ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………
ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಮಹಿಳಾ ಸಶಕ್ತೀಕರಣದ ನಿಟ್ಟಿನಲ್ಲಿ ಭಾರತಕ್ಕೊಂದು ಸಿಹಿ ಸುದ್ದಿ. 2015-16 ಮತ್ತು 2019-20ರ ನಡುವೆ ಉನ್ನತ ಶಿಕ್ಷಣದಲ್ಲಿ ಮಹಿಳೆಯರ ದಾಖಲಾತಿ ಶೇ. 18ರಷ್ಟು ಹೆಚ್ಚಿದೆ.
ವೈದ್ಯ ವಿಜ್ಞಾನ, ಬಿಎ, ಬಿಎಸ್ಸಿ ಇಂಥ ಕೋರ್ಸ್ ಗಳಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗುತ್ತಿದ್ದಾರೆ. ಆದರೆ ತಾಂತ್ರಿಕ ಕೋರ್ಸುಗಳಲ್ಲಿ ಈ ದಾಖಲೆ ಉತ್ತೇಜಕವಾಗಿಲ್ಲ. ಎಂಎ, ಎಂಎಸ್ಸಿ, ಎಂಕಾಮ್ ಗಳಲ್ಲಿ ಮಹಿಳೆಯರ ದಾಖಲಾತಿ ಈ ಐದು ವರ್ಷಗಳಲ್ಲಿ ಗಣನೀಯವಾಗಿ ಹಿಗ್ಗಿದೆ.
ಕರ್ನಾಟಕ ಮತ್ತು ಉತ್ತರ ಪ್ರದೇಶಗಳು ಉನ್ನತ ಶಿಕ್ಷಣದಲ್ಲಿ ಮಹಿಳೆಯರ ಭಾಗಿದಾರಿಕೆಯ ಅಂಕಿಅಂಶದಲ್ಲಿ ವಿಶೇಷ ದಾಖಲೆಯನ್ನೇ ಬರೆದಿವೆ. ಇಲ್ಲಿ ಉನ್ನತ ಶಿಕ್ಷಣದಲ್ಲಿ ಮಹಿಳೆಯರ ದಾಖಲೆ ಪುರುಷರನ್ನು ಮೀರಿಸುತ್ತದೆ. ಕರ್ನಾಟಕ- 50.2%. ಉತ್ತರ ಪ್ರದೇಶ- 50.9%.
ಆದರೆ ರಾಷ್ಟ್ರೀಯ ಮಹತ್ವದ ಸಂಸ್ಥೆಗಳಲ್ಲಿ ಉನ್ನತ ಶಿಕ್ಷಣಕ್ಕೆ ದಾಖಲಾಗುತ್ತಿರುವ ಮಹಿಳೆಯರ ಸಂಖ್ಯೆ ಮಾತ್ರ ಶೇ. 27.4ರಲ್ಲೇ ನಿಂತುಕೊಂಡಿದ್ದು ಉತ್ತೇಜಕವಾಗಿಲ್ಲ.