ಹೊಸದಿಗಂತ ವರದಿ, ಶಿವಮೊಗ್ಗ:
ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಭದ್ರಾ ಕಾಡಾ ಅಧ್ಯಕ್ಷೆ ಪವಿತ್ರ ರಾಮಯ್ಯ ಅವರ ನೇತೃತ್ವದಲ್ಲಿ ಶ್ರೀರಾಮನ ಭವ್ಯ ರಾಮ ಮಂದಿರ ನಿರ್ಮಾಣ ಕಾರ್ಯಕ್ಕೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣ ಪ್ರಾಂತ ಸಹ ಕಾರ್ಯವಾಹ ಪಟ್ಟಾಭಿರಾಮ್ ಅವರಿಗೆ ನಿಧಿ ಸಮರ್ಪಿಸಲಾಯಿತು.
ಈ ಸಮಯದಲ್ಲಿ ರಾಮನ ಜನ್ಮ ಸ್ಥಳವಾದ ಅಯೋಧ್ಯೆಯ ಭವ್ಯ ಇತಿಹಾಸವನ್ನು ಪಟ್ಟಾಭಿರಾಮ ಅವರು ವಿವರಿಸಿದರು. ಭವ್ಯ ರಾಮ ಮಂದಿರದ ಕಟ್ಟಡದ ವಿನ್ಯಾಸ ಕುರಿತು ವಿಶೇಷವಾಗಿ ಈ ಸಮಯದಲ್ಲಿ ಮಾತನಾಡಿದರು.
ರಾಮ ಮಂದಿರದ ಸುದೀರ್ಘ 500ವರ್ಷಗಳ ಹೋರಾಟದ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಕಾಡಾ ಆಡಳಿತಾಧಿಕಾರಿ ಕೃಷ್ಣ ಮೂರ್ತಿ, ಕಾರ್ಯಪಾಲಕ ಅಭಿಯಂತರರಾದ ಮೂಡಲ ಗಿರಿ, ಕೃಷಿ ವಿಭಾಗದ ಜಂಟಿ ನಿರ್ದೇಶಕರಾದ ಅರುಣ್ ಅವರು, ಸಹಕಾರ ವಿಭಾಗದ ಜಂಟಿ ನಿರ್ದೇಶಕರಾದ ನಯನ ಹಾಗೂ ಎಲ್ಲಾ ಅಧಿಕಾರಿ ವೃಂದದವರು ಉಪಸ್ಥಿತರಿದ್ದರು.