ನೆನಪಿದೆಯಾ ಪ್ರತೀ ವರ್ಷ ನಮ್ಮ ಹುಟ್ಟು ಹಬ್ಬಕ್ಕೆ ಅಮ್ಮಾ ಒಂದಲ್ಲಾ ಒಂದು ವಿಶೇಷವಾದ ಉಡುಗೊರೆ, ಸಿಹಿ ತಿಂಡಿ, ಸರ್ಪ್ರೈಸ್ ಕೊಡುತ್ತಾರೆ. ಆದರೆ ನಾವು ಕೇವಲ ವಾಟ್ಸ್ ಆಪ್, ಫೇಸ್ ಬುಕ್ ಗಳಲ್ಲಿ ಸ್ಟೇಟಸ್ ಹಾಕುತ್ತೇವೆ ಅಷ್ಟೆ.. ಆದರೆ ಈ ವರ್ಷ ಹಾಗೆ ಮಾಡಬೇಡಿ ನಿಮ್ಮ ತಾಯಿಗೆ ಏನಾದರೂ ಡಿಫರೆಂಟ್ ಆಗಿ ಗಿಫ್ಟ್ ಮಾಡಿ..
- ತಾಯಂದಿರಿಗೆ ಸೀರೆಗಳು, ರೇಷ್ಮೆ ಸೀರೆಗಳು, ಬಟ್ಟೆಗಳೆಂದರೆ ತುಂಬಾ ಇಷ್ಟ. ಹಾಗಾಗಿ ಅವರ ನೆಚ್ಚಿನ ಬಣ್ಣದ ಬಟ್ಟೆಯನ್ನು ಉಡುಗೊರೆಯಾಗಿ ಕೊಡಿ.
- ಮಕ್ಕಳು ಕೆಲಸದ ಒತ್ತಡದಲ್ಲಿ ಅಪ್ಪ ಅಮ್ಮನನ್ನೂ ಮರೆತೇ ಹೋಗಿರುತ್ತಾರೆ. ಹಾಗಾಗಿ ಅಮ್ಮನ ಹುಟ್ಟಿದ ದಿನವಾದರೂ ಅವರೊಟ್ಟಿಗೆ ದಿನ ಪೂರ್ತಿ ಕಳಿಯಿರಿ.
- ಅಮ್ಮಂದಿರಿಗೆ ತುಂಬಾ ಇಷ್ಟಪಡುವ ಅಡುಗೆ ಸಾಮಾನುಗಳನ್ನು ಉಡುಗೊರೆಯಾಗಿ ಕೊಡುವುದರಿಂದ ಅವರಿಗೆ ಖುಷಿಯಾಗುತ್ತದೆ.
- ಅಮ್ಮಾ ಯಾವಾಗಲೂ ಹೋಗಬೇಕು ಅಂದುಕೊಳ್ಳುವ ದೇವಸ್ಥಾನಗಳಿಗೆ ನೀವು ಕರೆದುಕೊಂಡು ಹೋಗಿ. ಇದು ಅವರಿಗೆ ತುಂಬಾ ಇಷ್ಟ ಆಗುತ್ತದೆ.
- ಯಾವಾಗಲೂ ಅಮ್ಮ ನಮಗೆ ಏನು ಬೇಕಾದರೂ ಕೊಡಿಸುತ್ತಾರೆ ಅವರಿಗಾಗಿ ನೀವು ಒಂದು ಟ್ರೆಂಡಿ ಪರ್ಸ್, ಹ್ಯಾಂಡ್ ಬ್ಯಾಗ್ ಗಿಫ್ಟ್ ಮಾಡಿ.
- ಅಮ್ಮಂದಿರಿಗೆ ಸಾಮಾನ್ಯ ಗಿಡಗಳೆಂದರೆ ತುಂಬಾ ಇಷ್ಟ. ಅದನ್ನೂ ನಮ್ಮಂತೆಯೇ ಬೆಳೆಸುತ್ತಾರೆ, ಆರೈಕೆ ಮಾಡುತ್ತಾರೆ. ಹಾಗಾಗಿ ಅವರಿಗೆ ಒಂದಷ್ಟು ಗಿಡಗಳನ್ನು ಗಿಫ್ಟ್ ಕೊಡಿ.
- ಒಂದು ದಿನ ಅಮ್ಮನ ಕೆಲಸಗಳಿಗೆ ವಿಶ್ರಾಂತಿ ಕೊಟ್ಟು ಅವರೆಲ್ಲಾ ಕೆಲಸಗಳನ್ನೂ ನೀವೇ ಮಾಡಿಕೊಡಿ. ಇದರಿಂದ ಅವರಿಗೆ ನಿಮ್ಮ ಬಗ್ಗೆ ಹೆಮ್ಮೆ ಅನ್ನಿಸುತ್ತದೆ. ಅದರಲ್ಲೂ ನಿಮ್ಮ ಕೈ ಅಡುಗೆ ಅವರಿಗೆ ತುಂಬಾ ಖುಷಿ ಕೊಡುತ್ತದೆ.