Saturday, July 2, 2022

Latest Posts

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕರಿಬೇವು ಸೇವಿಸಿದ್ದೀರಾ? ಇದರಲ್ಲಿದೆ ಆರೋಗ್ಯಕರ ಗುಣಗಳು

 ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………………………….

ಎಲ್ಲಾ ಅಡುಗೆಗೂ ಒಗ್ಗರಣೆ ಇರಲೇ ಬೇಕು. ಅದಕ್ಕೆ ಕರಿಬೇವು ಕಡ್ಡಾಯ. ಆದರೆ ಈ ಕರಿಬೇವು ಯಾಕೆ ಬಳಸುತ್ತಾರೆ ಅಂತ ಗೊತ್ತಾ? ಇದು ಅಡುಗೆಗೆ ರುಚಿ ಮಾತ್ರವಲ್ಲದೆ, ಆರೋಗ್ಯ ವೃದ್ಧಿಸುವಲ್ಲಿ ಹೆಚ್ಚು ಸಹಕಾರಿಯಾಗಲಿದೆ.

ಕೂದಲುದುರುವಿಕೆ:
ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಮೊದಲು ನೀರು ಕುಡಿದ ಬಳಿಕ ಕರಿಬೇವು ಎಲೆ ಸೇವಿಸುವುದು ಒಳ್ಳೆಯದು. ಇದರಲ್ಲಿರುವ ವಿಟಮಿನ್ ಸಿ, ಕಬ್ಬಿಣಾಂಶ, ಕ್ಯಾಲ್ಶಿಯಂ ಅಂಶಗಳು ಕೂದಲು ಉದರುವುದನ್ನು ತಡಿಯುತ್ತದೆ.

ಜೀರ್ಣಕ್ರಿಯೆ:
ಖಾಲಿ ಹೊಟ್ಟೆಯಲ್ಲಿ ಕರಿಬೇವು ಸೇವಿಸುವುದರಿಂದ ಜೀರ್ಣಕ್ರಿಯೆಗೆ ಸಹಾರಿಯಾಗಲಿದ್ದು, ದೇಹದಲ್ಲಿನ ವಾಯು ಅಂಶ ಕಡಿಮೆಯಾಗುತ್ತದೆ.

ತೂಕ ಇಳಿಕೆ:
ಕರಿಬೇವನ್ನು ಅಗೆದು ತಿನ್ನುವುದರಿಂದ ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಸುಧಾರಿಸಿ ತೂಕ ಇಳಿಸೋಕೆ ಸಹಾಯ ಮಾಡುತ್ತದೆ.

ಮಧುಮೇಹ:
ಕರಿಬೇವಿನಲ್ಲಿರುವ ಆಂಟಿ ಆಕ್ಸಿಡೆಂಟ್ ಅಂಶವು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸುತ್ತದೆ.

ರಕ್ತಹೀನತೆ:
ಇದಲ್ಲಿರುವ ಕಬ್ಬಿಣಾಂಶವು ರಕ್ತದ ಕೊರತೆಯನ್ನು ನೀಗಿಸುತ್ತದೆ. ದೇಹದಲ್ಲಿ ರಕ್ತ ಸಂಚಾರವನ್ನು ಸುಲಭಗೊಳಿಸುವಲ್ಲಿ ಕರಿಬೇವು ಪ್ರಮುಖ ಪಾತ್ರ ವಹಿಸುತ್ತದೆ.

ಕಣ್ಣಿಗೆ ಆರೈಕೆ:
ಕರಿಬೇವಿನಲ್ಲಿ ಹೆಚ್ಚು ವಿಟಮಿನ್ ಎ ಅಂಶಗಳಿದ್ದು, ಇದು ಕಣ್ಣಿನ ದೃಷ್ಟಿಯನ್ನು ಸುಧಾರಿಸುತ್ತದೆ.

ಹಲ್ಲಿಗೆ ಶಕ್ತಿ:
ಇದರಲ್ಲಿ ಆಂಟಿ ಬ್ಯಾಕ್ಟೀರಿಯಲ್ ಹಾಗೂ ಆಂಟಿ ಮೈಕ್ರೋಬಲ್ ಅಂಶಗಳಿದ್ದು, ಇದು ಹಲ್ಲಿನ ಗಮ್, ಇನ್ಫೆಕ್ಷನ್ ಗಳನ್ನು ತೆಗೆದು ಹಾಕುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss