ಸಿಪಿಐ(ಎಂ) ನಾಯಕ ತಾಜ್ ಉದ್ದೀನ್ ಮಲ್ಲಿಕ್ ಮನೆಯಲ್ಲಿ ಬಾಂಬ್‌ ಪತ್ತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಪಶ್ಚಿಮ ಬಂಗಾಳ ಪೊಲೀಸರು ದಕ್ಷಿಣ 24 ಪರಗಣ ಜಿಲ್ಲೆಯ ಸಿಪಿಐ(ಎಂ) ನಾಯಕ ತಾಜ್ ಉದ್ದೀನ್ ಮಲ್ಲಿಕ್ ಮನೆಯಿಂದ ಬಾಂಬ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು, ಬರುಯಿಪುರದ ಭಾನಾರ್‌ನ ಶಾಕ್ಷಹರ್ ಪ್ರದೇಶದಲ್ಲಿನ ಮಲ್ಲಿಕ್ ಮನೆಯ ಮೇಲೆ ದಾಳಿ ನಡೆಸಿ ಬಕೆಟ್‌ಗಳಲ್ಲಿ ಸಂಗ್ರಹಿಸಿಟ್ಟಿದ್ದ ಸ್ಫೋಟಕಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಘಟನೆಯಲ್ಲಿ ಮಲ್ಲಿಕ್ ನನ್ನು ಬಂಧಿಸಿ ಬರುಯಿಪುರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಏತನ್ಮಧ್ಯೆ, ಈ ಪ್ರದೇಶದಲ್ಲಿ ಭಯೋತ್ಪಾದನೆಯನ್ನು ಹರಡಲು ಬಾಂಬ್‌ಗಳನ್ನು ಬಳಸಲಾಗುತ್ತಿತ್ತು ಎಂದು ತೃಣಮೂಲ ಕಾಂಗ್ರೆಸ್ ಆರೋಪಿಸಿದೆ. ಟಿಎಂಸಿ ಜಿಲ್ಲಾ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಬಹರುಲ್ ಇಸ್ಲಾಂ ಮಾತನಾಡಿ, ಬಾಂಬ್ ರಾಜಕಾರಣದ ಅಭ್ಯಾಸವನ್ನು ಸಿಪಿಐ(ಎಂ) ಇನ್ನೂ ಬಿಡಲು ಸಾಧ್ಯವಾಗಿಲ್ಲ. 34 ವರ್ಷಗಳ ಕಾಲ ಅವರು ಈ ಬ್ರಾಂಡ್ ರಾಜಕೀಯವನ್ನು ಅನುಸರಿಸಿದ್ದಾರೆ. ಅವರು ಭಯೋತ್ಪಾದನೆಯನ್ನು ಪುನರುಜ್ಜೀವನಗೊಳಿಸಲು ಬಯಸುತ್ತಾರೆ ಎಂದು ಆರೋಪಿಸಿದೆ.
ಆರೋಪವನ್ನು ಅಲ್ಲಗಳೆದ ಸಿಪಿಐ(ಎಂ), ಮಲ್ಲಿಕ್ ಅವರನ್ನು ಅನಗತ್ಯವಾಗಿ ಬಂಧಿಸಲಾಗಿದೆ ಎಂದು ಆರೋಪಿಸಿದೆ. ಅದರ ನಾಯಕರ ವಿರುದ್ಧದ ಭ್ರಷ್ಟಾಚಾರ ಪ್ರಕರಣಗಳಿಂದ ರಾಜ್ಯದಲ್ಲಿ ಟಿಎಂಸಿ ಆಡಳಿತ ಕೊನೆಗೊಳ್ಳಲಿದೆ. ಆದ್ದರಿಂದ ಅವರು ನಮ್ಮ ನಾಯಕರ ನೈತಿಕ ಸ್ಥೈರ್ಯವನ್ನು ಮುರಿಯಲು ಪ್ರಯತ್ನಿಸುತ್ತಿದ್ದಾರೆ ಎಂದು ದಕ್ಷಿಣ 24 ಪರಗಣಗಳ ಸಿಪಿಐ(ಎಂ) ನಾಯಕ ಉತ್ಪಲ್ ಮೊಂಡಲ್ ಕಿಡಿಕಾರಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!