ಕಲಬೆರಕೆ ಮಾಡಿದ್ರೆ ಹುಷಾರ್: ಶುರುವಾಗಿದೆ ‘ಆಪರೇಷನ್ ಆಯಿಲ್’ ರೈಡ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆಪರೇಷನ್ ಆಯಿಲ್ ವಿಶೇಷ ಅಭಿಯಾನದ ಮೂಲಕ ಕಲಬೆರಕೆ ಕೊಬ್ಬರಿ ಎಣ್ಣೆ ಮಾರಾಟಗಾರರಿಗೆ ಕೇರಳ ಆರೋಗ್ಯ ಇಲಾಖೆ ಸಖತ್ ಶಾಕ್ ನೀಡಿದೆ.

ಕೊಬ್ಬರಿ ಎಣ್ಣೆಯಲ್ಲಿ ಕಲಬೆರಕೆ ಹೆಚ್ಚುತ್ತಿರುವ ಬಗ್ಗೆ ಕೇಳಿಬಂದ ದೂರುಗಳನ್ನು ಗಂಭೀರವಾಗಿ ಪರಿಗಣಿಸಿರುವ ಇಲಾಖೆ ಈಗಾಗಲೇ 294 ಸಂಸ್ಥೆಗಳಿಗೆ ನೋಟಿಸ್ ಜಾರಿ ಮಾಡಿದ್ದು, ದಂಡವನ್ನೂ ವಿಧಿಸಿದೆ. ಒಟ್ಟು 651 ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿಕೊಟ್ಟಿದೆ. ಇನ್ನು ವಿವಿಧ ದಾಳಿಗಳ ಸಂದರ್ಭ ಪತ್ತೆಯಾದ 6959 ಕೆಜಿಗಳಷ್ಟು ಹಾಳಾದ ತೆಂಗಿನೆಣ್ಣೆಯನ್ನು ನಾಶಪಡಿಸಿದೆ.

ರಾಜ್ಯದಲ್ಲಿ ಬ್ರ್ಯಾಂಡ್ ನೋಂದಣಿ ಇಲ್ಲದ ಕೊಬ್ಬರಿ ಎಣ್ಣೆ ಮಾರಾಟದ ಮೇಲೆ ಹದ್ದಿನಕಣ್ಣಿರಿಸಲಾಗಿದೆ. ಅಂತಹಾ ಎಣ್ಣೆಗಳಲ್ಲಿ ಕಲಬೆರಕೆ ಕಂಡುಬಂದಲ್ಲಿ ಕಠಿಣ ಕಾನೂನು ಕ್ರಮಕ್ಕೆ ಒಳಪಡಿಸಲಾಗುತ್ತದೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಒಬ್ಬ ಉತ್ಪಾದಕರಿಗೆ ಒಂದು ಬ್ರಾಂಡ್ ಕೊಬ್ಬರಿ ಎಣ್ಣೆಯನ್ನು ಮಾತ್ರ ಬಿಡುಗಡೆ ಮಾಡಲು ರಾಜ್ಯದಲ್ಲಿ ಅವಕಾಶವಿದೆ ಕಲಬೆರಕೆ ತೆಂಗಿನೆಣ್ಣೆ ಮಾರಾಟಕ್ಕೆ ಕಡಿವಾಣ ಹಾಕುವ ಭಾಗವಾಗಿ ಈ ಅಭಿಯಾನ ಆರಂಭಿಸಲಾಗಿದೆ. ಇದರ ಅಂಗವಾಗಿ ಅಧಿಕಾರಿಗಳು ಸುಮಾರು 100 ಕೇಂದ್ರಗಳಲ್ಲಿ ತಪಾಸಣೆ ನಡೆಸಿ ಕೆಲವು ಸಂಸ್ಥೆಗಳಿಗೆ ದಂಡ ವಿಧಿಸಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!