ಬೆಳಗೆದ್ದು ಹಲ್ಲುಜ್ಜದೆ ನೀರು ಕುಡಿದರೆ ಯಾವೆಲ್ಲಾ ಪ್ರಯೋಜನಗಳಿವೆ ಗೊತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ನೀರು ಕುಡಿಯುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ನಿಮ್ಮಲ್ಲಿ ಬಹುತೇಕರಿಗೆ ಬೆಳಗ್ಗೆ ಎದ್ದ ತಕ್ಷಣ ಒಂದು ಲೋಟ ಬಿಸಿ ನೀರು ಕುಡಿಯುವ ಅಭ್ಯಾಸ ಇರಬಹುದು. ವಿಷಯ ಏನಪ್ಪಾ ಅಂದರೆ ಬ್ರೆಷ್‌ ಮಾಡದೆ ನೀರು ಕುಡಿದರೆ ಇನ್ನೂ ಒಳ್ಳೆಯದು. ನೀವು ಹಲ್ಲುಜ್ಜಿದ ಬಳಿಕ ನೀರು ಕುಡಿಯುವುದಕ್ಕಿಂತ ಹಲ್ಲುಜ್ಜದೆ ಕುಡಿದರೆ ಲಾಭ ಹೆಚ್ಚು.

ಬೆಳಗ್ಗೆ ನಮ್ಮ ದಿನವನ್ನು ಒಂದು ಲೋಟ ನೀರಿನಿಂದ ಪ್ರಾರಂಭಿಸಿದರೆ ನಮ್ಮ ದೇಹದಲ್ಲಿರುವ ಕಶ್ಮಲಗಳನ್ನು ಮಲ, ಮೂತ್ರ ಮೂಲಕ ಹೊರಹಾಕಲು ಸಹಾಯ ಮಾಡುತ್ತದೆ. ಬೆಳಗ್ಗೆ ಎದ್ದ ಮೇಲೆ ಬಿಸಿ ನೀರಿಗೆ ನಿಂಬೆರಸ ಸೇರಿಸಿ ಕುಡಿದರೆ ಒಳ್ಳೆಯದು. ಹೀಗೆ ಕುಡಿಯುವಾಗ ಸಾಮಾನ್ಯವಾಗಿ ನಾವು ಹಲ್ಲುಜ್ಜಿದ ಬಳಿಕ ಕುಡಿಯುತ್ತೇವೆ, ಆದರೆ ಬ್ರೆಷ್‌ ಮಾಡದೆ ನೀರು ಕುಡಿದರೆ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು, ಹೇಗೆ ಎಂದು ನೋಡೋಣ ಬನ್ನಿ.

ಬೆಳಗ್ಗೆ ಎದ್ದ ತಕ್ಷಣ ಬ್ರೆಷ್‌ ಮಾಡದೆ ನೀರು ಕುಡಿಯುವುದರಿಂದ ದೊರೆಯುವ ಪ್ರಯೋಜನಗಳು:

* ನಾವು ಮಲಗಿದ ಮೇಲೆ ಮಧ್ಯದಲ್ಲಿ ಎದ್ದು ನೀರು ಕುಡಿಯುವವರು ತಂಬಾ ಕಡಿಮೆ. ಹೆಚ್ಚಿನವರು ಮಲಗಿದರೆ ಬೆಳಗ್ಗೆ ಎಚ್ಚರವಾದ ಮೇಲಷ್ಟೇ ನೀರು ಕುಡಿಯುವುದು. ಆದ್ದರಿಂದ ಬೆಳಗ್ಗೆ ಎದ್ದ ತಕ್ಷಣ ನೀರು ಕುಡಿಯುವುದರಿಂದ ದೇಹದಲ್ಲಿ ನೀರಿನಂಶ ಕಾಪಾಡಬಹುದು.

* ನಾವು ರೋಗ ನಿರೋಧಕ ಶಕ್ತಿ ಹೆಚ್ಚಬೇಕೆಂದು ಏನೆಲ್ಲಾ ಮಾಡುತ್ತೇವೆ, ಅಂದ ಮೇಲೆ ಇಷ್ಟು ಸರಳವಾಗಿರುವ ವಿಧಾನವನ್ನು ಬಿಡಲು ಹೇಗೆ ಸಾಧ್ಯ ಅಲ್ವಾ? ಬೆಳಗ್ಗೆ ಎದ್ದ ತಕ್ಷಣ ಹಲ್ಲುಜ್ಜದೆ ನೀರು ಕುಡಿದರೆ ರೋಗ ನಿರೋಧಕ ಶಕ್ತಿ ಹೆಚ್ಚುವುದು.

* ಅಧಿಕ ರಕ್ತದೊತ್ತಡ ಸಮಸ್ಯೆ ಇರುವವರು ಈ ಅಭ್ಯಾಸ ರೂಢಿಸಿಕೊಂಡರೆ ಅಧಿಕ ರಕ್ತದೊತ್ತಡ ನಿಯಂತ್ರಣದಲ್ಲಿಡಬಹುದು. ಅಲ್ಲದೆ ಈ ಅಭ್ಯಾಸದಿಂದ ಸಕ್ಕರೆಯಂಶ ಕೂಡ ನಿಯಂತ್ರಣದಲ್ಲಿರುತ್ತದೆ.

* ಗ್ಯಾಸ್ಟ್ರಿಕ್‌ ಎಂಬುವುದು ಸರ್ವೇಸಾಮಾನ್ಯವಾಗಿ ಕಾಡುವ ಸಮಸ್ಯೆಯಾಗಿದೆ. ಅಜೀರ್ಣ ಸಮಸ್ಯೆಯಿಂದಾಗಿ ಗ್ಯಾಸ್ಟ್ರಿಕ್‌ ಉಂಟಾಗುವುದು. ಹಲ್ಲುಜ್ಜದೆ ನೀರು ಕುಡಿಯುವುದರಿಂದ ಜೀರ್ಣಕ್ರಿಯೆಗೆ ಸಹಾಯವಾಗುತ್ತೆ. ಇದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ತಡೆಗಟ್ಟಬಹುದು.

* ಬೆಳಗ್ಗೆ ಎದ್ದ ತಕ್ಷಣ ಹಲ್ಲುಜ್ಜದೆ ನೀರು ಕುಡಿಯುವುದರಿಂದ ತ್ವಚೆಗೆ ಕೂಡ ತುಂಬಾ ಒಳ್ಳೆಯದು. ತ್ವಚೆಯಲ್ಲಿ ನೀರಿನಂಶ ಕಾಪಾಡುವುದರಿಂದ ತ್ವಚೆ ಡ್ರೈಯಾಗುವುದು ಕಡಿಮೆಯಾಗುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!