Monday, August 8, 2022

Latest Posts

ಸ್ಪೂನ್‌ನಲ್ಲಿ ತಿನ್ನೋ ಅಭ್ಯಾಸ ಇದೆಯಾ? ಕೈಯಲ್ಲಿ ತಿನ್ನೋದ್ರಿಂದ ತುಂಬಾನೇ ಲಾಭ ಇದೆ ನೋಡಿ..

ಯಾವುದೇ ರೆಸ್ಟೋರೆಂಟ್ ಹೋಗಿ ಅಥವಾ ರಸ್ತೆ ಬದಿ ಹೋಟೆಲ್‌ಗೆ ಹೋಗಿ, ಎಲ್ಲಿಯೂ ಜನ ಸ್ಪೂನ್‌ನಲ್ಲಿಯೇ ಊಟ, ತಿಂಡಿ ಮಾಡುತ್ತಾರೆ. ಕೈ ಗಲೀಜಾಗಿರುತ್ತದೆ ಎಂದೋ, ಕೈಯಲ್ಲಿ ಯಾರು ತಿಂತಾರೋ ಎಂದೋ ಜನ ಕೈಯಲ್ಲಿ ತಿನ್ನೋದಕ್ಕೆ ಹಿಂಜರೆಯುತ್ತಾರೆ.
ಆದರೆ ಕೈಯಲ್ಲಿ ತಿನ್ನೋದ್ರಿಂದ ಸಿಕ್ಕಾಪಟ್ಟೆ ಲಾಭಗಳಿವೆ. ಯಾವ ಲಾಭ ನೋಡಿ..

  • ಕೈ ಬಳಸಿ ತಿನ್ನೋದ್ರಿಂದ ರಕ್ತಸಂಚಲನ ಹೆಚ್ಚಾಗಲಿದೆ. ಮಸಲ್‌ಗಳಿಗೆ ವ್ಯಾಯಾಮ ಕೂಡ ಆಗುತ್ತದೆ.
  • ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ. ಜೊತೆಗೆ ತೂಕ ಕೂಡ ಇಳಿಕೆಯಾಗುತ್ತದೆ.
  • ಕೈಯಲ್ಲಿ ತಿನ್ನುವಾಗ ನಾವು ಜಾಗರೂಕರಾಗಿ, ಮನಸ್ಸಿಟ್ಟು ತಿನ್ನುತ್ತೇವೆ, ಇದು ನಮ್ಮನ್ನು ಆರೋಗ್ಯವಾಗಿ ಇಡುತ್ತದೆ.
  • ಸ್ಪೂನ್‌ಗಳಿಗಿಂತ ನಮ್ಮ ಕೈ ಹೈಜಿನಿಕ್ ಆಗಿದೆ.
  • ಸ್ಪೂನ್ ತುಂಬ ತುಂಬಿಸಿಕೊಂಡು ತಿನ್ನುವುದಕ್ಕಿಂತ ಕೈಯಲ್ಲಿ ತಿಂದಾಗ ಚಿಕ್ಕ ತುತ್ತುಗಳನ್ನು ಬಾಯಲ್ಲಿ ಇಡುತ್ತೀರಿ. ಇದರಿಂದ ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ.
  • ಕೈಯಲ್ಲಿ ತಿನ್ನುವುದರಿಂದ ನಿಧಾನವಾಗಿ ತಿನ್ನುತ್ತೇವೆ ಇದು ನಮ್ಮ ಬ್ಲಡ್ ಶುಗರ್ ಬ್ಯಾಲೆನ್ಸ್ ಮಾಡುತ್ತದೆ.
  • ಸ್ಪೂನ್‌ನಲ್ಲಿ ಆಹಾರ ಎಷ್ಟು ಬಿಸಿ ಇದೆ ಅನ್ನೋದೆ ತಿಳಿಯೋದಿಲ್ಲ. ಆದರೆ ಕೈಯಲ್ಲಿ ಬಿಸಿ ಆರಿಸಿ ತಿನ್ನುತ್ತೀವಿ. ಇದರಿಂದ ಬಾಯಿ ಸುಡುವುದು ತಪ್ಪುತ್ತದೆ.
  • ಕೈ ಹಾಗೂ ಕೈ ಬೆರಳಿಗೆ ವ್ಯಾಯಾಮ ಆಗುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss