Pro kabaddi 2022| ಶುಭಾರಂಭ ಮಾಡಿದ ಬೆಂಗಳೂರು ಬುಲ್ಸ್: ಮತ್ತೊಂದು ಪಂದ್ಯದಲ್ಲಿ ಗೆದ್ದುಬೀಗಿದ ದಬಾಂಗ್ ಡೆಲ್ಲಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ವಿವೋ ಪ್ರೊ ಕಬಡ್ಡಿ ಲೀಗ್ ಸೀಸನ್ 9 ಗೆ ಭರ್ಜರಿ ಆರಂಭ ಸಿಕ್ಕಿದೆ. ಆರಂಭಿಕ ದಿನದ ಎರಡನೇ ಪಂದ್ಯದಲ್ಲಿ ಶುಕ್ರವಾರ ರಾತ್ರಿ ಬೆಂಗಳೂರು ಬುಲ್ಸ್ ತಮ್ಮ ತವರಿನ ಅಭಿಮಾನಿಗಳಿಗೆ ಅದ್ಭುತ ಪ್ರದರ್ಶನ ನೀಡಿದರು. ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ತೆಲುಗು ಟೈಟಾನ್ಸ್ ಅವರನ್ನು 34-29 ರಿಂದ ಸೋಲಿಸುವ ಮೂಲಕ ಟೂರ್ನಿಯಲ್ಲಿ ಶುಭಾರಂಭ ಮಾಡಿದರು. ಬುಲ್ಸ್‌ ಪರ ನೀರಜ್ ನರ್ವಾಲ್ ಏಳು ಅಂಕಗಳೊಂದಿಗೆ ಭರ್ಜರಿ ಪ್ರದರ್ಶನ‌ತೋರಿದರು. ವಿಕಾಶ್ ಕಾಂಡೋಲಾ ಮತ್ತು ಭರತ್ ಜೋಡಿಯು ತಲಾ ಐದು ಪಾಯಿಂಟ್ ಕಲೆಹಾಕುವುದರೊಂದಿಗೆ ಅಭಿಯಾನವನ್ನು ಗೆಲುವಿನೊಂದಿಗೆ ಪ್ರಾರಂಭಿಸಲು ನೆರವಾದರು.
ಟೈಟಾನ್ಸ್ ಪರ ಯುವ ರೈಡರ್ ವಿನಯ್ ಮೊದಲ ರೈಡ್ ನಲ್ಲೇ ಟಚ್ ಮೂಲಕ ಪಾಯಿಂಟ್ ದೊರಕಿಸಿಕೊಟ್ಟರು. ಸಿದ್ಧಾರ್ಥ್ ದೇಸಾಯಿ ಮತ್ಯೊಂದು ತುದಿಯಲ್ಲಿ ಉತ್ತಮ‌ ದಾಳಿ‌ನಡೆಸಿದರು. ಹೊಂದಾಣಿಕೆಯ ಅಟವಾಡುತ್ತಿದ್ದ ತೆಲುಗು ಟೈಟಾನ್ಸ್‌ನೊಂದಿಗೆ ಎದುರಾಳಿ ಪಾಳೆಯದಲ್ಲಿ ಭರತ್, ಸೌರಭ್ ನಂದಲ್ ಮತ್ತು ನೀರಜ್ ನರ್ವಾಲ್ ಸವಾಲಾದರು. ಆರಂಭಿಕ ಹಿನ್ನಡೆಯಿಂಂದ ಬುಲ್ಸ್ ಉತ್ತಮವಾಗಿ ಕಮ್ ಬ್ಯಾಕ್ ಮಾಡಿತು.
ಬುಲ್ಸ್ ಮೊದಲಾರ್ಧದ ವಿರಾಮಕ್ಕೆ ಸ್ವಲ್ಪ ಮೊದಲು ಟೈಟಾನ್ಸ್ ಅನ್ನು ಆಲ್-ಔಟ್ ಮಾಡಿ ಐದು ಪಾಯಿಂಟ್‌ಗಳ ಮುನ್ನಡೆ ಸಾಧಿಸಿತು. ಕೆಲವೇ ಕ್ಷಣಗಳಲ್ಲಿ ತಿರುಗೇಟು ನೀಡಿದ ತೆಲುಗು ಟೈಟಾನ್ಸ್ ರಜನೀಶ್ ಅವರ ಸೂಪರ್ ರೈಡ್ ಬಲದಿಂದ ಸಮಬಲ‌ಸಧಿಸಿತು. ಎರಡೂ ತಂಡಗಳು 17-17 ರಲ್ಲಿ ವಿರಾಮಕ್ಕೆ ಹೋದವು. ವಿರಾಮದ ಬಳಿಕ ರಜನೀಶ್ ಬುಲ್ಸ್‌ ತಂಡವನ್ನಿ ಆಲ್-ಔಟ್ ಮಾಡಿದರು.
