spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Monday, September 20, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಕಮಲದ ಹೂವು ಗೊತ್ತು, ಅದರ ಬೇರಿನ ಪ್ರಯೋಜನಗಳ ಬಗ್ಗೆ ಎಂದಾದರೂ ತಿಳಿದಿದ್ದೀರಾ? ಇಲ್ಲಿದೆ ನೋಡಿ

- Advertisement -Nitte

ಮಣ್ಣಿನಲ್ಲಿ ಬೆಳೆಯುವ ಆಲೂಗಡ್ಡೆ, ಕ್ಯಾರೆಟ್, ಬಿಟ್ರೂಟ್ ಮಾತ್ರವಲ್ಲ ಕೆಸರಿನಲ್ಲಿ ಬೆಳೆಯುವ ಕಮಲದ ಬೇರನ್ನು ಕೂಡ ಸೇವಿಸಬಹುದು ಎಂದು ಎಷ್ಟೋ ಜನರಿಗೆ ತಿಳಿದೇ ಇಲ್ಲ. ಹೌದೂ… ಕಮದ ಬೇರುಗಳಿಂದ ವಿಶೇಷವಾದ ಖಾದ್ಯಗಳನ್ನು ತಯಾರಿಸಬಹುದು. ಅಷ್ಟೇ ಅಲ್ಲ ಇದರ ಬೇರುಗಳಲ್ಲಿ ಸಾಕಷ್ಟು ಆರೋಗ್ಯಕರ ಲಾಭಗಳಿವೆ. ಏನೆಲ್ಲ ಲಾಭಗಳಿವೆ ನೋಡಿ..

ಜೀರ್ಣಕ್ರಿಯೆ:
ಕಮಲದ ಬೇರನ್ನು ಸೇವಿಸುವುದರಿಂದ ಜೀರ್ಣಕ್ರಿಯೆ ವ್ಯವಸ್ಥೆ ಸುಧಾರಿಸುತ್ತದೆ. ಇದರಿಂದ ಮಲಬದ್ಧತೆ ಸಮಸ್ಯೆ ಕೂಡ ಕಡಿಮೆಯಾಗಲಿದೆ.

ರಕ್ತದೊತ್ತಡ: ಇದರಲ್ಲಿರುವ ಪೊಟಾಶಿಯಂ ಅಂಶವು ರಕ್ತ ಸಂಚಲನವನ್ನು ಸರಾಗವಾಗಿಸುತ್ತದೆ. ಇದರಿಂದ ರಕ್ತದೊತ್ತಡ ನಿವಾರಣೆಯಾಗಲಿದೆ.

ಹೃದಯ ಸಮಸ್ಯೆ: ಕಮಲದ ಬೇರು ಸೇವಿಸುವುದರಿಂದ ಕೊಲೆಸ್ಟ್ರಾಲ್ ಕಡಿಮೆಯಾಗಿ ಹೃದಯದ ಸಮಸ್ಯೆ ಕಡಿಮೆಯಾಗಲಿದೆ.

ಒತ್ತಡ: ಕಮಲದ ಬೇರನ್ನು ಹೆಚ್ಚು ಸೇವಿಸುವುದರಿಂದ ಸಿರೋಟೋನಿನ್ ಹಾಗೂ ಡೋಪಮೈನ್ ಉತ್ಪತ್ತಿಯಾಗಲಿದ್ದು, ಇದರಿಂದ ಒತ್ತಡ ನಿವಾರಣೆಯಾಗಲಿದೆ.

ಕೂದಲು, ಚರ್ಮ: ಈ ಬೆರಿನಲ್ಲಿರುವ ವಿಟಮಿನ್ ಬಿ ಹಾಗೂ ಸಿ ಅಂಶಗಳು ಕೂದಲನ್ನು ಮೃದು ಹಾಗೂ ಕಪ್ಪು ಮಾಡಲಿದೆ. ಜೊತೆಗೆ ಚರ್ಮದ ಕಾಂತಿಯನ್ನು ಹೆಚ್ಚಿಸಲಿದೆ.

ತೂಕ ಇಳಿಕೆ: ಇದರಲ್ಲಿ ನಾರಿನಾಂಶವಿದ್ದು, ದಿನನಿತ್ಯ ಇದರ ಬೇರಿನ ಕಷಾಯ ತಯಾರಿಸಕೊಂಡು ಸೇವಿಸಿದರೆ ತೂಕ ಸಮತೋಲನಕ್ಕೆ ಬರಲಿದೆ.

ಕ್ಯಾನ್ಸರ್: ಇದರಲ್ಲಿರುವ ವಿಟಮಿನ್ ಸಿ,ಡಿ,ಯು ಅಂಶಗಳು ಕ್ಯಾನ್ಸರ್ ವಿರೋಧಿ ಸೆಲ್ ಗಳನ್ನು ಹೆಚ್ಚಿಸುತ್ತದೆ. ಪ್ರತಿ ದಿನ ಕಮಲದ ಬೇರನ್ನು ಸೇವಿಸಿದರೆ ಆರೋಗ್ಯ ವೃದ್ಧಿ ಸಾದ್ಯ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss