ನಾವೆಲ್ಲ ಮಾವಿನ ಕಾಯಿ, ಮಾವಿನ ಹಣ್ಣು ತಿಂದಿರುತ್ತೇವೆ. ಆದರೆ ಎಂದಿಗೂ ಮಾವಿನ ಎಲೆ ತಿಂದಿರೋದಕ್ಕೆ ಸಾಧ್ಯವೇ ಇಲ್ಲ. ಆದರೆ ಇನ್ಮುಂದೆ ಮಾವಿನ ಹಣ್ಣು ತಿನ್ನದಿದ್ದರೂ ಪರವಾಗಿಲ್ಲ ಮಾವಿನ ಎಲೆಯನ್ನು ಸೇವಿಸಿ. ಏಕೆಂದರೆ ಈ ಎಲೆಯಲ್ಲಿ ವಿಟಮಿನ್ ಸಿ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಇದು ನಮ್ಮ ಆರೋಗ್ಯ ವೃದ್ಧಿಗೆ ಬಹಳ ಸಹಕಾರಿಯಾಗಿರಲಿದೆ.
- ಮಾವಿನ ಎಲೆಯಲ್ಲಿ ಅಧಿಕ ಮಟ್ಟದ ವಿಟಮಿನ್ ಗಳಿರುತ್ತವೆ. ಇದರ ಒಂದು ಎಲೆಯನ್ನು ಬೆಳಗ್ಗೆ ಎದ್ದ ತಕ್ಷಣ ಅಗೆದು ತಿಂದರೆ ಆರೋಗ್ಯದಲ್ಲಿ ಬದಲಾವಣೆ ಖಂಡಿತ.
- ಮಾವಿನ ಎಲೆಯಲ್ಲಿ ರೋಗನಿರೋಧಕ ಶಕ್ತಿ ಕೂಡ ಹೆಚ್ಚಿರುತ್ತದೆ. ಈ ಕೋವಿಡ್ ಸಮಯದಲ್ಲಿ ಪ್ರತಿದಿನ ಅಪ್ಪಿತಪ್ಪಿಯೂ ಮಿಸ್ ಮಾಡದೇ ಸೇವಿಸಿ.
- ಮಾವಿನ ಎಲೆಗಳನ್ನು ಬಿಸಿಲಿಗೆ ಒಣಗಿಸಿ ಪುಡಿ ಮಾಡಿ, ಆ ಪುಡಿಯನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಉಗುರು ಬಿಸಿ ನೀರಿಗೆ ಹಾಕಿಕೊಂಡು ಕುಡಿಯುವುದರಿಂದ ಸಕ್ಕರೆ ಕಾಯಿಲೆ ನಿವಾರಣೆಯಾಗುತ್ತದೆ.
- ಮಾವಿನ ಎಲೆಯನ್ನು ರಾತ್ರಿ ನೀರಿನಲ್ಲಿ ನೆನಸಿಡಿ. ಬೆಳಗ್ಗೆ ಅದೇ ನೀರನ್ನು ಸೇವಿಸಿ. ಇದರಿಂದ ಕಿಡ್ನಿಯಲ್ಲಿ ಕಲ್ಲು ಬೆಳೆಯುವುದು ನಿಯಂತ್ರಣಕ್ಕೆ ಬರುತ್ತದೆ.
- ಮಾವಿನ ಎಲೆಗೆ ತುಪ್ಪ ಹಚ್ಚಿ ಅದನ್ನು ಎಣ್ಣೆ ದೀಪಕ್ಕೆ ಹಿಡಿದು ಸುಟ್ಟು ಅದರ ಹೊಗೆಯನ್ನು ಸೇವನೆ ಮಾಡಿದರೆ ಗಂಟಲಿಗೆ ಸಂಬಂಧಿಸಿದ ಸಮಸ್ಯೆಗಳು ಕಡಿಮೆ ಆಗುತ್ತದೆ.
- ಮಾವಿನ ಎಲೆಯ ರಸವನ್ನು ತೆಗೆದು ಅದನ್ನು ಉಗುರು ಬಿಸಿ ಮಾಡಿ ಕಿವಿಗೆ ಹಾಕಿಕೊಂಡರೆ ಕಿವಿ ನೋವು ನಿವಾರಣೆಯಾಗುತ್ತದೆ.
- ಬಿಸಿ ಬಿಸಿ ನೀರಿಗೆ ಮಾವಿನ ಎಲೆಯನ್ನು ಹಾಕಿ ಅದನ್ನು ರಾತ್ರಿ ಪೂರ್ತಿ ಹಾಗೆ ಬಿಡಿ. ಮರುದಿನ ಬೆಳಗ್ಗೆ ಈ ನೀರನ್ನು ಖಾಲಿ ಹೊಟ್ಟೆಗೆ ಸೇವನೆ ಮಾಡಿದರೆ ಹೊಟ್ಟೆಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತವೆ.
- ಮಾವಿನ ಎಲೆಯನ್ನು ಸುಟ್ಟು ಅದರ ಬೂದಿಗೆ ಕೊಬ್ಬರಿ ಎಣ್ಣೆ ಬೆರೆಸಿ ಹಚ್ಚಿಕೊಂಡರೆ ಸುಟ್ಟ ಕಲೆ ನಿವಾರಣೆಯಾಗುತ್ತದೆ.