ದ್ವಿತೀಯಾರ್ಧ ಸ್ವಲ್ಪ ನಿಧಾನವಾಗಿ ಆರಂಭವಾದರೂ ಟೈಟಾನ್ಸ್ ಮೊದಲ ಐದು ನಿಮಿಷಗಳಲ್ಲಿ ಅಲ್ಪ ಮುನ್ನಡೆ ಸಾಧಿಸಿತು. ಆದಾಗ್ಯೂ, ಬುಲ್ಸ್ ಶೀಘ್ರದಲ್ಲೇ ಆಟಕ್ಕೆ ಮರಳಿತು. ನೀರಜ್ ಅವರು ಡು ಆರ್ ಡೈ ರೈಡ್‌ನಲ್ಲಿ ಪಾಯಿಂಟ್‌ಗಳನ್ನು ತಂದು ಸ್ಪರ್ಧೆಯನ್ನು ಸಮಸ್ಥಿತಿಗೆ ತಂದರು. ಪಂದ್ಯ ಮುಕ್ತಾಯಕ್ಕೆ ಒಂಬತ್ತು ನಿಮಿಷಗಳು ಉಳಿದಿರುವಾಗ, ಎರಡೂ ತಂಡಗಳು 23-23 ರಲ್ಲಿ ಸಮಬಲ‌ ಸಾಧಿಸಿದ್ದವು.
ವಿಶಾಲ್ ಭಾರದ್ವಾಜ್ ಒಂದೆರಡು ದೊಡ್ಡ ಅಂಕಗಳನ್ನು ಬಿಟ್ಟುಕೊಟ್ಟಿದ್ದು ಟೈಟಾನ್ಸ್‌ಗೆ ಮುಳುವಾಯಿತು. ಅಲ್ಲಿಂದೀಚೆಗೆ, ಬುಲ್ಸ್ ಟೈಟಾನ್ಸ್ ಅನ್ನು ಮತ್ತೊಮ್ಮೆ ಆಲ್-ಔಟ್ ಮಾಡಿ ಅಂಕಗಳ ಮುನ್ನಡೆಯನ್ನು 30-25 ಕ್ಕೆ ತೆಗೆದುಕೊಂಡಿತು.
ಬುಲ್ಸ್‌ನ ರಕ್ಷಣಾ ವಿಭಾಗವು ಅತ್ಯುತ್ತಮವಾಗಿತ್ತು, ತ್ವರಿತ ವೇಗದಲ್ಲಿ ಪಾಯಿಂಟ್‌ಗಳನ್ನು ಗಳಿಸಿತು. ಟೈಟಾನ್ಸ್‌(7)ಗೆ ಹೋಲಿಸಿದರೆ 12 ಟ್ಯಾಕಲ್ ಪಾಯಿಂಟ್‌ಗಳನ್ನು ದಾಖಲಿಸಿದ ಬುಲ್ಸ್, ಮೊದಲ‌ ಪಂದ್ಯನ್ನು ವಿಜೇತರಾಗಿ ಕೊನೆಗೊಳಿಸಿದರು.

ಡೆಲ್ಲಿಗೆ ಭರ್ಜರಿ ಜಯ:
ಹಾಲಿ ಚಾಂಪಿಯನ್‌ ದಬಾಂಗ್‌ ಡೆಲ್ಲಿ ತಂಡವು ಯು ಮುಂಬಾ ವಿರುದ್ಧ 41-27 ಅಂತರದಲ್ಲಿ ಜಯ ಗಳಿಸುವ ಮೂಲಕ ಟೂರ್ನಿಯ ಉದ್ಘಾಟಬನಾ ಪಂದ್ಯದಲ್ಲಿ ಶುಭಾರಂಭ ಮಾಡಿತು.ಡೆಲ್ಲಿ ತಂಡದ ನಾಯಕ ನಾಯಕ ನವೀನ್‌ ಭರ್ಜರಿ ದಾಳಿ ನಡೆಸಿ 13 ಅಂಕಗಳನ್ನು ಗಳಿಸಿದರು. ಇದರಲ್ಲಿ 11 ಟಚ್‌ ಪಾಯಿಂಟ್‌, 2 ಬೋನಸ್‌ ಪಾಯಿಂಟ್‌ ಸೇರಿತ್ತು. ದ್ವಿತೀಯಾರ್ಧದಲ್ಲೂ ಡೆಲ್ಲಿ ಉತ್ತಮವಾಗಿ ಆಡಿತು. ಡೆಲ್ಲಿ ಪರ ಮತ್ತೊಬ್ಬ ರೈಡರ್‌  ಅಶು ಮಲಿಕ್‌ ಉತ್ತಮ ಪ್ರದರ್ಶನ ನೀಡಿ 7 ಅಂಕ ಗಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!