ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೋವಿಡ್ ಹೆದರಿಕೆ ನಡುವೆ ಈಗ ಎಲ್ಲರ ಮನೆಯಲ್ಲೂ ಶೀತ, ಕೆಮ್ಮು, ಜ್ವರ ಆವರಿಸಿಕೊಂಡಿದೆ. ಕೊರೋನಾ ತಗುಲಿದೆ ಎಂದು ಹೆದರುವ ಬದಲು ಸೂಕ್ಷ್ಮ ಲಕ್ಷಣಗಳು ಕಂಡಂತೆ ಈ ಆಹಾರಗಳನ್ನು ಸೇವಿಸಿ.. ಸೇಫ್ ಆಗಿರಿ..
ಎಳನೀರು: ಇದರಲ್ಲಿ ಎಲೆಕ್ಟ್ರೋಲೈಟ್ ಅಂಶ ಹೆಚ್ಚಾಗಿದ್ದು, ಜ್ವರ, ವಾಂತಿಯಂತಹ ಸಮಸ್ಯೆಗಳಿಗೆ ಪರಿಹಾರವಾಗಲಿದೆ.
ಟೀ: ಬಿಸಿ ಬಿಸಿಯಾಗಿ ಶುಂಠಿ, ಏಲಕ್ಕಿ ಮಿಶ್ರಿತ ಟೀ ಕುಡಿಯುವುದರಿಂದ ಶೀತ, ಕೆಮ್ಮು ಕಡಿಮೆಯಾಗುತ್ತೆ.
ಜೇನುತುಪ್ಪ: ಕೆಮ್ಮಿನಿಂದ ಬಳಲುತ್ತಿರುವವರಿಗೆ ಜೇನುತುಪ್ಪ ಅತ್ಯುತ್ತಮ ಔಷಧವಾಗಲಿದೆ.
ಖಾರ: ಹೊಟ್ಟೆ ಉಬ್ಬರ, ಹೊಟ್ಟೆ ನೋವು ಇದ್ದರೆ ಖಾರ ಸೇವಿಸಬೇಡಿ. ಇಲ್ಲವಾದರೆ ಕ್ಯಾಪ್ಸಿಕಂ ಸೇರಿದಂತೆ ಇರತೆ ಸ್ಪೈಸಿ ಆಹಾರ ಸೇವಿಸಿ.
ಬಾಳೆ ಹಣ್ಣು: ಇದರಲ್ಲಿ ಹೆಚ್ಚು ನ್ಯೂಟ್ರಿಯಂಟ್ಸ್ ಹಾಗೂ ಎಲೆಕ್ಟ್ರೋಲೈಟ್ಸ್ ಅಂಶಗಳಿದ್ದು, ದೇಶಕ್ಕೆ ಶಕ್ತಿ ನೀಡುತ್ತದೆ.
ಮೊಸರು: ಜೀರ್ಣಕ್ರಿಯೆ ಸಮಸ್ಯೆ, ವಾಂತಿಯಂತಹ ಸಮಸ್ಯೆ ಇದ್ದರೆ ಮೊಸರನ್ನ ಸೇವಿಸೋದು ಉತ್ತಮ.
ಅವಕಾಡೊ: ಇದರಲ್ಲಿ ನಾರಿನಾಂಶ, ವಿಟಮಿನ್ಸ್, ಮಿನರಲ್ಸ್ ಇದ್ದು, ಇಮ್ಯುನಿಟಿ ಹೆಚ್ಚಿಸುತ್ತದೆ.
ಅರಿಶಿಣ ಹಾಲು: ಹಾಲಿಗೆ ಅರಿಶಿಣ, ಕಾಳುಮೆಣಸಿನ ಪುಡಿ, ಜೇನುತುಪ್ಪ ಹಾಕಿ ಕುದಿಸಿ ಕುಡಿಯುವುದರಿಂದ ಕೆಮ್ಮು, ಶೀತ ಕಡಿಮೆಯಾಗುತ್ತೆ.