಡಿ, ಇ ಹಾಗೂ ಕೆ ಅಂಶಗಳು ಮಲಬದ್ಧತೆ ಸಮಸ್ಯೆಯನ್ನು ನಿಯಂತ್ರಿಸುತ್ತದೆ.
- ಅಡುಗೆ ಎಣ್ಣೆ ಬಳಸುವುದಕ್ಕಿಂತ ತುಪ್ಪ ಬಳಸುವುದು ಹೆಚ್ಚು ಲಾಭದಾಯಕವಾಗಿದ್ದು, ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ.
- ಇದರಲ್ಲಿನ ಅಮಿನೋ ಆಸಿಡ್ಸ್ ಅಂಶವು ದೇಹದಲ್ಲಿನ ಕೊಬ್ಬನ್ನು ಕಡಿಮೆ ಮಾಡುತ್ತದೆ. ಇದರಲ್ಲಿನ ವಿಟಮಿನ್ ಅಂಶಗಳು ಜೀರ್ಣಕ್ರಿಯೆಯನ್ನು ಸುಧಾರಿಸಿ ತೂಕ ಇಳಿಕೆಯಾಗಿಸುತ್ತದೆ.
- ಸ್ನಾಯುಗಳ ನೋವು, ಮೂಳೆಗಳ ನೋವಿಗೆ ತುಪ್ಪ ಹೆಚ್ಚು ಪರಿಣಾಮಕಾರಿಯಾಗಿದೆ.
- ಖಾಲಿ ಹೊಟ್ಟೆಯಲ್ಲಿ ತುಪ್ಪ ಸೇವಿಸುವುದರಿಂದ ತ್ವಚೆಯ ಕಾಂತಿ ಹೆಚ್ಚಿಸಲಿದೆ.
- ತುಪ್ಪ ಸೇವನೆಯಿಂದ ರಕ್ತ ಪರಿಚಲನೆ ಸುಧಾರಿಸುತ್ತದೆ.
ಹೇಗೆ ಸೇವಿಸೋದು?
- ದೇಸಿ ಹಸುವಿನ ತುಪ್ಪ ಬಳಸೋದು ಉತ್ತಮ.
- ಮೊದಲಿಗೆ ಒಂದು ಸ್ಪೂನ್ ನಲ್ಲಿ ತುಪ್ಪ ಬಿಸಿ ಮಾಡಿ ಕರಗಿಸಿಕೊಳ್ಳಿ.
- ನಂತರ ಅದನ್ನು ಒಂದು ಲೋಟ ಬಿಸಿ ನೀರಿಗೆ ಬೆರಸಿ ಪ್ರತಿದಿನ ಬೆಳಗ್ಗೆ ಸೇವಿಸಿ.
- ಬಳಿಕ 30 ನಿಮಿಷ ಬೇರೆ ಏನನ್ನು ಸೇವಿಸಬಾರದು.