Wednesday, August 17, 2022

Latest Posts

ಮೈಸೂರು ಮೇಯರ್ ಸ್ಥಾನಕ್ಕೆ ಚುನಾವಣೆ ನಡೆಸುವ ಭರವಸೆ ನೀಡಿದ ಭೈರತಿ ಬಸವರಾಜು

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ದಿಗಂತ ವರದಿ ಮೈಸೂರು:

ಮೈಸೂರು ಮಹಾನಗರಪಾಲಿಕೆ ಮೇಯರ್ ಸ್ಥಾನಕ್ಕೆ ಚುನಾವಣೆ ನಡೆಸುವ ಕುರಿತು ಪರಿಶೀಲಿಸಿ ಕ್ರಮಕೈಗೊಳ್ಳುತ್ತೇನೆಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜು ನಗರಪಾಲಿಕೆಯ ಸದಸ್ಯರುಗಳಿಗೆ ಭರವಸೆ ನೀಡಿದರು.
ಶುಕ್ರವಾರ ಅಭಿವೃದ್ಧಿ ಕೆಲಸಗಳ ಪರಿಶೀಲನಾ ಸಭೆಗೆಂದು ನಗರಪಾಲಿಕೆಗೆ ಆಗಮಿಸಿದ ಸಚಿವರಿಗೆ
ನಗರಪಾಲಿಕೆ ಸದಸ್ಯರಾದ ಪ್ರೇಮಾ ಶಂಕರೇಗೌಡ, ಅಶ್ವಿನಿ ಅನಂತ್, ಶೋಭಾ ಸುನೀಲ್, ಎಚ್.ಎಂ.ಶಾAತಕುಮಾರಿ, ಎಂಎಸ್ ಶೋಭಾ, ಪಲ್ಲವಿ ಬೇಗಂ ಇತರೆ ಮಹಿಳಾ ಸದಸ್ಯರು ನಿಯೋಗ ಭೇಟಿ ಮಾಡಿ, ಮೇಯರ್ ಸ್ಥಾನಕ್ಕೆ ಚುನಾವಣೆ ನಡೆಸಬೇಕೆಂದು ಮನವಿ ಸಲ್ಲಿಸಿತು.
ಮೈಸೂರು ನಗರಪಾಲಿಕೆಯ 3ನೇ ಅವಧಿಯ ಮೇಯರ್ ಸ್ಥಾನವು ಮಹಿಳೆಯರಿಗೆ ಮೀಸಲಾಗಿದ್ದು, ಮೇಯರ್ ಆಗಿದ್ದ ರುಕ್ಮಿಣಿ ಮಾದೇಗೌಡ ಅವರ ಸದಸ್ಯತ್ವ ರದ್ದಾಗಿದೆ. ಈ ಕಾರಣ ಮೇಯರ್ ಸ್ಥಾನ ತುಂಬದೆ ಇರುವುದರಿಂದ, ಮಹಿಳಾ ವರ್ಗಕ್ಕೆ ಅನ್ಯಾಯವಾಗಿದೆ. ಹಾಗಾಗಿ ಶೀಘ್ರವಾಗಿ ದಿನಾಂಕ ಪ್ರಕಟಿಸಿ ಚುನಾವಣೆ ನಡೆಸಿ ಅಗತ್ಯ ಕ್ರಮಕೈಗೊಳ್ಳುವಂತೆ ಕೋರಿದರು.
ಇದಕ್ಕೆ ಸ್ಪಂದಿಸಿದ ಸಚಿವರು ಈಬಗ್ಗೆ ಪರಿಶೀಲಿಸಿ ಚುನಾವಣೆ ನಡೆಸುವ ಕುರಿತು ಕ್ರಮಕೈಗೊಳ್ಳುವ ಭರವಸೆ ನೀಡಿದರು. ಈ ನಡುವೆ ಶೋಭಾ ಸುನೀಲ್ ಅವರು, ನಗರ ಪಾಲಿಕೆಯಲ್ಲಿ ಸಭೆ ನಡೆಸಲಾಗುತ್ತಿದೆ. ಬೇರೆ ಬೇರೆ ಕಾರ್ಯಕ್ರಮ ಮಾಡಲಾಗುತ್ತಿದೆ. ಆದರೆ ಮೇಯರ್ ಚುನಾವಣೆ ಯಾಕೆ ನಡೆಸುತ್ತಿಲ್ಲವೆಂದು ಪ್ರಶ್ನಿಸಿದರು. ಇದರಿಂದ ಕುಪಿತಗೊಂಡಸಚಿವರು, ಸಭೆ ನಡೆಸುತ್ತೀರಾ ಅಂದ್ರೆ ಏನರ್ಥ? ಚುನಾವಣೆಯೇ ಬೇರೆ? ಅಭಿವೃದ್ಧಿ ಕಾರ್ಯಕ್ರಮಕ್ಕೆ ಸಭೆ ನಡೆಸಲೇ ಬೇಕು. ಮನವಿ ಕೊಟ್ಟಿದ್ದೀರಾ. ಕ್ರಮಕೈಗೊಳ್ಳುವೆ ಎಂದಿದ್ದೇನೆ ಅದೇ ರೀತಿಮಾಡುವೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!