ಬೆಂಗಳೂರಿನಲ್ಲಿ ಒಂದು ವರ್ಷದ ಅವಧಿಯಲ್ಲಿ ಶೇ.40 ರಷ್ಟು ಹದಗೆಟ್ಟ ಗಾಳಿ ಗುಣಮಟ್ಟ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಗಾರ್ಡನ್ ಸಿಟಿ ಬೆಂಗಳೂರಿನಲ್ಲಿ ಗಾಳಿಯ ಗುಣಮಟ್ಟವು ಒಂದು ವರ್ಷದ ಅವಧಿಯಲ್ಲಿ 40 ಪ್ರತಿಶತದಷ್ಟು ಕ್ಷೀಣಿಸಿದ ಆಘಾತಕಾರಿ ವರದಿ ಹೊರಬಿದ್ದಿದೆ.
ಕಳೆದ ವರ್ಷ ನವೆಂಬರ್‌ನಲ್ಲಿ ನಗರದಲ್ಲಿ ಗಾಳಿಯ ಗುಣಮಟ್ಟ ಸೂಚ್ಯಾಂಕ 66 ರಷ್ಟಿತ್ತು, ಅದಕ್ಕೆ ಹೋಲಿಸಿದರೆ ಈ ವರ್ಷದ ನವೆಂಬರ್‌ನಲ್ಲಿ 93 ಕ್ಕೆ ಏರಿದೆ ಎಂದು ವರದಿಯೊಂದು ತಿಳಿಸಿದೆ. ಚಳಿಗಾಲದ ನೈಸರ್ಗಿಕ ಪರಿಸ್ಥಿತಿಗಳು ಮತ್ತು ಟ್ರಾಫಿಕ್ ನಿಂದ ಮಾಲಿನ್ಯ ಹೊರಸೂಸುವಿಕೆ  ಎಕ್ಯೂಐ (ವಾಯು ಗುಣಮಟ್ಟ ಸೂಚ್ಯಂಕ) ಏರಿಕೆಗೆ ಕಾರಣವಾಗಬಹುದು ಎಂದು ಅಂದಾಜಿಸಲಾಗಿದೆ.
ಸೋಮವಾರ ಬೆಳಿಗ್ಗೆ ನಗರದಲ್ಲಿ ವಾಯು ಗುಣಮಟ್ಟ ಅತ್ಯಂತ ಕಳಪೆಯಾಗಿದ್ದು 185 ರಷ್ಟಿತ್ತು. ಇದು ವಿಶ್ವ ಆರೋಗ್ಯ ಸಂಸ್ಥೆಯ (WHO) 24-ಗಂಟೆಗಳ ಗಾಳಿಯ ಗುಣಮಟ್ಟದ ಮಾರ್ಗಸೂಚಿಗಳ ಮೌಲ್ಯವು ನೀಡಿದ ಶಿಫಾರಸು ಮಿತಿಗಿಂತ 5.7 ಪಟ್ಟು ಹೆಚ್ಚಾಗಿದೆ ಎಂದು AQI.in ವೆಬ್‌ಸೈಟ್ ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!