spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, September 26, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಸ್ವಾತಂತ್ರ್ಯೋತ್ಸವಕ್ಕೆ ಭಗತ್​ ಸಿಂಗ್​ ಪಾತ್ರದ ನೇಣಿಗೆ ಹಾಕುವ ದೃಶ್ಯ ಅಭ್ಯಾಸದ ನೇಣಿಗೆ ಬಲಿಯಾದ ಬಾಲಕ!

- Advertisement -Nitte

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………

ಹೊಸದಿಗಂತ ಆನ್ ಲೈನ್ ಡೆಸ್ಕ್:

ಸ್ವಾತಂತ್ರ್ಯ ದಿನಾಚರಣೆ ಸಂಭ್ರಮಕ್ಕೆ, ದೇಶಾದ್ಯಂತ ಭಾರೀ ಸಿದ್ಧತೆಗಳು ನಡೆಯುತ್ತಿವೆ. ಇದೇ ವೇಳೆ ಅದೆಷ್ಟೋ ಮಕ್ಕಳು, ಸ್ವಾತಂತ್ರ್ಯ ಹೋರಾಟಗಾರ ಪಾತ್ರ ಮಾಡೋದಕ್ಕೆ ತಯಾರಿ ನಡೆಸುತ್ತಿರುತ್ತಾರೆ. ಹೀಗೆಯೇ ಉತ್ತರ ಪ್ರದೇಶದ ಹಳ್ಳಿಯೊಂದಲ್ಲಿ ಬಾಲಕ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರನ್ನು ನೇಣಿಗೆ ಹಾಕುವ ದೃಶ್ಯ ಅಭ್ಯಾಸ ಮಾಡುವಾಗ ಆಕಸ್ಮಿಕವಾಗಿ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಉತ್ತರ ಪ್ರದೇಶದ ಬಡೌನ್ ಹಳ್ಳಿಯ 10 ವರ್ಷದ ಬಾಲಕ ಶಿವಂ, ನಾಟದಲ್ಲಿ ಭಗತ್​ ಸಿಂಗ್​ರನ್ನ ನೇಣಿಗೆ ಹಾಕುವ ದೃಶ್ಯವನ್ನ ಅಭ್ಯಾಸ ಮಾಡುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಗುರುವಾರ ಘಟನೆ ನಡೆದ ತಕ್ಷಣ ಕುಟುಂಬವು ಪೊಲೀಸರಿಗೆ ಮಾಹಿತಿ ನೀಡದೆ ಶವವನ್ನು ಸುಟ್ಟು ಹಾಕಿದ್ದಾರೆ ಎನ್ನಲಾಗಿದೆ.
ಭಗತ್ ಸಿಂಗ್ ನನ್ನು ಗಲ್ಲಿಗೇರಿಸುವ ದೃಶ್ಯವನ್ನು ಪುನಃ ಪ್ರದರ್ಶಿಸುವಾಗ ಶಿವಂ ಆತನ ಕುತ್ತಿಗೆಗೆ ಕುಣಿಕೆಯನ್ನು ಕಟ್ಟಿದ್ದಾನೆ. ಆದರೆ ಅವನು ನಿಂತಿದ್ದ ಸ್ಟೂಲ್ ಜಾರಿಹೋಗಿದೆ. ಹೀಗಾಗಿ, ಆತ ಅಕಸ್ಮಾತಾಗಿ ನೇಣಿಗೆ ಶರಣಾಗಿದ್ದಾನೆ ಎನ್ನಲಾಗಿದೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss