Tuesday, July 5, 2022

Latest Posts

ಭದ್ರಾವತಿ ನಗರಸಭೆ ಚುನಾವಣೆ: 35 ವಾರ್ಡ್‌ಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ

ಹೊಸ ದಿಗಂತ ವರದಿ, ಶಿವಮೊಗ್ಗ:

ಭದ್ರಾವತಿ ನಗರಸಭೆ ಚುನಾವಣೆ ನಾಮಪತ್ರ ಸಲ್ಲಿಕೆಗೆ 2 ದಿನ ಬಾಕಿ ಇರುವಾಗ 35 ವಾರ್ಡ್‌ಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಹೊರಬಿದ್ದಿದೆ.
ಈ ಬಾರಿ ಚುನಾವಣೆಗೆ ಇಬ್ಬರು ನಗರಸಭೆ ಮಾಜಿ ಅಧ್ಯಕ್ಷರಿಗೆ, ತಲಾ ಮೂವರು ಹಾಲಿ ಮತ್ತು ಮಾಜಿ ಸದಸ್ಯರಿಗೆ, ಜೆಡಿಎಸ್ ತೊರೆದು ಬಂದ ಇಬ್ಬರಿಗೆ ಹಾಗು ಇಬ್ಬರು ಶಾಸಕ ಬಿ.ಕೆ. ಸಂಗಮೇಶ್ವರ್ ಸಂಬಂಧಿಕರಿಗೆ ಅವಕಾಶ ನೀಡಲಾಗಿದೆ.
ವಾಸ್ತವಾಗಿ ಈ ಬಾರಿ ಸಹ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಪೈಪೋಟಿ ಕಂಡು ಬರುತ್ತಿದ್ದು, ಈ ನಡುವೆ ಬಿಜೆಪಿ ಸಹ ಪ್ರಬಲ ಪೈಪೋಟಿ ನೀಡಲು ರಣತಂತ್ರಕ್ಕೆ ಸಿದ್ಧವಾಗಿದೆ. ಉಳಿದಂತೆ ಆಮ್ ಆದ್ಮಿ ಪಾರ್ಟಿ, ಜನತಾದಳ(ಸಂಯುಕ್ತ) ಕರ್ನಾಟಕ, ವೆಲ್‌ಫೇರ್ ಪಾರ್ಟಿ ಆಪ್ ಇಂಡಿಯಾ, ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಇಂಡಿಯಾ, ಎಐಎಂಐಎಂ ಸೇರಿದಂತೆ ಇನ್ನಿತರ ಪಕ್ಷಗಳು ಹಾಗೂ ಸ್ನೇಹ ಜೀವಿ ಬಳಗ ಸಹ ಪೈಪೋಟಿಗೆ ಮುಂದಾಗಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss