ಹೊಸದಿಗಂತ ಆನ್ಲೈನ್ನ ವಿನಮ್ರ ವಿನಂತಿ…
ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………………..
ಹೊಸ ದಿಗಂತ ವರದಿ, ಶಿವಮೊಗ್ಗ:
ಭದ್ರಾವತಿ ನಗರಸಭೆ ಅಧಿಕಾರದ ಚುಕ್ಕಾಣಿ ಹಿಡಿಯಬೇಕೆಂಬ ಬಿಜೆಪಿಯ ಕನಸು ಭಗ್ನಗೊಂಡಿದೆ.
ಭದ್ರಾವತಿ ನಗರ ಸಭೆಯ 34 ವಾರ್ಡ್ಗಳಲ್ಲಿ ಕಾಂಗ್ರೆಸ್-18, ಜೆಡಿಎಸ್-11, ಬಿಜೆಪಿ-4 ಹಾಗೂ ಪಕ್ಷೇತರರೊಬ್ಬರು ಜಯಗಳಿಸಿದ್ದು, ಕಾಂಗ್ರೆಸ್ ಬಹುಮತ ಪಡೆದಿದೆ.
ಭದ್ರಾವತಿಯಲ್ಲಿ ಗೆದ್ದವರು: ವಾರ್ಡ್-1 ರೇಖಾ ಪ್ರಕಾಶ್ (ಜೆಡಿಎಸ್), 2-ಗೀತಾ ರಾಜಕುಮಾರ್ (ಕಾಂಗ್ರೆಸ್), 3-ಜಾರ್ಜ್(ಕಾಂಗ್ರೆಸ್), 4- ಅನುಪಮಾ ಚನ್ನೇಶ್ (ಬಿಜೆಪಿ),5-ಶಶಿಕಲಾ(ಬಿಜೆಪಿ),6-ಶ್ರೇಯಸ್(ಕಾಂಗ್ರೆಸ್), 7-ಬಿ.ಎಂ. ಮಂಜುನಾಥ್(ಕಾಂಗ್ರೆಸ್), 8-ಬಷೀರ್ ಅಹಮದ್(ಕಾಂಗ್ರೆಸ್),9- ಚನ್ನಪ್ಪ(ಕಾಂಗ್ರೆಸ್), 10- ಅನಿತಾ(ಬಿಜೆಪಿ), 11- ಮಣಿ (ಕಾಂಗ್ರೆಸ್), 12-ಸುದೀಪ್ ಕುಮಾರ್ (ಕಾಂಗ್ರೆಸ್), 13-ಅನುಸುಧಾ ಮೋಹನ್(ಕಾಂಗ್ರೆಸ್), 14- ಬಿ.ಟಿ.ನಾಗರಾಜ್(ಕಾಂಗ್ರೆಸ್), 15-ಮಂಜುಳಾ ಸುಬ್ಬಣ್ಣ (ಜೆಡಿಎಸ್), 16-ವಿ.ಕದಿರೇಶ್(ಬಿಜೆಪಿ), 17-ಟಿಪ್ಪು ಸುಲ್ತಾನ್ (ಕಾಂಗ್ರೆಸ್), 18-ಮಹಮದ್ ಯೂಸಫ್(ಕಾಂಗ್ರೆಸ್), 19-ಬಸವರಾಜ್(ಜೆಡಿಎಸ್), 20-ಜಯಶೀಲ(ಜೆಡಿಎಸ್), 21- ವಿಜಯಮ್ಮ(ಜೆಡಿಎಸ್), 22-ಬಿ.ಕೆ.ಮೋಹನ್(ಕಾಂಗ್ರೆಸ್), 23-ಪ್ರೇಮಾ(ಜೆಡಿಎಸ್), 24-ಕೋಟೇಶ್ವರರಾಮ್(ಜೆಡಿಎಸ್), 25-ಆರ್.ಉದಯಕುಮಾರ್(ಜೆಡಿಎಸ್), 26-ಸರ್ವಮಂಗಳ ಭೈರಪ್ಪ(ಕಾಂಗ್ರೆಸ್), 27-ರೂಪವತಿ(ಜೆಡಿಎಸ್), 28-ಕಾಂತರಾಜು(ಕಾಂಗ್ರೆಸ್), 30-ಸೈಯದ್ ರಿಯಾಜ್(ಕಾಂಗ್ರೆಸ್), 31-ಪಲ್ಲವಿ(ಜೆಡಿಎಸ್), 32-ಸವಿತಾ ಉಮೇಶ್(ಜೆಡಿಎಸ್), 33- ಮೋಹನ್ ಕುಮಾರ್(ಪಕ್ಷೇತರ), 34-ಲತಾ ಚಂದ್ರಶೇಖರ್(ಕಾಂಗ್ರೆಸ್), 35-ಶೃತಿ ವಸಂತಕುಮಾರ್(ಕಾಂಗ್ರೆಸ್).
29ನೇ ವಾರ್ಡ್ನಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಶ್ರುತಿಯವರು ಅನಾರೋಗ್ಯದ ಕಾರಣ ನಿಧನ ಹೊಂದಿದ ಹಿನ್ನಲೆಯಲ್ಲಿ ಚುನಾವಣೆಯನ್ನು ಮುಂದೂಡಲಾಗಿದೆ.