ತೊಂಡೆಕಾಯಿಯನ್ನು ಪುಟ್ಟ ಸೌತೆಕಾಯಿ ಅಂತ ಕರೆಯುವ ವಾಡಿಕೆಯೂ ಇದೆ. ಆದರೆ ಇದನ್ನು ಸೇವಿಸುವುದರಿಂದ ಮಧುಮೇಹಿಗಳ ಆರೋಗ್ಯಕ್ಕೆ ತುಂಬಾ ಉತ್ತಮ. ಅಷ್ಟು ಮಾತ್ರವಲ್ಲದೆ ಇತರೆ ಸಮಸ್ಯೆಗಳಿಗೆ ಇದರಲ್ಲಿದೆ ಪರಿಹಾರ. ಯಾವುವು ನೋಡಿ.
ಬೊಜ್ಜು:
ತೊಂಡೆಕಾಯಿಯಲ್ಲಿ ಕಡಿಮೆ ಕ್ಯಾಲೊರಿಗಳಿದ್ದು, ಇದನ್ನು ಕ್ರಮವಾಗಿ ಆಹಾರಗಳಲ್ಲಿ ಸೇವಿಸುವುದರಿಂದ ಬೊಜ್ಜು ಕಡಿಮೆಯಾಗುತ್ತದೆ.
ತ್ವಚೆ:
ಇದರಲ್ಲಿರುವ ವಿಟಮಿನ್ ಸಿ ಅಂಶವು ತ್ವಚೆಯ ಕಾಂತಿ ಹೆಚ್ಚಿಸುತ್ತದೆ. ಜೊತೆಗೆ ತ್ವಚೆಯಲ್ಲಿ ಮೂಡುವ ಸುಕ್ಕುಗಳನ್ನು ಕಡಿಮೆಮಾಡುತ್ತದೆ.
ಜೀರ್ಣಕ್ರಿಯೆ:
ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿರುವವರಿಗೆ ತೊಂಡೆಕಾಯಿ ಒಂದು ಉತ್ತಮ ಆಯ್ಕೆ. ಇದರಲ್ಲಿ ಅಧಿಕ ನಾರಿನಾಂಶವಿದು, ಇದನ್ನು ಸೇವಿಸುವುದರಿಂದ ಜೀರ್ಣಕ್ರಿಯೆ ಸರಾಗವಾಗುತ್ತದೆ.
ಕಿಡ್ನಿ ಸ್ಟೋನ್:
ಇದರಲ್ಲಿರುವ ಕ್ಯಾಲ್ಶಿಂ ಅಂಶವು ಕಿಡ್ನಿ ಸ್ಟೋನ್ ಸಮಸ್ಯೆಯನ್ನು ದೂರಮಾಡುತ್ತದೆ.
ಹೃದಯಕ್ಕೆ ಉತ್ತಮ:
ಇದರಲ್ಲಿ ಪೊಟಾಶಿಯಂ ಅಂಶ ಹೆಚ್ಚಾಗಿದ್ದು, ಇದರಿಂದ ದೇಹದಲ್ಲಿ ರಕ್ತ ಸಂಚಾಋ ಸುಗಮಗೊಳ್ಳುವುದರ ಜೊತೆಗೆ ಹೃದಯ ಸಂಬಂಧಿ ಸಮಸ್ಯೆಗಳನ್ನು ದೂರ ಮಾಡುತ್ತದೆ.
ಮಧುಮೇಹ:
ತೊಂಡೆಕಾಯಿ ಸೇವಿಸುವುದರಿಂದ ರಕ್ತದಲ್ಲಿನ ಸಕ್ತರೆ ಮಟ್ಟವು ಕಡಿಮೆಯಾಗುತ್ತದೆ.