ಸ್ಕೂಲ್, ಕಾಲೇಜಿಗೆ ಹೋಗುವ ಮಕ್ಕಳಿಗೆ ಲೈಂಗಿಕತೆ ಬಗ್ಗೆ ಸಾಕಷ್ಟು ಕುತೂಹಲ ಇರುತ್ತದೆ. ಕೆಲವೊಮ್ಮೆ ಕುತೂಹಲ ತಾರಕ್ಕೇರಿದರೆ ಸಮಸ್ಯೆಗಳು ಆರಂಭವಾಗುತ್ತದೆ. ಆದರೆ ಇವರಿಗೆ ತಪ್ಪು ಸರಿ ತಿಳಿಸುವುದು ತಂದೆ ತಾಯಿಯರ ಕೆಲಸ. ಮಕ್ಕಳ ಡಿಪ್ರೆಶನ್ಗೆ ಅಡಲ್ಟ್ ಸಿನಿಮಾಗಳಿಗೆ ಅಡಿಕ್ಟ್ ಆಗುವುದೂ ಒಂದು ದೊಡ್ಡ ಕಾರಣ.. ನಿಮ್ಮ ಮಕ್ಕಳು ಪೋರ್ನ್ ಗೆ ಅಡಿಕ್ಟ್ ಆಗಿದ್ದಾರೆ ಎಂದು ತಿಳಿಯೋದು ಹೀಗೆ..
ಬದಲಾವಣೆ: ಅವರಲ್ಲಿ ಅನ್ಯೂಶುಯಲ್ ಆದ ಬದಲಾವಣೆ ನೋಡುತ್ತಿದ್ದೀರಾ? ಯಾವುದಾದರೂ ವಿಷಯದ ಬಗ್ಗೆ ಅತೀ ಹೆಚ್ಚು ಕ್ಯೂರಿಯಾಸಿಟಿ ಹೊಂದಿದ್ದಾರಾ ಗಮನಿಸಿ.
ಸೆಕ್ಯುಯಲ್ ಆಕ್ಟಿವಿಟಿ: ಪ್ರೀ ಮೆಚ್ಯೂರ್ ಸೆಕ್ಷುಯಲ್ ಆಕ್ಟಿವಿಟಿಯಲ್ಲಿ ಅವರು ತೊಡಗಿದ್ದಾರಾ ಗಮನಿಸಿ.. ಹೆಚ್ಚು ಹೊತ್ತು ಬಾತ್ರೂಂನಲ್ಲಿ ಕೂರುವುದು, ಬಾಗಿಲು ಹಾಕಿಕೊಂಡು ಮಲಗುವುದು ಮಾಡುತ್ತಾರಾ ನೋಡಿ.
ಹಣ ಕೇಳುತ್ತಾರಾ? ನಿಮ್ಮ ಬಳಿ ಸ್ಕೂಲು ಕಾಲೇಜಿನ ಕೆಲಸಕ್ಕೆ ಎಂದು ಹೆಚ್ಚು ಹಣ ಕೇಳುತ್ತಾರೆಂದಾದರೆ ಒಂದು ಕಣ್ಣಿಡಿಡುವುದು ಒಳ್ಳೆಯದು. ನಿಮ್ಮ ಕ್ರೆಡಿಟ್ ಕಾರ್ಡ್ನಿಂದ ಇದ್ದಕ್ಕಿದ್ದಂತೆ ಹಣ ಕಡಿಮೆ ಆದರೆ, ಅದರ ಬಗ್ಗೆ ಗಮನ ಇರಲಿ.
ಮೊಬೈಲ್,ಕಂಪ್ಯೂಟರ್: ಕ್ಲಾಸ್, ಪ್ರಾಜೆಕ್ಟ್ ವರ್ಕ್ ಅಂತೆಲ್ಲಾ ಪದೇ ಪದೆ ನಿಮ್ಮ ಫೋನ್ ಕೇಳುವುದು ಮಾಡಿದ ನಂತರ ಮೊಬೈಲ್ ಅಥವಾ ಲ್ಯಾಪ್ಟಾಪ್ನಲ್ಲಿ ಹೆಚ್ಚು ನೋಟಿಫಿಕೇಶನ್, ಪಾಪ್ಅಪ್ಸ್ ಬರುತ್ತಿದೆಯಾ ಗಮನಿಸಿ.
