ಮುಟ್ಟಿನ ದಿನಗಳಲ್ಲಿ ವ್ಯಾಯಾಮ ಮಾಡಬಹುದಾ? ಇಲ್ಲಿದೆ ಉತ್ತರ..

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಹೆಣ್ಣಿಗೆ ತಿಂಗಳಲ್ಲಿ ನಾಲ್ಕು ದಿನ ಮುಟ್ಟಿನಲ್ಲಿ ಕಳೆಯೋದು ಸಾಮಾನ್ಯ. ಆದರೆ ಈ ಹೊತ್ತಿನಲ್ಲಿ ಆಕೆಗೆ ದೈಹಿಕವಾಗಿ ಆಗಬಹುದಾದ ಹಲವು ಆರೋಗ್ಯ ಸಮಸ್ಯೆಗಳಿಂದ ಆಕೆ ಮಾನಸಿಕವಾಗಿ ಕುಗ್ಗಿ ಹೋಗುತ್ತಾಳೆ. ಪ್ರತಿದಿನ ಮಾಡುವ ವ್ಯಾಯಾಮವನ್ನು ಕೆಲ ಮಹಿಳೆಯರು ಪೀರಿಯಡ್ಸ್‌ ಸಮಯದಲ್ಲಿ ಬಿಟ್ಟು ಬಿಡುತ್ತಾರೆ. ಪೀರಿಯಡ್ಸ್‌ ಸಮಯದಲ್ಲಿ ವ್ಯಾಯಾಮ ಮಾಡೋದ್ರಿಂದ ಏನೆಲ್ಲಾ ಲಾಭ ಇದೆ ಗೊತ್ತಾ?

  • ವ್ಯಾಯಾಮ ಮಾಡಿದರೆ ಪೀರಿಯಡ್ಸ್‌ ಸರಿಯಾಗಿ ಆಗುತ್ತದೆ.
  • ಇದರಿಂದ ಹೊಟ್ಟೆ ನೋವು, ಬ್ಲೀಡಿಂಗ್‌ ಕೂಡ ಕಡಿಮೆ ಆಗುತ್ತದೆ.
  • ದಿನವಿಡೀ ನಿಮ್ಮನ್ನು ಆಕ್ಟೀವ್‌ ಆಗಿರಿಸುತ್ತದೆ.
  • ನಿಮ್ಮ ದೇಹಕ್ಕೆ ವ್ಯಾಯಮ ಸಿಕ್ಕರೆ ಪೀರಿಯಡ್ಸ್‌ ನಲ್ಲಿ ಸುಸ್ತು, ತಲೆ ಸುತ್ತು ಬರೋದಿಲ್ಲ.
  • ದೇಹದಲ್ಲಿ ರಕ್ತ ಸಂಚಲನ ಹೆಚ್ಚಾಗುತ್ತದೆ.
  • ಪೀಡಿಯಡ್ಸ್‌ ಸಮಯದಲ್ಲಿ ಕಾಡುವ ಹೊಟ್ಟೆ ಉಬ್ಬರ ಕಡಿಮೆ ಆಗುತ್ತದೆ.
  • ಸರಳ ವ್ಯಾಯಾಮ ಹಾಗೂ ಧ್ಯಾನ ಮಾಡುವುದರಿಂದ ತಲೆ ನೋವು, ಸಿಟ್ಟು ಬರೋದಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!