ಜೂನ್ 2025 ರ ವೇಳೆಗೆ ಬೆಂಗಳೂರಿನಲ್ಲಿ 175 ಕಿಮೀ ಮೆಟ್ರೋ ರೈಲು ಸಂಪರ್ಕ ಪೂರ್ಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಬೆಂಗಳೂರು ಮೆಟ್ರೋ ರೈಲು ಯೋಜನೆಯು ಪ್ರಗತಿಯಲ್ಲಿದೆ. ಮತ್ತು ಜೂನ್ 2025 ರ ವೇಳೆಗೆ ಇದು ನಗರದಲ್ಲಿ 175 ಕಿಮೀ ಮೆಟ್ರೋ ಪ್ರಯಾಣ ಸೌಲಭ್ಯವನ್ನು ರಾಜಧಾನಿ ಹೊಂದಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್ ಹೇಳಿದ್ದಾರೆ.
ಬೆಂಗಳೂರು ಟೆಕ್ ಶೃಂಗಸಭೆ 2022 (ಬಿಟಿಎಸ್ 2022) ರಲ್ಲಿ ‘ಮೊಬಿಲಿಟಿ ಭವಿಷ್ಯ’ ವಿಚಾರದ ಕುರಿತ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಪರ್ವೇಜ್, ಯೋಜನೆಯ ಎರಡನೇ ಮತ್ತು ಮೂರನೇ ಹಂತದ ಭಾಗವಾಗಿ, 2041 ರ ವೇಳೆಗೆ ಬೆಂಗಳೂರು 314 ಕಿಮೀ ಮೆಟ್ರೋ ರೈಲು ಸಂಪರ್ಕವನ್ನು ಹೊಂದಲಿದೆ. ವಿಮಾನ ನಿಲ್ದಾಣದ ಬದಿಯಲ್ಲಿ ಮೆಟ್ರೋ ಮಾರ್ಗಗಳ ನಿರ್ಮಾಣವು ಉತ್ತಮ ಪ್ರಗತಿಯಲ್ಲಿದೆ.
ಬಹು ಮಾದರಿ ಸಾರಿಗೆ ವ್ಯವಸ್ಥೆಗಳ ಏಕೀಕರಣ ಮತ್ತು ವೈಯಕ್ತಿಕ ಸಾರಿಗೆ ವಿಧಾನಗಳಿಂದ ಸಾರ್ವಜನಿಕ ಸಾರಿಗೆಗೆ ಬದಲಾಯಿಸಲು ಜನರನ್ನು ಪ್ರೇರೇಪಿಸುವುದು ನಗರ ಚಲನಶೀಲತೆಯ ದೊಡ್ಡ ಸವಾಲಾಗಿದೆ ಎಂದು ಪರ್ವೇಜ್ ಹೇಳಿದರು. ಪ್ರಯಾಣಿಕರು ಕೊನೆಯ ಮೈಲಿ ಸಂಪರ್ಕವನ್ನು ಹೊಂದಿದ್ದಾರೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಹಲವು ಸ್ಟಾರ್ಟ್‌ಅಪ್‌ಗಳು ಬಿಎಂಆರ್‌ಸಿಎಲ್‌ಗೆ ಹೆಚ್ಚಿನ ಬೆಂಬಲ ನೀಡುತ್ತಿವೆ. ಜನರು ಅವರ ಕೆಲಸದ ಸ್ಥಳಗಳು, ಮನೆಗಳಿಗೆ ಪ್ರಯಾಣಿಸಲು ಅನುಕೂಲ ಆಗಲಿ ಎಂದು ಬಿಎಂಆರ್‌ಸಿಎಲ್‌ ಹಲವು ವಾಹನ ಆಧಾರಿತ ಸ್ಟಾರ್ಟ್‌ಅಪ್‌ಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಅಂಜುಂ ಪರ್ವೇಜ್‌ ಈ ಸಂದರ್ಭದಲ್ಲಿ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!