ಕಂಪ್ಯೂಟರ್ ಮೇಲೆ ಗಮನ: ಅವರ ರೂಂನಲ್ಲಿಯೇ ಕಂಪ್ಯೂಟರ್ ಇದ್ದು, ನೀವು ರೂಂಗೆ ಎಂಟ್ರಿ ಕೊಟ್ಟ ತಕ್ಷಣ ಸ್ಕ್ರೀನ್ ಮಿನಿಮೈಸ್ ಮಾಡೋದು ಅಥವಾ ಆಫ್ ಮಾಡೋದು ಮಾಡುತ್ತಾರಾ ಚೆಕ್ ಮಾಡಿ.
ಗುಣ ಬದಲಾವಣೆ: ಮೊದಲೆಲ್ಲ ನಗುತ್ತಾ, ಎಲ್ಲದಕ್ಕೂ ಹೊಂದಿಕೊಳ್ಳುವ ಮಕ್ಕಳು ಈಗೀಗ ಎಲ್ಲದಕ್ಕೂ ರೇಗುತ್ತಾರಾ? ಒಂದು ರೀತಿಯ ಸೀಕ್ರೆಟ್ನನ್ನು ಮೇಂಟೇನ್ ಮಾಡುತ್ತಾರೆ ಎನಿಸಿದರೆ ವಿಚಾರಿಸಿ.
ಹಿಸ್ಟರಿ ಚೆಕ್ ಮಾಡಿ: ಈಗೆಲ್ಲಾ ಫೋನ್ನಲ್ಲಿ ಏನು ನೋಡಿದರೂ ಮೊದಲು ಹಿಸ್ಟರಿ ಡಿಲೀಟ್ ಮಾಡುತ್ತಾರೆ. ಆದರೆ ಯಾವಾಗಲೂ ಹಾಗೆ ಮಾಡೋಕೆ ಆಗುವುದಿಲ್ಲ. ಒಮ್ಮೆಯಾದರೂ ತಪ್ಪುತ್ತಾರೆ ನೋಡುತ್ತಿರಿ.
ರಾತ್ರಿ ವೇಳೆ ಏನ್ ಮಾಡ್ತಾರೆ? ರಾತ್ರಿ ವೇಳೆ ಮಕ್ಕಳು ಎಷ್ಟು ಹೊತ್ತಿಗೆ ಮಲಗುತ್ತಾರೆ. ಕೈಯಲ್ಲಿ ಫೋನ್ ಇರುತ್ತದಾ ಗಮನಿಸಿ.
ಬಾತ್ರೂಂ: ಬಾತ್ರೂಂಗೆ ಯಾರಿಗೂ ಕಾಣದ ಹಾಗೆ ಫೋನ್ ತೆಗೆದುಕೊಂಡು ಹೋಗುತ್ತಾರಾ? ಹೋದರೆ ಎಷ್ಟು ಸಮಯ ಬರೋದಿಲ್ಲ ಎನ್ನುವುದರ ಮೇಲೆ ಗಮನ ಇಡಿ.
ನಾವು ದೊಡ್ಡವರು: ನಾವು ದೊಡ್ಡವರಾಗಿದ್ದೇವೆ. ಚಿಕ್ಕಮಕ್ಕಳಂತೆ ನೋಡಬೇಡಿ. ಎಂದೆಲ್ಲಾ ಮಾತನಾಡುತ್ತಾರಾ ನೋಡಿ..
ಆಟವೇ ಇಲ್ಲ: ಮುಂಚೆ ಅಪ್ಪ ಅಮ್ಮನ ಜೊತೆ ಕೂತು ಯಾವುದಾದರೂ ಒಂದು ಆಟವಾಡುತ್ತಿದ್ದವರು ಈಗ ಯಾವುದಕ್ಕೂ ಇಂಟ್ರೆಸ್ಟ್ ಇಲ್ಲ ಎನ್ನುತ್ತಾರೆ. ಪ್ರೈವೇಟ್ ಸ್ಪೇಸ್ಗಾಗಿ ಹಾತೊರೆಯುತ್ತಾರೆ ಈ ವಿಷಯಗಳ ಬಗ್ಗೆ ಗಮನ ಕೊಡಿ..