ರಾಹುಲ್‌ ಗಾಂಧಿ ನೇತೃತ್ವದ ಭಾರತ್‌ ಜೋಡೋ ಯಾತ್ರೆ ಹರಿಯಾಣಕ್ಕೆ ರೀಎಂಟ್ರಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆ ಗುರುವಾರ ಸಂಜೆಗೆ ಉತ್ತರ ಪ್ರದೇಶ ಪೂರ್ಣಗೊಳಿಸಿ ಹರಿಯಾಣ ರಾಜ್ಯಕ್ಕೆ ಮರುಪ್ರವೇಶಿಸಿದೆ.
ಕಳೆದ ವರ್ಷ ಕನ್ಯಾಕುಮಾರಿಯಿಂದ ಆರಂಭವಾದ ಭಾರತ್ ಜೋಡೋ ಯಾತ್ರೆಗೆ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ನೇತೃತ್ವ ವಹಿಸಿದ್ದರು.

ಯಾತ್ರೆಯು ಜನವರಿ 3 ರಂದು ಉತ್ತರ ಪ್ರದೇಶವನ್ನು ಪ್ರವೇಶಿಸಿತು ಮತ್ತು ಶಾಮ್ಲಿ ಜಿಲ್ಲೆಯ ಐಲುಮ್‌ನಿಂದ ಪ್ರಾರಂಭವಾಯಿತು.
ಯಾತ್ರೆಯ ವೇಳೆ ರಾಹುಲ್ ಗಾಂಧಿಗೆ ಬೆಂಬಲವಾಗಿ ಸಾವಿರಾರು ಜನರು ಬೀದಿಗಿಳಿದಿದ್ದು ಕಂಡುಬಂತು. ಯಾತ್ರೆ ಸುಮಾರು 15 ಕಿ.ಮೀ ಕ್ರಮಿಸಿ ಉಂಚಗಾಂವ್ ತಲುಪಿತು.

ಗುರುವಾರ ಹರಿಯಾಣಕ್ಕೆ ಮರುಪ್ರವೇಶಿಸಿದ ಯಾತ್ರೆ ಜನವರಿ 5 ಮತ್ತು 10 ರ ನಡುವೆ ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ಹಾದು ಹೋಗಲಿದೆ.
ಯಾತ್ರೆಯು ಜನವರಿ 5 ರ ಸಂಜೆ ಉತ್ತರ ಪ್ರದೇಶದಿಂದ ಪಾಣಿಪತ್ ಜಿಲ್ಲೆಯ ಸನೌಲಿ ಖುರ್ದ್ ಗ್ರಾಮದ ಮೂಲಕ ಹರಿಯಾಣವನ್ನು ಪ್ರವೇಶಿಸಿತು.

ಶುಕ್ರವಾರ ಬೆಳಗ್ಗೆ ಸನೋಲಿ-ಪಾಣಿಪತ್ ರಸ್ತೆಯಿಂದ ಯಾತ್ರೆ ಪುನರಾರಂಭವಾಗಿ ಮಧ್ಯಾಹ್ನ ಪಾಣಿಪತ್‌ನಲ್ಲಿ ಸಾರ್ವಜನಿಕ ಸಭೆ ನಡೆಯಲಿದ್ದು, ರಾಹುಲ್ ಗಾಂಧಿ ಭಾಷಣ ಮಾಡಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!