ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Tuesday, May 18, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಬೇಸಿಗೆ ನಡುವೆ ಮುಷ್ಕರದ ಬಿಸಿ, ಪರದಾಡಿದ ಜನತೆ, ಖಾಸಗಿ ವಾಹನಗಳ ದರ್ಬಾರ್

ಹೊಸ ದಿಗಂತ ವರದಿ, ಕಲಬುರಗಿ:

ಬೆಂಕಿ ಉಂಡೆಯಂತೆ ಕಾದ ಬೇಸಿಗೆ ಬಿಸಲಿನ ಮಧ್ಯೆಯೂ ಸಾರಿಗೆ ನೌಕರರ ಮುಷ್ಕರದ ಬಿಸಿಯೂ ಜಿಲ್ಲೆಗೆ ತಾಕಿದೆ. ಹತ್ತ ಹಲವು ಬೇಡಿಕೆ ಹಾಗೂ ಪ್ರಮುಖ ಬೇಡಿಕೆಯಾದ 6ನೇ ವೇತನ ಆಯೋಗದ ಶಿಪಾರಸ್ಸು ಅನ್ವಯ ವೇತನ ನೀಡಬೇಕೆಂಬ ಪ್ರಮುಖ ಬೇಡಿಕೆಯನ್ನು ಇಟ್ಟಿಕೊಂಡು ಸಾರಿಕೆ ನೌಕರರ ಕೂಟ ಮುಷ್ಕರಕ್ಕೆ ಕರೆ ನೀಡಿದೆ. ಇದರಿಂದಾಗಿ ಸದಾ ಬಸ್ ಓಡಾಟದಿಂದ ಕೂಡಿರುವ ಕಲಬುರಗಿ ಕೇಂದ್ರ ಬಸ್ ನಿಲ್ದಾಣವು ಬಸ್,ಗಳ ಸಂಚಾರವಿಲ್ಲದೆ ಬಿಕೋ ಎನ್ನುತ್ತಿದೆ. ಮುಷ್ಕರದಿಂದಾಗಿ ಎಲ್ಲೆಲ್ಲೂ ಕೂಡ ಬಸ್ ಕಾಣುವ ಜಾಗದಲ್ಲಿ ಪೋಲಿಸರ ವಾಹನಗಳು, ಅಲ್ಲಲ್ಲಿ ಒಬ್ಬಿಬ್ಬರು ಪ್ರಯಾಣಿಕರು ಬಸ್ ಗಾಗಿ ಕಾದು ಕುಳಿದ ಸನ್ನಿವೇಶಗಳು ಕಂಡುಬಂದಿವೆ.

ಮುಷ್ಕರಕ್ಕೆ ಶ್ರಮಜೀವಿಗಳ ವೇದಿಕೆ ಬೆಂಬಲ
ಸಾರಿಗೆ ನೌಕರರ ಮುಷ್ಕರಕ್ಕೆ ಶ್ರಮಜೀವಿಗಳ ವೇದಿಕೆ ಬೆಂಬಲ ಸೂಚಿಸಿದ್ದು, ವೇದಿಕೆ ಅಧ್ಯಕ್ಷ ಚಂದ್ರಶೇಖರ ಹಿರೇಮಠ ಮಾತನಾಡಿ, ಡಿಸೆಂಬರನಲ್ಲಿ ಮುಷ್ಕರ ನಡೆಸಿದ್ದಾಗ ನೌಕರರ ಬೇಡಿಕೆಗಳನ್ನು ಈಡೇರಿಸುವುದಾಗಿ ಸರ್ಕಾರ ಭರವಸೇ ನೀಡಿತ್ತು. ಆದರೆ 6ನೇ ವೇತನ ಆಯೋಗದ ಶಿಪಾರಸ್ಸು ಜಾರಿ ಹೊರತು ಪಡಿಸಿ ಉಳಿದ ಬೇಡಿಕೆಗಳಿಗೆ ಸ್ಫಂಧಿಸಿರುವುದಾಗಿ ಸಾರಿಗೆ ಸಚಿವ ಸವದಿ ಹೇಳಿದ್ದಾರೆ. ವಾಸ್ತವವಾಗಿ ಯಾವ ಬೇಡಿಕೆಗೂ ಸ್ಫಂಧಿಸಿಲ್ಲ ಎಂದರು. ಹೀಗಾಗಿ ಮತ್ತೆ ಮುಷ್ಕರಕ್ಕೆ ಕರೆ ನೀಡಲಾಗಿದೆ ಎಂದರು.

ಬಸ್ ಸಂಚಾರವಿಲ್ಲದೆ ಪರದಾಡಿದ ಜನರು
ಸಾರಿಗೆ ನೌಕರರ ಮುಷ್ಕರ ನೀಡಿದ ಪರಿಣಾಮ ಸಾರ್ವಜನಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸಂದರ್ಭದಲ್ಲಿ ಪ್ರಯಾಣಿಕರೊಬ್ಬರು ತಮ್ಮ ನೋವನ್ನು ಹೇಳಿಕೊಂಡು ಮಾತನಾಡಿ, ಅಗತ್ಯ ಕಾರ್ಯಕ್ರಮಕ್ಕಾಗಿ ಜೇವರ್ಗಿಗೆ ಹೋಗಲು ಕುಟುಂಬ ಸಮೇತ ಬಂದಿದ್ದೇನೆ, ಆದರೆ ಬಸ್ ಮುಷ್ಕರದಿಂದ ಅಸಮಾಧಾನವನ್ನು ಹೊರಹಾಕಿದ್ದಾರೆ. ಖಾಸಗಿ ವಾಹನಗಳಿಗೆ ಹೋಗಲು ಹಣದ ಕೊರತೆ ಇದ್ದಿದ್ದು, ಇಂತಹ ಸಮಯದಲ್ಲಿ ನಾವು ಏನೂ ಮಾಡಬೇಕೆಂದು ಗೊತ್ತಾಗುತ್ತಿಲ್ಲ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಪ್ರಯಾಣಿಕರು ಬಸ್ ಆಗಮನವನ್ನೇ ಕಾದು ಕೂಳಿತಿದ್ದ ಬೆನ್ನೆಲೆಯಲ್ಲಿ ಯಾವೊಂದು ಬಸ್ ಸಹ ಬರದೆ ಹೋದಾಗ ತಮ್ಮ ತಮ್ಮ ಊರಿಗೆ ಹೋಗಲು ಸಾಕಷ್ಟು ಪರದಾಡುತ್ತಿದ್ದಾರೆ. ಈ ಸಂದರ್ಭ ಅನಿವಾರ್ಯಕ್ಕಾಗಿ ಖಾಸಗಿ ವಾಹನಗಳ ಮೊರೆ ಹೋಗಿದ್ದು ಕಂಡುಬಂದಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss