ಎಚ್ಚರಾ, ಲಸಿಕೆ ಪಡೆದವರಿಗೂ ಇದೆ ಒಮಿಕ್ರಾನ್ ರೂಪಾಂತರಿಯ ಅಪಾಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪಕ್ಕದ ರಾಜ್ಯ ಮಹಾರಾಷ್ಟ್ರ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ತಲೆಯೆತ್ತಿರುವ ಓಮಿಕ್ರಾನ್ ಬಿಎಫ್ 7 ಉಪತಳಿ ಉಳಿದ ತಳಿಗಳಿಗಿಂತ ಹೆಚ್ಚು ಅಪಾಯಕಾರಿ ಎಂದು ತಜ್ಞರು ಎಚ್ಚರಿಸಿದ್ದಾರೆ.

ಓಮಿಕ್ರಾನ್ ಸ್ಪಾನ್ ಎಂದು ಕರೆಯಲ್ಪಡುವ BF.7 ಉಪ ತಳಿ ಹೆಚ್ಚಿನ ಹರಡುವ ಸಾಮಥ್ರ್ಯ ಹೊಂದಿದೆ. ಇದು ಲಸಿಕೆಯ ರಕ್ಷಣೆ ಮೀರುವಷ್ಟು ಬಲಿಷ್ಟವಾಗಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಹೊಸ ರೂಪಾಂತರಿ ಲಸಿಕೆಗಳ ಸಂಪೂರ್ಣ ಕೋರ್ಸ್ ತೆಗೆದುಕೊಂಡವರಿಗೂ ಸೋಂಕು ತಗುಲುವ ಸಾಧ್ಯತೆ ಇದೆ ಎಂದಿರುವ ಅವರು, ಎಚ್ಚರಿಕೆ ಒಂದೇ ಸದ್ಯದ ರಕ್ಷಣೆ ಎಂದಿದ್ದಾರೆ.

ಹೊಸ BF.7 ಉಪ-ವೇರಿಯಂಟ್‌ನ ಲಕ್ಷಣಗಳು ಸಾಮಾನ್ಯ ಜ್ವರಕ್ಕೆ ಹೋಲುತ್ತವೆ ಮತ್ತು ಶೀತ, ಕೆಮ್ಮು, ಜ್ವರ, ದೇಹದ ನೋವು ಇತ್ಯಾದಿಗಳನ್ನು ಒಳಗೊಂಡಿರುತ್ತದೆ. ಇದು ಹೆಚ್ಚು ಹರಡುವ ಕಾರಣ ಕಡಿಮೆ ಅವಧಿಯೊಳಗೆ ದೊಡ್ಡ ಗುಂಪಿನ ಜನರಿಗೆ ಹರಡುತ್ತದೆ ಎಂಬುದು ಅಧ್ಯಯನದಲ್ಲಿ ಗೊತ್ತಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!