Sunday, March 7, 2021

Latest Posts

ಮೊಸರನ್ನು ಹಾಗೇ ತಿಂದರೆ ಕಫ ಹೆಚ್ಚಾಗುತ್ತೆ! ಅದೇ ಈ ಪದಾರ್ಥಗಳೊಂದಿಗೆ ಬೆರೆಸಿಕೊಂಡು ತಿಂದರೆ ಆರೋಗ್ಯ ವೃದ್ಧಿಯಾಗುತ್ತೆ…!

ಮೊಸರಿನಲ್ಲಿ ಕ್ಯಾಲರಿ ಅಂಶ ಹೆಚ್ಚಾಗಿರುವುದರಿಂದ ಇದನ್ನು ಹಾಗೇ ತಿಂದರೆ ತೂಕ ಹೆಚ್ಚಾಗುತ್ತದೆ. ಅದರಲ್ಲೂ ಶ್ವಾಸಕಕೋಶದ ಸಮಸ್ಯೆ, ಉಸಿರಾಟದ ಸಮಸ್ಯೆ, ಕಫದ ಸಮಸ್ಯೆ ಇರುವವರಿಗೆ ಮೊಸರು ಋಣಾತ್ಮಕ ಪರಿಣಾಮ ಬೀರುತ್ತದೆ. ಅದೇ ನೀವು ಮೊಸರಿನೊಂದಿಗೆ ಈ ಕೆಳಗಿನ ಪದಾರ್ಥಗಳನ್ನು ಬೆರೆಸಿಕೊಂಡು ತಿಂದರೆ ಆರೋಗ್ಯ ವೃದ್ಧಿಯಾಗುತ್ತದೆ. ಯಾವ ಪದಾರ್ಥಗಳು ಇಲ್ಲಿದೆ ನೋಡಿ…

ಜೇನುತುಪ್ಪ-ಮೊಸರು:
ಮೊಸರಿನೊಂದಿಗೆ ಜೇನುತುಪ್ಪ ಬೆರೆಸಿ ತಿಂದರೆ ಹೊಟ್ಟೆಯಲ್ಲಿನ ಅಲ್ಸರ್ ಕಡಿಮೆ ಆಗುತ್ತದೆ.

ಕಾಳುಮೆಣಸು-ಮೊಸರು:
ಒಂದು ಕಪ್ಪು ಮೊಸರಿನೊಂದಿಗೆ ಸ್ವಲ್ಪ ಕಪ್ಪು ಮೆಣಸಿನ ಪುಡಿಯನ್ನು ಬೆರೆಸಿ ತಿನ್ನಬೇಕು. ಇದರಿಂದ ಮಲಬದ್ಧತೆ ದೂರವಾಗುತ್ತದೆ. ತಿಂದ ಆಹಾರ ಸರಿಯಾಗಿ ಜೀರ್ಣವಾಗುತ್ತದೆ.

ಅನ್ನ-ಮೊಸರು:
ರಾತ್ರಿ ಅನ್ನವನ್ನು ಬೆಳಿಗ್ಗೆ ಮೊಸರಿನ ಜೊತೆ ಊಟ ಮಾಡುವುದರಿಂದ ದೇಹ ತಂಪಾಗಿ ಇರುತ್ತದೆ. ಮತ್ತು ತೆಳ್ಳಗಿರುವವರು ದಪ್ಪಗಾಗಲು ಸಹಾಯವಾಗುತ್ತದೆ.

ಸಕ್ಕರೆ-ಮೊಸರು:
ಸ್ವಲ್ಪ ಮೊಸರಿನೊಂದಿಗೆ ಸಕ್ಕರೆ ಬೆರೆಸಿಕೊಂಡು ತಿನ್ನಬೇಕು. ಇದರಿಂದ ದೇಹಕ್ಕೆ ಕೂಡಲೆ ಶಕ್ತಿ ಸಿಗುತ್ತದೆ. ಮೂತ್ರಕೋಶದ ಸಮಸ್ಯೆಗಳು ದೂರವಾಗುತ್ತವೆ. ಮತ್ತು ಶುಗರ್ ಸಮಪ್ರಮಾಣದಲ್ಲಿ ಇರುತ್ತದೆ.

ಇಂಗು-ಮೊಸರು:
ಮುಟ್ಟಿನ ದಿನಗಳಲ್ಲಿ ಬರುವ ಹೊಟ್ಟೆ ನೋವು ನಿವಾರಣೆಗೆ ಮೊಸರಿಗೆ ಜಿಟಿಕೆ ಇಂಗು ಮತ್ತು ಉಪ್ಪು ಸೇರಿಸಿಕೊಂಡು ತಿನ್ನಬೇಕು. ತಕ್ಷಣ ಹೊಟ್ಟೆನೋವು ಕಡಿಮೆ ಆಗುತ್ತದೆ.

ಜೀರಿಗೆ-ಮೊಸರು:
ಜೀರಿಗೆ ಒಂದು ಚಮಚ ತೆಗೆದುಕೊಂಡು ಪುಡಿ ಮಾಡಿ ಅದನ್ನು ಒಂದು ಕಪ್ ಮೊಸರಿನಲ್ಲಿ ಬೆರೆಸಿಕೊಂಡು ತಿಂದರೆ ಶೀಘ್ರವಾಗಿ ತೂಕ ಕಡಿಮೆ ಮಾಡಿಕೊಳ್ಳಬಹುದು.

 

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

Don't Miss