ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, June 25, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಪ್ರತಿದಿನ ಬೆಳಗ್ಗೆ ಖರ್ಜೂರ ಸೇವಿಸುತ್ತೀರಾ? ಅದರ ಸೇವನೆಯಿಂದ ಎಷ್ಟೆಲ್ಲಾ ಲಾಭವಿದೆ ನೋಡಿ

ಡ್ರೈ ಫ್ರೂಟ್ಸ್ ಸೇವಿಸುವುದರಿಂದ ಮೂಳೆ, ಹೃದಯ, ಚರ್ಮದ ಆರೋಗ್ಯ ವೃದ್ಧಿಸುತ್ತದೆ. ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಖರ್ಜೂರ ಸೇವಿಸುವುದರಿಂದ ಎಷ್ಟೆಲ್ಲಾ ಲಾಭ ಇದೆ ನೋಡಿ…

ಮಲಬದ್ಧತೆ:
ಖರ್ಜೂರದಲ್ಲಿರುವ ನಾರಿನಾಂಶವು ಉತ್ತಮ ಜೀರ್ಣಕ್ರಿಯೆಗೆ ಸಹಕಾರಿಯಾಗಲಿದ್ದು, ಮಲಬದ್ಧತೆ ಸಮಸ್ಯೆಯನ್ನು ದೂರ ಮಾಡುತ್ತದೆ.

ಹಸಿವು ಕಡಿಮೆ:
ಪ್ರತಿ ದಿನ ಬೆಳಗ್ಗೆ ಖರ್ಜೂರ ಸೇವಿಸುವುದರಿಂದ ದಿನವಿಡೀ ನಿಮಗೆ ಶಕ್ತಿ ಕೊಡುವುದರ ಜೊತೆಗೆ ಹಸಿವು ಕಡಿಮೆ ಮಾಡುತ್ತದೆ.

ತ್ವಚೆಯ ಆರೋಗ್ಯ:
ಇದರಲ್ಲಿರುವ ವಿಟಮಿನ್ ಸಿ ಅಂಶಗಳು ಚರ್ಮದ ಮೇಲಿನ ಸುಕ್ಕು ಕಡಿಮೆ ಮಾಡುತ್ತದೆ. ಜೊತೆಗೆ ಚರ್ಮವನ್ನು ಸೂರ್ಯನ ಕಿರಣಗಳಿಂದ ರಕ್ಷಿಸುತ್ತದೆ.

ಹೃದಯಕ್ಕೆ ಶಕ್ತಿ:
ಖರ್ಜೂರ ಸೇವಿಸುವುದರಿಂದ ಹೃದಯ ಸಂಬಂಧಿ ಕಾಯಿಲೆಗಳನ್ನು ದೂರ ಮಾಡುತ್ತದೆ. ಜೊತೆಗೆ ರಕ್ತ ಸಂಚಲನವನ್ನು ವೃದ್ಧಿಸುತ್ತದೆ.

ಕೊಲೆಸ್ಟ್ರಾಲ್:
ನಿಯಮಿತವಾದ ಖರ್ಜೂರ್ ಸೇವನೆಯಿಂದ ಒತ್ತಡ ನಿಯಂತ್ರಿಸಲು ಹಾಗೂ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಕಾರಿಯಾಗಲಿದೆ.

ಮಧುಮೇಹ:
ಇದರಲ್ಲಿ ಕಡಿಮೆ ಗ್ಲಿಸೆಮಿಕ್ ಅಂಶವಿದ್ದು, ಇದು ರಕ್ತದಲ್ಲಿನ ಸಕ್ಕರೆ ಅಂಶವನ್ನು ಕಡಿಮೆ ಮಾಡುತ್ತದೆ.

ಮೆದುಳಿನ ಆರೋಗ್ಯ:
ಇದರಲ್ಲಿನ ವಿಟಮಿನ್ಸ್ , ನ್ಯೂಟ್ರಿಯೆಂಟ್ಸ್ ನಿಂದ ಮೆದುಳಿನ ಆರೋಗ್ಯ ವೃದ್ಧಿಯಾಗುವುದರೊಂದಿಗೆ ನೆನಪಿನ ಶಕ್ತಿಯೂ ಹೆಚ್ಚಾಗಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss