ಬೇಸಿಗೆಯಲ್ಲಿ ಎಲ್ಲೆಂದರಲ್ಲಿ ನಿಮ್ಮ ಕಣ್ಣಿಗೆ ಬೀಳೋದು ಕಲ್ಲಂಗಡಿ,ದ್ರಾಕ್ಷಿ ಮತ್ತು ಹಲಸಿನಹಣ್ಣು. ಇದೆಲ್ಲಾ ಸೀಸನಲ್ ಫ್ರೂಟ್ಸ್. ಯಾವ ಸೀಸನ್ನಲ್ಲಿ ಯಾವ ಹಣ್ಣುಗಳು ಬೆಳೆಯುತ್ತಾರೋ ಅದನ್ನೆಲ್ಲಾ ತಿನ್ನಬೇಕು. ದ್ರಾಕ್ಷಿ ಹಣ್ಣಿನಿಂದ ದೇಹಕ್ಕೆ ತುಂಬಾನೇ ಲಾಭ ಇದೆ. ಏನೆಲ್ಲಾ ಲಾಭ ಇದೆ ಗೊತ್ತಾ?
- ಇದರಲ್ಲಿ ಅತೀ ಹೆಚ್ಚು ನ್ಯೂಟ್ರಿಯಂಟ್ಸ್, ವಿಟಮಿನ್ ಸಿ ಹಾಗೂ ಕೆ ಇದೆ.
- ಆಂಟಿಆಕ್ಸಿಡೆಂಟ್ಸ್ ಕೂಡ ಇದರಲ್ಲಿ ಇದೆ. ದ್ರಾಕ್ಷಿ ತಿನ್ನುವುದರಿಂದ ಕ್ರೋನಿಕ್ ಡಿಸೀಸ್ಗಳು ಕಾಡುವುದಿಲ್ಲ.
- ಕ್ಯಾನ್ಸರ್ ಬಾರದಂತೆ ತಡೆಗಟ್ಟಲು ದ್ರಾಕ್ಷಿ ತಿನ್ನುವುದು ಒಳ್ಳೆಯದು.
- ಹೃದಯ ಸಂಬಂಧಿ ಕಾಯಿಲೆಗಳಿಂದ ದೂರ ಇರಲು ದ್ರಾಕ್ಷಿ ಸೇವಿಸಿ.
- ಬ್ಲಡ್ ಶುಗರ್ ಲೆವೆಲ್ನನ್ನು ಕಡಿಮೆ ಮಾಡಿ ಡಯಾಬಿಟೀಸ್ ಬರದಂತೆ ತಡೆಗಟ್ಟುತ್ತದೆ.
- ಕಣ್ಣಿನ ಆರೋಗ್ಯ ಕಾಪಾಡುವಂತಹ ಗುಣಗಳು ದ್ರಾಕ್ಷಿಯಲ್ಲಿವೆ.
- ನೆನಪಿನ ಶಕ್ತಿ ಹಾಗೂ ಮೂಡ್ ಲೈಟ್ ಮಾಡುವ ಗುಣ ಇದರಲ್ಲಿದೆ.
- ಮೂಳೆಗಳ ಆರೋಗ್ಯಕ್ಕೆ ಬೇಕಾದ ನ್ಯೂಟ್ರಿಯಂಟ್ಸ್ ಇದರಲ್ಲಿದೆ.
- ಬ್ಯಾಕ್ಟೀರಿಯಾ,ಯೀಸ್ಟ್ ಇನ್ಫೆಕ್ಷನ್ ಬಾರದಂತೆ ತಡೆಗಟ್ಟುತ್ತದೆ.