spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Monday, September 20, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಎಲ್ಲಾ ರೀತಿಯ ಗಂಟಲು ಸಮಸ್ಯೆಗೂ ಉಪ್ಪು ನೀರಿನಲ್ಲಿದೆ ಪರಿಹಾರ: ಹೇಗೆ ನೋಡಿ!

- Advertisement -Nitte

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ಆನ್ ಲೈನ್ ಡೆಸ್ಕ್:

ಗಂಟಲು ನೋವು, ಹೊಟ್ಟು ಕೆಮ್ಮು, ಗಂಟಲು ಕೆರೆತ ಈ ರೀತಿಯ ಎಲ್ಲ ಗಂಟಲು ಸಮಸ್ಯೆಗೂ ಉಗುರು ಬಿಸಿ ಉಪ್ಪು ನೀರಿನಲ್ಲಿಯೇ ಇದೆ ಪರಿಹಾರ. ಚಿಕ್ಕ ಪುಟ್ಟ ಆರೋಗ್ಯ ಸನಸ್ಯೆಗಳಿಗೆ ಆಸ್ಪತ್ರೆಗೆ ಹೋಗುವ ಬದಲು ಮನೆಮದ್ದು ಟ್ರೈ ಮಾಡಿ. ನಿಮಗೆ ಗಂಟಲು ಸಂಬಂಧಿತ ಸಮಸ್ಯೆ ಎದುರಾದರೆ ಈ ಔಷಧಗಳನ್ನು ಮನೆಯಲ್ಲಿಯೇ ಟ್ರೈ ಮಾಡಿ..
ಗಂಟಲು ನೋವು:
ಉಗುರು ಬಿಸಿ ನೀರಿಗೆ ಉಪ್ಪು ಸೇರಿಸಿ ಬಾಯಿಮುಕ್ಕಳಿಸಿದರೆ ಗಂಟಲು ನೋವು ನಿವಾರಣೆಯಾಗುತ್ತದೆ.
ಗಂಟಲು ಕೆರೆತ:
ನೀರಿಗೆ ಉಪ್ಪು, ಶುಂಠಿ, ಲವಂಗ ಸೇರಿಸಿ ಕುದಿಸಿ, ನಂತರ ಅದರಿಂದ ಬಾಯಿ ಮುಕ್ಕಳಿಸಿದರೆ ಗಂಟಲು ಕೆರೆತ ನಿವಾರಣೆಯಾಗುತ್ತದೆ.
ಕಫ:
ಶುಂಠಿ ರಸ ತೆಗೆದು ಅದಕ್ಕೆ ಜೇನುತುಪ್ಪ ಮತ್ತು ಉಪ್ಪು ನೀರು ಸೇರಿ ದಿನದಲ್ಲಿ ೫ ಸಲ ಒಂದು ಚಮಚ ಸೇವಿಸಿದರೆ ಕಫ ಕರಗುತ್ತದೆ.
ಒಣ ಕೆಮ್ಮು:
ಉಪ್ಪು ನೀರಿಗೆ ಏಲಕ್ಕಿ ಪುಡಿ ಹಾಕಿಕೊಂಡು ದಿನದಲ್ಲಿ ಅರ್ಧ ಕಪ್ ಸೇವಿಸುವುದರಿಂದ ಒಣ ಕೆಮ್ಮು ನಿವಾರಣೆಯಾಗುತ್ತದೆ.
ಗಂಟಲು ಬಾವು:
ಶೇಡಿ ಮಣ್ಣು ಅಥವಾ ಹುತ್ತದ ಮಣ್ಣಿಗೆ ಉಪ್ಪು ನೀರನ್ನು ಸೇರಿಸಿ, ದೋಸೆ ಹಿಟ್ಟಿನ ಹದಕ್ಕೆ ಕಲಸಿಕೊಂಡು ಗಂಟಲಿಗೆ ಹಚ್ಚಿಕೊಳ್ಳುವುದಿಂದ ಗಂಟಲು ಬಾವು ಕಡಿಮೆ ಆಗುತ್ತದೆ.
- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss